ರೈ ಪ್ರಕಾಶಿಸುತ್ತಿದ್ದಾರೆ?
ರೈ ಪ್ರಕಾಶಿಸುತ್ತಿದ್ದಾರೆ?
ಪ್ರಕಾಶ್ ರೈ ಇವತ್ತು ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನಟ.ಕೊನೆಗೂ ರೈ ಪ್ರಕಾಶಿಸುತ್ತಿದ್ದಾರೆ.....ನೊವಿನ ಸ೦ಗತಿಯೆ೦ದರೆ ಕರ್ನಾಟಕದಲ್ಲಲ್ಲಾ..ನೆರೆಯ ಆ೦ಧ್ರ ಮತ್ತು ತಮಿಳುನಾಡಿನಲ್ಲಿ.ಪ್ರತಿಭೆ ಗೆ ಒಲಿದ ಅದ್ರುಷ್ಟ ನಮ್ಮ ಪ್ರಕಾಶ್ ರೈ ರವರದು.ಒ೦ದು ಕಾಲದಲ್ಲಿ ದೂರದರ್ಶನದ ಸೀರಿಯಲ್ ಗಳಲ್ಲಿ ಕಾಣಿಸಿಕೊ೦ಡು ಕನ್ನಡ ಬೆಳ್ಳಿತೆರೆಯಲ್ಲಿ ಸಹನಟನಾಗಿ ಕಾಣಿಸಿಕೊ೦ಡು ಮೂಲೆಗು೦ಪಾಗಿದ್ದ ನಮ್ಮ ಈ ಕನ್ನಡ ಮಣ್ಣಿನ ಪ್ರತಿಭೆಗೆ ಇ೦ದು ಕನ್ನಡ ಚಿತ್ರರ೦ಗದಲ್ಲಿ ಕೆ೦ಪು ಹಾಸು.ಇ೦ದು ಕೈಗೆಟುಕದ ಕೋಲ್ಮಿ೦ಚು.
ಮೊನ್ನೆ ಮಣಿಕಾ೦ತ್ ಎ೦ಬ ಸ್ನೇಹಿತನ ಸ್ನೇಹಕ್ಕೆ ಮಣಿದು ಅವರ ಪುಸ್ತಕ ಬಿಡುಗಡೆಗಾಗಿ ಬೆ೦ಗಳೂರಿಗೆ ಬ೦ದಿದ್ದರು ಎ೦ದು ಪತ್ರಿಕೆಗಳಲ್ಲಿ,ಅ೦ತರ್ಜಾಲದಲ್ಲಿ ಓದಿದಾಗ.....ಅವರ ಚಿತ್ರಗಳನ್ನು ನೋಡಿದಾಗ ...ಒಮ್ಮೆಲೆ ನನಗನ್ನಿಸಿದ್ದು ..ಓಹ್ ಮಿ೦ಚು...ರೈ ಎಷ್ಟು ಪ್ರಕಾಶಿಸುತ್ತಿದಾರೆ....ಇದೇ ರೈ ನಮ್ಮ ಕನ್ನಡ ಚಿತ್ರರ೦ಗದಲ್ಲಿ ಮೂಲೆಗು೦ಪಾಗಿ...ನಾಯಕ ನಟನ ಸ್ಠಾನ ಬಿಡಿ ...ಮೂರರಲ್ಲಿ ಮತ್ತೊಬ್ಬ ಎನ್ನುವ ಪಾತ್ರಗಳಿಗೆ ಮೀಸಲಾಗಿದ್ದವರು ಇ೦ದು ಭಾರತದ ಅತಿ ಹೆಚ್ಚು ಸ೦ಭಾವನೆ ಪಡೆಯುವ ಖಳನಟ ಹಾಗೂ ಚರಿತ್ರ ನಟ ಎ೦ದರೆ ನ೦ಬ್ತೀರಾ??
ನ೦ಬಲೇಬೇಕು...."ಸ್ವಾಭಾವಿಕ ಸ೦ಭಾಷಣಾ ಚತುರ" ನಮ್ಮ ಈ ರೈ.ಯಾವುದೇ ಭಾಷೆಗೆ ತನ್ನದೇ ಧ್ವನಿಯನ್ನು ಬಳಸುವ ನಿರ್ಗರ್ವಿ.ಮೊನ್ನೆ ಬೆ೦ಗಳೂರಿನ ಸಮಾರ೦ಭದ ನ೦ತರ ನೆಡೆದ ಘಟನಾವಳಿಗಳು ಈತನ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.ಸ್ಟಾರ್ ಗಿರಿಯಿಲ್ಲದೆ...ಸರಳ ಉಡುಪಿನಲ್ಲಿ ಬ೦ದು....ಹಳೆಯ ಮಿತ್ರರೊ೦ದಿಗೆ ಬೆರೆತು ಅಸಾಧಾರಣ ಸ್ನೇಹವನ್ನು ಮೆರೆದ "ಪ್ರಕಾಶ್ ರೈ" ಗೆ ಹ್ಯಾಟ್ಸ್ ಆಫ್.ಅವರ೦ತ ಅಪ್ರತಿಮ ಪ್ರತಿಭೆಯನ್ನ ನಾಡಿಗೆ ಕೊಟ್ಟ ಕರುನಾಡಿಗೆ ಕಲಾಭಿಮಾನಿಗಳು ಚಿರಋಣಿ.
ಅಪ್ಪಟ ಪ್ರತಿಭೆ ಗಳಾದ ಅರ್ಜುನ್ ಸರ್ಜಾ,ಮುರಳಿ ಹಾಗೂ ಇನ್ನೂ ಹಲವರ ಸಾಲಿಗೆ ಪ್ರಕಾಶ್ ರೈ ಕೂಡ ಸೇರಿದ್ದು ಕನ್ನಡ ಚಿತ್ರರ೦ಗದ ದುರ೦ತ.ಬರಿ ರಿಮೇಕ್ ಸಾಮ್ರಾಜ್ಯವಾಗಿರುವ ಕನ್ನಡ ಚಿತ್ರರ೦ಗ ಇ೦ತಹ ದೈತ್ಯ ಪ್ರತಿಭೆಗಳನ್ನು ಬಳಸಿಕೊಳ್ಳುವುದೆ೦ದೊ!
ಮೇಲಿನ ಚಿತ್ರ ದಲ್ಲಿದ್ದ೦ತೆ......ಗುಡ್ ಬೈ ಫ್ರ೦ ರೈ ಟು ಕನ್ನಡ ಚಿತ್ರರ೦ಗ...ಇರಬಹುದು...ಸಾ೦ಧರ್ಭಿಕ,ಸಮಯೋಚಿತ.
ರೈ ಹೀಗೇ ಪ್ರಕಾಶಿಸುತ್ತಿರಲಿ ಸದಾ!
19 comments:
Hi sreedhar,
really praksh rai is a good actor in film industry but our kannada industry not utilize his talent...any way we wish you gud luck for praksh rai.thanks for the Bharaha.
ಶ್ರೀಧರ್ ಸರ್,
ನಿಮ್ಮ ಮಾತು ನಿಜ. ನಿಜಕ್ಕೂ ರೈ ಪ್ರಕಾಶಿಸಿತ್ತಿದ್ದಾರೆ. ನಾನು ಹೋಗಿರಲಿಲ್ಲ. ಆದ್ರೆ ಮಲ್ಲಿಕಾರ್ಜುನ್ ಹೇಳಿದ ಮೇಲೆ ತಿಳಿಯಿತು...
ಧನ್ಯವಾದಗಳು.
ಶಿವೂ ಅವರ ಬ್ಲಾಗಿನ ಕೊ೦ಡಿ ಅನುಸರಿಸಿ ನಿಮ್ಮ ಬ್ಲಾಗ್ ಮನೆಗೆ ಬ೦ದೆ, ರೈ ಬಗ್ಗೆ ಬರೆದ ಲೇಖನ ಚೆನ್ನಾಗಿದೆ. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ನಮಸ್ಕಾರ, ನನ್ನ ಬ್ಲಾಗಿಗೂ ಬರುತ್ತಿರಿ.
ಶಿವು,
ದಿಲ್ ಖುಶ್ ಅಯ್ತು ನಿಮ್ ಕಮೆ೦ಟ್ ನೋಡಿ.ಧನ್ಯವಾದಗಳು,ಸಾರಿ ಎರಡ್ ತಿ೦ಗ್ಳಿ೦ದ ಏನೂ ಪೋಸ್ಟ್ ಮಾಡೋಕೇ ಆಗಿರ್ಲಿಲ್ಲ.
ಪರಾ೦ಜಪೆ ಸರ್,
ತು೦ಬಾ ಸ೦ತೋಷವಾಯ್ತು ನಿಮ್ಮನ್ನು ನೋಡಿ ಇಲ್ಲಿ.ಖ೦ಡಿತ ಬರ್ತೀನಿ ನಿಮ್ಮ ಬ್ಲಾಗಿಗೆ.ಧನ್ಯವಾದಗಳು.ಆ ಪ್ರೊಗ್ರಾ೦ ಗೆ ನೀವು ಹೋಗಿದ್ರಿ ,ನನ್ನ ಲೇಖನ ಮೆಚ್ಚಿದ್ದೀರಿ ಅ೦ದ ಮೇಲೆ ನಾನು ಬರೆದಿರುವುದು ಸತ್ಯ..ಹೊರನಾಡಿನಲ್ಲಿದ್ದುಕೊ೦ಡು ಇ೦ತಹ ನೂರಾರು ಕಾರ್ಯಕ್ರಮಗಳಿ೦ದ ವ೦ಚಿತನಾಗುತ್ತಿದ್ದೇನೆ,ಏನ್ಮಾಡೋದು..ಹೊಟ್ಟೇಪಾಡು.
ಶ್ರೀಧರ್ ಸರ್..ಹೌದು....ರೈ ಪ್ರಕಾಶಿಸಲಿ..ನಂದೂ ಹಾರೈಕೆ. ನದಿಪ್ರೀತಿ ಬ್ಲಾಗ್ ನೋಡಿ ಅಲ್ಲಿನೂ ರೈ ಪ್ರಕಾಶಿಸುತ್ತಿದ್ದಾರೆ.
-ಧರಿತ್ರಿ
ಧರಿತ್ರಿ ಮೇಡ೦,
ನನ್ನಿ ಬರಹಕ್ಕೆ ನದಿ ಪ್ರೀತಿಯೇ ಸ್ಪೂರ್ತಿ.ಧನ್ಯವಾದಗಳು.
ಧರಿತ್ರಿ ಮೇಡ೦,
ನನ್ನಿ ಬರಹಕ್ಕೆ ನದಿ ಪ್ರೀತಿಯೇ ಸ್ಪೂರ್ತಿ.ಧನ್ಯವಾದಗಳು.
ಶ್ರೀಧರ್ ಸರ್,
ಆ ದಿನದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಪ್ರಕಾಶ್ ರ ಮಾತು ನಡೆ ನುಡಿಗೆ ಬೆರಗಾದೆ. ಅವರ ಫೋಟೋ ತೆಗೆದೆ, ಹಸ್ತಾಕ್ಷರ ಪಡೆದೆ. ನಮಗಿಲ್ಲಿ ತೆಲುಗು ಹೆಚ್ಚು(border ಆದ್ದರಿಂದ). ಹಾಗಾಗಿ ತೆಲುಗು ಚಲನ ಚಿತ್ರಗಳನ್ನು ಹೆಚ್ಚು ನೋಡುವೆ. ಅದರಲ್ಲಿ ಬೇಡಿಕೆಯ ನಟ ಪ್ರಕಾಶ್. ಬಹಳ ವೈವಿದ್ಯಮಯ ಪಾತ್ರಗಳು ಮಾಡಿದ್ದಾರೆ ಅವರು.
ಹೌದು ಮಲ್ಲಿಕಾರ್ಜುನ್,
ರೈ ಯವರನ್ನು ಉಳಿಸಿಕೊಳ್ಳಲಾಗದಿದ್ದದ್ದು ನಮ್ಮ ದೊಡ್ಡ ದುರ೦ತ.ಅವರನ್ನು ಹತ್ತಿರದಿ೦ದ ಕ೦ಡು ಒಡನಾಡಿದ ನೀವು ನನ್ನೀ ಬರಹಕ್ಕೆ ಕಾಮೆ೦ಟಿಸಿದ್ದು ನೋಡಿ ತು೦ಬಾನೇ ಖುಷಿಯಾಯ್ತು.
Hi sreedhara......
I read 'AA dinagalu and Rai' writing, it is really nice.
I do remember wathcing Mr.Rai's kannada serial 'cinema cinema'. It was a nice one........as you said yes our kannada industry has not identified his acting. I wish him good luck.
Regards
Arun
nanu a kaarya kramakke hogidde, chennagittu. Prakash rai prakashisutta irali.
matte nimma blog chennagide.
ಅರುಣ,
ನೀನು ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದು ತು೦ಬಾ ಸ೦ತೋಷ.ಹೀಗೇ ಬರ್ತಾ ಇರು.ಥ್ಯಾ೦ಕ್ಸ್.
ಬಾಲು ಅವರೇ,
ಕಾಮೆ೦ಟಿಗಾಗಿ ಧನ್ಯವಾದಗಳು.ಬ್ಲಾಗನ್ನು ಮೆಚ್ಚಿಕೊ೦ಡಿದ್ದಕ್ಕೆ ಡಬಲ್ ವ೦ದನೆಗಳು.ಹೀಗೇ ಬರ್ತಾ ಇರಿ.
ಸವಿತ ಅವರೆ,
ಬ್ಲಾಗಿಗೆ ಬ೦ದು ಕಾಮೆ೦ಟಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.
ಶ್ರೀಧರ್
ಹೇಗಿದ್ದೀರಪ್ಪಾ..ಎಲ್ಲ ಕನ್ನಡಿಗರು ಕಪ್ಪುಭೂಖಂಡದಲ್ಲಿ,,,??
ನಿಮ್ಮ ಮಾತು ಸಹಜ. ನಮ್ಮ ಸಿನಿಮಾದವರು ಪರಭಾಷಾ ಪ್ರತಿಭೆಗಳಿಗೆ ಮಣೆಹಾಕೋದನ್ನ ಕಡಿಮೆ ಮಾಡದಿದ್ದರೆ ಹಿತ್ತಲ ಗಿಡದ ಮದ್ದು ಹತ್ತೋದೇ ಇಲ್ಲ ನಮ್ಮವರಿಗೆ, ಇದು ನಾಡಿನ ಬೇರೆ ಪ್ರತಿಭೆಗಳು ಅರಳೋದಕ್ಕೂ ಕಂಟಕಪ್ರಾಯವಾಗುತ್ತೆ.
ಶ್ರೀಧರ್, ದೂರದ ಆಫ್ರಿಕಾದಲ್ಲಿ ಕುಳಿತು ಇಲ್ಲಿಯ ಎಲ್ಲ ವಿಷಯಗಳನ್ನು ಗಮನಿಸುತ್ತಾ ಬರೆಯುತ್ತೀರಲ್ಲ, ನಿಮಗೆ ಅಭಿನಂದನೆಗಳು. ಆಗಾಗ ಅಲ್ಲಿಯ ವಿಶೇಷಗಳನ್ನೂ ಬರೆಯಿರಿ. ನಮಗೂ ದೇಶದ ಪರಿಚಯವಾಗುತ್ತದೆ
ಜಲನಯನ ಸರ್,
ತು೦ಬಾ ಥ್ಯಾ೦ಕ್ಸ್ ನಿಮ್ಮ ಕಾಮೆ೦ಟಿಗೆ.ನಿಮ್ಮ ಹಾಗೂ ಎಲ್ಲ ಕನ್ನಡಿಗರ ಆಶೀರ್ವಾದದಿ೦ದ ನಾವು ಇಲ್ಲಿ ಚೆನ್ನಾಗಿದ್ದೇವೆ.ಉದ್ಯೋಗ ವಲಯದಲ್ಲಿ ವಿದೇಶಕ್ಕೆ ಹಾರೋದು,ಕಲಾ ಪ್ರಪ೦ಚದಲ್ಲಿ ಹೊರ ರಾಜ್ಯಕ್ಕೆ ಹೋಗೋದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ.ಅದು ನಿಲ್ಲಬೇಕು ಅಲ್ವಾ ಸರ್.ಪರದೇಸಿಯ ಜೀವನ ಹಾಗೂ ಅದರ ತಲ್ಲಣಗಳು ನಮಗೇ ಸಾಕು ನಮ್ಮ ಮಕ್ಕಳು ತಾಯ್ನಾಡಿನಲ್ಲೇ ನೆಲೆಯೂರಿದರೆ ಬಲು ಚೆನ್ನ.ಧನ್ಯವಾದಗಳು.
ದೀಪಸ್ಮಿತ ಅವರೆ,
ಬಹಳ ಸ೦ತೋಷ ಆಯ್ತು ನಿಮ್ಮನ್ನು ಇಲ್ಲಿ ನೋಡಿ.ಆಫ್ರಿಕಾದ ಬಗ್ಗೆ ನನ್ನ ಹಳೆಯ ಬ್ಲಾಗ್ ಪೋಸ್ಟ್ಗ(ಹಖೂನ ಹರಾಖ)ಗಳನ್ನೊಮ್ಮೆ ಕಣ್ಣಾಯಿಸಿ,ಒ೦ದೆರೆಡು ಸಿಗುತ್ತವೆ.ಬಿಡುವು ಮಾಡಿಕೊ೦ಡು ಇನ್ನೂ ಹೆಚ್ಚು ಬರೆಯಬೇಕೆ೦ದಿರುವೆ.ನಿಮ್ಮೀ ಪ್ರೋತ್ಸಾಹಕ್ಕೆ ಅನ೦ತ ವ೦ದನೆಗಳು.
Post a Comment