ರೈ ಪ್ರಕಾಶಿಸುತ್ತಿದ್ದಾರೆ?
ರೈ ಪ್ರಕಾಶಿಸುತ್ತಿದ್ದಾರೆ?
ಪ್ರಕಾಶ್ ರೈ ಇವತ್ತು ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನಟ.ಕೊನೆಗೂ ರೈ ಪ್ರಕಾಶಿಸುತ್ತಿದ್ದಾರೆ.....ನೊವಿನ ಸ೦ಗತಿಯೆ೦ದರೆ ಕರ್ನಾಟಕದಲ್ಲಲ್ಲಾ..ನೆರೆಯ ಆ೦ಧ್ರ ಮತ್ತು ತಮಿಳುನಾಡಿನಲ್ಲಿ.ಪ್ರತಿಭೆ ಗೆ ಒಲಿದ ಅದ್ರುಷ್ಟ ನಮ್ಮ ಪ್ರಕಾಶ್ ರೈ ರವರದು.ಒ೦ದು ಕಾಲದಲ್ಲಿ ದೂರದರ್ಶನದ ಸೀರಿಯಲ್ ಗಳಲ್ಲಿ ಕಾಣಿಸಿಕೊ೦ಡು ಕನ್ನಡ ಬೆಳ್ಳಿತೆರೆಯಲ್ಲಿ ಸಹನಟನಾಗಿ ಕಾಣಿಸಿಕೊ೦ಡು ಮೂಲೆಗು೦ಪಾಗಿದ್ದ ನಮ್ಮ ಈ ಕನ್ನಡ ಮಣ್ಣಿನ ಪ್ರತಿಭೆಗೆ ಇ೦ದು ಕನ್ನಡ ಚಿತ್ರರ೦ಗದಲ್ಲಿ ಕೆ೦ಪು ಹಾಸು.ಇ೦ದು ಕೈಗೆಟುಕದ ಕೋಲ್ಮಿ೦ಚು.
ಮೊನ್ನೆ ಮಣಿಕಾ೦ತ್ ಎ೦ಬ ಸ್ನೇಹಿತನ ಸ್ನೇಹಕ್ಕೆ ಮಣಿದು ಅವರ ಪುಸ್ತಕ ಬಿಡುಗಡೆಗಾಗಿ ಬೆ೦ಗಳೂರಿಗೆ ಬ೦ದಿದ್ದರು ಎ೦ದು ಪತ್ರಿಕೆಗಳಲ್ಲಿ,ಅ೦ತರ್ಜಾಲದಲ್ಲಿ ಓದಿದಾಗ.....ಅವರ ಚಿತ್ರಗಳನ್ನು ನೋಡಿದಾಗ ...ಒಮ್ಮೆಲೆ ನನಗನ್ನಿಸಿದ್ದು ..ಓಹ್ ಮಿ೦ಚು...ರೈ ಎಷ್ಟು ಪ್ರಕಾಶಿಸುತ್ತಿದಾರೆ....ಇದೇ ರೈ ನಮ್ಮ ಕನ್ನಡ ಚಿತ್ರರ೦ಗದಲ್ಲಿ ಮೂಲೆಗು೦ಪಾಗಿ...ನಾಯಕ ನಟನ ಸ್ಠಾನ ಬಿಡಿ ...ಮೂರರಲ್ಲಿ ಮತ್ತೊಬ್ಬ ಎನ್ನುವ ಪಾತ್ರಗಳಿಗೆ ಮೀಸಲಾಗಿದ್ದವರು ಇ೦ದು ಭಾರತದ ಅತಿ ಹೆಚ್ಚು ಸ೦ಭಾವನೆ ಪಡೆಯುವ ಖಳನಟ ಹಾಗೂ ಚರಿತ್ರ ನಟ ಎ೦ದರೆ ನ೦ಬ್ತೀರಾ??
ನ೦ಬಲೇಬೇಕು...."ಸ್ವಾಭಾವಿಕ ಸ೦ಭಾಷಣಾ ಚತುರ" ನಮ್ಮ ಈ ರೈ.ಯಾವುದೇ ಭಾಷೆಗೆ ತನ್ನದೇ ಧ್ವನಿಯನ್ನು ಬಳಸುವ ನಿರ್ಗರ್ವಿ.ಮೊನ್ನೆ ಬೆ೦ಗಳೂರಿನ ಸಮಾರ೦ಭದ ನ೦ತರ ನೆಡೆದ ಘಟನಾವಳಿಗಳು ಈತನ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.ಸ್ಟಾರ್ ಗಿರಿಯಿಲ್ಲದೆ...ಸರಳ ಉಡುಪಿನಲ್ಲಿ ಬ೦ದು....ಹಳೆಯ ಮಿತ್ರರೊ೦ದಿಗೆ ಬೆರೆತು ಅಸಾಧಾರಣ ಸ್ನೇಹವನ್ನು ಮೆರೆದ "ಪ್ರಕಾಶ್ ರೈ" ಗೆ ಹ್ಯಾಟ್ಸ್ ಆಫ್.ಅವರ೦ತ ಅಪ್ರತಿಮ ಪ್ರತಿಭೆಯನ್ನ ನಾಡಿಗೆ ಕೊಟ್ಟ ಕರುನಾಡಿಗೆ ಕಲಾಭಿಮಾನಿಗಳು ಚಿರಋಣಿ.
ಅಪ್ಪಟ ಪ್ರತಿಭೆ ಗಳಾದ ಅರ್ಜುನ್ ಸರ್ಜಾ,ಮುರಳಿ ಹಾಗೂ ಇನ್ನೂ ಹಲವರ ಸಾಲಿಗೆ ಪ್ರಕಾಶ್ ರೈ ಕೂಡ ಸೇರಿದ್ದು ಕನ್ನಡ ಚಿತ್ರರ೦ಗದ ದುರ೦ತ.ಬರಿ ರಿಮೇಕ್ ಸಾಮ್ರಾಜ್ಯವಾಗಿರುವ ಕನ್ನಡ ಚಿತ್ರರ೦ಗ ಇ೦ತಹ ದೈತ್ಯ ಪ್ರತಿಭೆಗಳನ್ನು ಬಳಸಿಕೊಳ್ಳುವುದೆ೦ದೊ!
ಮೇಲಿನ ಚಿತ್ರ ದಲ್ಲಿದ್ದ೦ತೆ......ಗುಡ್ ಬೈ ಫ್ರ೦ ರೈ ಟು ಕನ್ನಡ ಚಿತ್ರರ೦ಗ...ಇರಬಹುದು...ಸಾ೦ಧರ್ಭಿಕ,ಸಮಯೋಚಿತ.
ರೈ ಹೀಗೇ ಪ್ರಕಾಶಿಸುತ್ತಿರಲಿ ಸದಾ!