Dec 9, 2019

ಮರಳಿ ಬ್ಲಾಗ್ ಲೋಕಕ್ಕೆ ಹತ್ತು ವರ್ಷದ ನಂತರ-ಒಂಟಿ ಬದುಕು

ಭಾನುವಾರದ ಬರಹ

ಒಂಟಿ ಬದುಕು

ಅಪ್ಪ ಹೋಗಿ ಇಪ್ಪತ್ತೆರೆಡು ವರ್ಷ ಅಯ್ತು
ಅಂದಿನಿಂದ ಅಮ್ಮ ಒಂಟಿಯಾಗಿ ಬಿಟ್ಟರು.
ಈ ಇಪ್ಪತ್ತೆರೆಡು ವರ್ಷ ಅಮ್ಮ
ಹೇಗೆ ಬದುಕು ಸವೆಸಿದರು ಎಂಬುದು
ಬರೀ ಊಹೆಯಾಗಿ ಉಳಿದಿಲ್ಲ
ನನಗೆ.
ಒಂಟಿ ಬದುಕಿನ ತೊಳಲಾಟವನ್ನು ನಾನು ಸ್ವತಃ ಅನುಭವಿಸಿದಾಗಲೆ
ಅದರ ಸಂಕಟ ಗೊತ್ತಾಗಿದ್ದು.
ಜೀವನದಲ್ಲಿ ತೆಗೆದುಕೊಂಡ ಕೆಲವು
ಬಾಲಿಶ ನಿರ್ಧಾರಗಳು
ಸಂತಸದಿಂದ
ಇದ್ದ ನನ್ನ ಬದುಕಿನಲ್ಲಿ
ಸುನಾಮಿ ಎಬ್ಬಿಸಿದವು.
ಮಕ್ಕಳ ಭವಿಷ್ಯಕ್ಕಾಗಿ
ಬಹಳ ದೂರ
ಬಂದುಬಿಟ್ಟೆ.
ಹಳೆಯದನ್ನೆಲ್ಲ ಮರೆತು
ಹೊಸ ದಾರಿಯಲ್ಲಿ ನಡೆಯುವ
ಪ್ರಯಾಣ ಆರಂಭಿಸಿದೆ.
ಬಂದು ಇನ್ನೂ ಇಪ್ಪತ್ತೆರೆಡು
ದಿನಾ ಕೂಡ ಅಗಿಲ್ಲ
ಹೆಂಡತಿ ಮಕ್ಕಳನ್ನು ಬಿಟ್ಟು
ಒಬ್ಬಂಟಿಯಾಗಿ
ದೂರದ ದೇಶದಲ್ಲಿ
ಬದುಕು ಕಟ್ಟಿಕೊಳ್ಳುವ ಅನಿವಾರ್ಯ....ಯಾತನೇ ಅನುಭವಿಸಿದವರೇ ಬಲ್ಲರು
ಅಂತಹದ್ದರಲ್ಲಿ
ಅಮ್ಮ ಇಪ್ಪತ್ತೆರೆಡು ವರ್ಷಗಳಿಂದ
ಹೇಗಿರಬಹುದು
ಒಬ್ಬಂಟಿಯಾಗಿ.

ಊರಲ್ಲಿ ಒಬ್ಬಳೇ ಹೇಗಿರುತ್ತಿಯಮ್ಮಾ
ನಮ್ಮೊಟ್ಟಿಗೇ ಆನಂದವಾಗಿ ಇರಬಹುದಲ್ಲ
ಎಂದು ಹಲವು ಬಾರಿ ಕೇಳಿದರೂ
ಸಮ್ಮತಿಸಲಿಲ್ಲ.
ಅವರ ಆಲೋಚನೆಗಳೇನೋ
ಗೊತ್ತಿಲ್ಲ....
ಕಷ್ಟದಿಂದ ಬೆಳೆದವರು
ಅವರು ಒಂಟಿತನವನ್ನೆ
ಇಷ್ಟಪಡುತ್ತಾರೆ...
ಯಾರನ್ನೂ ಅವಲಂಬಿಸದೇ
ಬದುಕುತ್ತಿದ್ದಾರೆ.
ಆದರೂ ಒಮ್ಮೊಮ್ಮೆ ಅವರ
ಸ್ವಾಭಿಮಾನದ ಮೇಲೆ ಬೇಸರವಾಗುತ್ತದೆ.
ಎಲ್ಲವೂ ಇದ್ದು ಎಲ್ಲರೂ ಇದ್ದು
ಯಾಕೀಗೆ ಜೀವಿಸುತ್ತಾರೆ ಎಂದು.
ಹಿರಿಯ ಮನಸ್ಸಿನ ತಲ್ಲಣಗಳೇನೋ
ಯಾರು ಬಲ್ಲರು.

ಇಲ್ಲಗೆ ಬರುವ ಮುನ್ನ
ಊರಲ್ಲಿದ್ದ ಅಮ್ಮನಿಗೆ ಫೋನ್ ಮಾಡಿ
ಹೀಗೆ ನಾನು ದೂರದ
ದೇಶಕ್ಕೆ ಹೊರಟಿದ್ದೇನೆ....
ಎಂದು ನೆಡೆದಿದ್ದನ್ನೆಲ್ಲಾ
ವಿವರಿಸಿದಾಗ ಸಂತಸ ನೋವುಗಳನ್ನು
ಒಟ್ಟಿಗೇ ವ್ಯಕ್ತಪಡಿಸಿದ್ದರು...
ಕಳೆದ ಒಂದು
ವರ್ಷದ ಅವಧಿಯಲ್ಲಿ
ನನ್ನ ಜೀವನದಲ್ಲಿ
ಆದ ಬೆಳವಣಿಗೆಗಳನ್ನು
ಸೂಕ್ಷ್ಮ ವಾಗಿ
ಅರಿತುಕೊಂಡಿದ್ದ ಅಮ್ಮ .....
ಒಳ್ಳೆಯದಾಗಲಿ ಹೋಗು
ನಿನ್ನ ಕಷ್ಟಗಳನ್ನು
ನೋಡಲಾಗುತ್ತಿರಲಿಲ್ಲ ಎಂದಿದ್ದರು.
ತಾತ್ಕಾಲಿಕವಾದರೂ
ಈ ಒಬ್ಬಂಟಿ ಬದುಕು
ಎಷ್ಟು ಕಠಿಣ
ಆದರೂ
ಅವರು ಇಷ್ಟು ವರ್ಷ
ಹೇಗಿದ್ದಾರೆ?

ಯಾರಾದರೂ
ಯಾಕೆ ಹೀಗಿದ್ದೀರಿ ಎಂದರೆ
ನನಗೇನಾಗಿದೆ
ನಾನು ಚೆನ್ನಾಗಿಯೇ ಇದ್ದೇನೆ
ಎನ್ನುವ ಅವರ ಮಾತು
ನನಗೆ
ಬದುಕಿನ ಪಾಠವನ್ನು
ಕಲಿಸುತ್ತದೆ
ಅವರು ಚೆನ್ನಾಗಿರಬೇಕು
ಸಂತೋಷ ದಿಂದಿರಬೇಕು
ನಮ್ಮ ಸಂತೋಷ
ನಮ್ಮೊಳಗೇ ಅಡಗಿದೆ
ಎನ್ನುವ ಸತ್ಯದ ಅನಾವರಣ.
Life Has to Move ಅಲ್ವಾ!
ಸಾಧಿಸುವವರಿಗೆ
ಸಾಧನೆಯೊಂದೇ
ಮುಖ್ಯವಾಗಬೇಕು
ಬದುಕಿನ ಹಾದಿಯಲ್ಲಿ
ತಿರುವುಗಳಿದ್ದೇ ಇರುತ್ತವೆ
U Turn ಗಳೂ ಬರುತ್ತವೆ
ಜರ್ನಿ ಸಾಗುತ್ತಿದೆ
ನನ್ನ ಒಂಟಿತನ
ಹೋಗಲಾಡಿಸುವ
ಮದ್ದು ಸಿಕ್ಕಿದೆ
ಅದು
ಒಳ್ಳೆಯ ಓದು
ಅನಿಸಿಕೆಗಳ ಬರಹ
ನಿಮ್ಮೊಂದಿಗೆ
ಒಡನಾಟ
ಮತ್ತೆ ಸಿಗೋಣ
ಭಾನುವಾರದ ಬರಹದೊಂದಿಗೆ
ವೀಕೆಂಡ್ ವಿತ್ ಶ್ರೀಧರ್
ಅಲ್ಲಿಯವರೆಗೆ
ಜಾಲಿಯಾಗಿ
ನಗ್ತಾ ನಗ್ತಾ
ಖುಷಿಯಾಗಿರಿ.
.
.
ನಿಮ್ಮ
ಶ್ರೀ

No comments: