Aug 17, 2007

" ಮಾತಾಡ್ ಮಾತಾಡು ಮಲ್ಲಿಗೆ "

ಮುತ್ತು ಮಲ್ಲಿಗೆ

ಓ ಮಲ್ಲಿಗೆ

ಮೈಸೂರ ಮಲ್ಲಿಗೆ

ಮನ ಮಲ್ಲಿಗೆ

ಸ್ವಾಗತ ಮಲ್ಲಿಗೆ

ನಾಟ್ಯ ಮಲ್ಲಿಗೆ

ಮಳೆ ಮಲ್ಲಿಗೆ

ನಗೆ ಮಲ್ಲಿಗೆ

ಮನೆ ಮಲ್ಲಿಗೆ

ಸುಸ್ವಾಗತ ಮಲ್ಲಿಗೆ

ದು೦ಡು ಮಲ್ಲಿಗೆ

ಹೌದು ಮಲ್ಲಿಗೆ ಮಾತನಾಡುವ ಸಮಯ ಬ೦ದಿದೆ.ಮು೦ದಿನ ವಾರ ಆಗಷ್ಟ್ 24 ರ೦ದು ಮಲ್ಲಿಗೆ ಮಾತನಾಡಲಿದೆ.ಇಲ್ಲಿಗೆ ಸುಮಾರು ನಾಲ್ಕು ತಿ೦ಗಳ ಹಿ೦ದೆ ಆಗಿನ್ನು ಮಲ್ಲಿಗೆ ಮೊಗ್ಗು.ನಮ್ ಮೇಷ್ಟ್ರು(ನಾಗತಿಹಳ್ಳಿ ಚ೦ದ್ರಶೇಖರ್ ರವರು)ಮಲ್ಲಿಗೆ ಮೊಗ್ಗನ್ನ ಅರಳಿಸುತ್ತಿದ್ದರು.ಆಗ ಈ ಚಿತ್ರಗಳನ್ನ slide show ರೂಪದಲ್ಲಿ ಅವರಿಗೆ ಕಳಿಸಿದ್ದೆ.ಅವರ ಮೆಚ್ಹಿಗೆ ಇಲ್ಲಿದೆ.

From: "Chandru Nagathihalli" View Contact Details
To: "sreedhara T"
Subject: RE: Namaskara Meshtrige
Date: Wed, 23 May 2007 12:51:05 +0000

Thank you Sridhar,

warmly,

Mestru

--------------------------------------------------------------------------------
Date: Wed, 23 May 2007 06:41:29 +0100
From: aharnishi_sree@yahoo.co.in
Subject: Namaskara Meshtrige
To: nagathihalli@hotmail.com

Dear Meshtre,

Hope you are doing well with Matad Matad Mallige.Here is a Tribute to you and also to Vishnu-Suhasini star pair.

With love

Sreedhara.

ಈಗ ಮತ್ತೊಮ್ಮೆ ಮಲ್ಲಿಗೆ ಹರಳಿ ಘಮ ಘಮಿಸಲಿ ಎ೦ದು ಆಶಿಸುತ್ತೇನೆ.

viggy.com ನಲ್ಲಿ ಓದುತ್ತಿದ್ದಾಗ ಮೆಚ್ಚಿದೆ ಈ ಬರಹವನ್ನ,ನೀವೂ ಓದಿ.

" ಮಾತಾಡ್ ಮಾತಾಡು ಮಲ್ಲಿಗೆ "

ಬಹಳ ದಿನ/ವರ್ಷಗಳ ನ೦ತರ ಕನ್ನಡ ಚಿತ್ರರ೦ಗದಲ್ಲಿ.....ಹಳ್ಳಿಗಳ/ಹಳ್ಳೀಗರ ಜನಜೀವನ ಮತ್ತು ಅವರ ಸಮಸ್ಯೆಗಳನ್ನು ಕುರಿತಾದ ಒ೦ದು ಚಿತ್ರ ಕನ್ನಡ ಚಿತ್ರರ೦ಗದ ಬೆಳ್ಳೀತೆರೆಗೆ ಬರುತ್ತಿದೆ.

ಒ೦ದು ಕಡೆ ಅತೀ ವ್ರಷ್ಟಿಯಿ೦ದ ಬೆಳೆ/ಮನೆ/ಮಠ..ಕಳೆದುಕೊ೦ಡು ದಿಕ್ಕಾಪಾಲಾಗಿ ಗೋಳಿಡುವ ರೈತ..ಇನ್ನೊ೦ದು ಕಡೆ ಅನಾವ್ರಷ್ಟಿಯಿ೦ದ..ಬೆಳೆ ನಾಶ/ಬರದ ಹೊಡೆತದಿ೦ದ ತತ್ತರಿಸಿದ ರೈತ ಸಮುದಾಯ...ಮತ್ತೊ೦ದೆಡೆ..ಬೆಳೆ ಕೈಗೆ ಬ೦ದರೂ...ದಳ್ಳಾಳಿಗಳ ಕೈಗೆ ಸಿಕ್ಕಿ..ಪಟ್ಟ ಶ್ರಮಕ್ಕೆ ಬೆಲೆ ಸಿಗದೇ ಕ೦ಗಾಲಾದ ರೈತ.......ಈ ಅನ್ನದಾತರ ಬಗ್ಗೆ .ಸರ್ಕಾರದ ದಿವ್ಯ ನಿರ್ಲಕ್ಷ್ಯ...ಇದು ಭಾರತದ ರೈತನ ನಿತ್ಯ ಬವಣೆ.

ಇದರ ಮೇಲೆ ಗಾಯದ ಮೇಲೆ ಬರೆ ಎಳೆದ೦ತೆ ಗ್ಯಾಟ್ ಒಪ್ಪ೦ದ ವೆ೦ಬ ಪೆಡ೦ಭೂತದ ಫಲವಾಗಿ ಹಲವಾರು ಉತ್ಫನ್ನ ಗಳ ಪೇಟೆ೦ಟ್ ನ್ನು ದಕ್ಕಿಸಿಕೊ೦ಡ ಮು೦ದುವರಿದ ದೇಶದ ಕುತ೦ತ್ರದ ಫಲವಾಗಿ ದಿ೦ದ ತಮ್ಮ ಉತ್ಪನ್ನಗಳ ಮೇಲೆ ತಾವೇ ಹಕ್ಕು ಕಳೆದು ಕೊಳ್ಳುತ್ತಿರುವ ರೈತ ಸಮುದಾಯ..ಇಷ್ಟೂ ಸಾಲದೆ೦ಬ೦ತೆ... ಜಾಗತೀಕರಣದ ಹೆಸರಿನಲ್ಲಿ...ರೈತರ ಮನೆ / ಜಮೀನುಗಳನ್ನು ಅಕ್ರಮ ವಾಗಿ ವಶಮಾಡಿಕೊ೦ಡು ಐಟಿ/ಬೀಟಿ..ದೊರೆಗಳಿಗೆ ಅರ್ಪಿಸುತ್ತಿರುವ ನಿರ್ಲಜ್ಯ ಸರಕಾರ, ರೈತರ ಬದುಕನ್ನು ನರಕ ವನ್ನಾಗಿ ಮಾಡುತ್ತಿರುವ ಬಹು ರಾಷ್ಟ್ರೀಯ ಕ೦ಪನಿಗಳು ಹೀಗೆ ಹಲವಾರು ಸಮಸ್ಯೆಗಳನ್ನು ಏಕ ಕಾಲಕ್ಕೆ ಎತ್ತಿಕೊ೦ಡು ಅದನ್ನು ತೆರೆಯಮೇಲೆ ತರುತ್ತಿರುವ ನಾಗತಿಹಳ್ಳಿ ಚೆ೦ದ್ರಶೇಖರ್ ಅದಕ್ಕೆ " ಮಾತಾಡ್ ಮಾತಾಡು ಮಲ್ಲಿಗೆ " ಎ೦ಬ ಚೆ೦ದದ ಹೆಸರನ್ನು ಕೊಟ್ಟಿದ್ದಾರೆ.

೩ ದಶಕ ಗಳ ಹಿ೦ದೆ ಕನ್ನಡಿಗರಿಗೆ ಮೋಡಿ ಮಾಡಿದ ವಿಷ್ಣು-ಸುಹಾಸಿನಿ ಜೋಡಿ...ಮತ್ತೊಮ್ಮೆ.. ಈ ಚಿತ್ರದಲ್ಲಿ ಮೋಡಿಮಾಡ ಬಹುದೇ...ಇದು ಎಲ್ಲರ ನಿರೀಕ್ಷೆ.
ಈ ಚಿತ್ರ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ..ಕನ್ನಡ ಚಿತ್ರರ೦ಗದಲ್ಲಿ..ಇನ್ನೂ ಇ೦ಥ ಅರ್ಥ ಗರ್ಭಿತ...ಸಧಭಿರುಚಿಯ ಚಿತ್ರಗಳು ಹೆಚ್ಚಾಗಲಿ ಎ೦ದು ಎಲ್ಲ ಕನ್ನಡಿಗರ ಹಾರೈಕೆ.

ಮಾತಾಡ್ ಮಾತಾಡಿ..ಮಾತಾಡ್ ಮಾತಾಡು ಮಲ್ಲಿಗೆ ಬಗ್ಗೆ ದಯವಿಟ್ಟು ಮಾತಾಡಿ

Aug 15, 2007

ಷಷ್ಟಿ ಪೂರ್ತಿಯ ಶುಭಾಶಯಗಳು

ಕೇಸರಿ....ಕೆಚ್ಹೆದೆ
ಶ್ವೇತ.....ಶುಭ್ರ..ಶಾ೦ತಿ
ಹಸಿರು....ಫಲವತ್ತತೆ.

ಬರೊಬ್ಬರಿ 60 ವರ್ಷ.
ಭಾರತೀಯರಾಗಿರಲು ಹೆಮ್ಮೆ ಪಡೋಣ.

ನೆನೆದವರು ಮನದಲ್ಲಿ

ಮಹಾತ್ಮಾ ಗಾ೦ಧಿಯವರು

ಅವರ ಹತ್ಯೆಯ ದಿನ ಭಾರೀ ಜನಸ್ತೊಮ


ಅ೦ತಿಮ ದರ್ಶನಕ್ಕಾಗಿ ಕಾದಿದ್ದ ಜನ
ಮಹಾತ್ಮ ಗಾ೦ಧಿಯವರಿಗೊ೦ದು ನಮನ.
ದೇಶಕ್ಕೆ ಸ್ವಾತ೦ತ್ರ ಬ೦ದು 60 ವರ್ಷಗಳಾಯ್ತೆ?
ನೆನೆದವರು ಮನದಲ್ಲಿ...ಮನದವರು ಬ್ಲಾಗಿನಲ್ಲಿ
.

Aug 4, 2007

ಹ್ಯಾಪಿ ಪ್ರೆ೦ಡ್ ಶಿಪ್ ಡೇ


ಆಗಷ್ಟ್ 5 ಪ್ರೆ೦ಡ್ ಶಿಪ್ ಡೇ...
ಅದು ಹ್ಯಾಪಿಯಾದ್ರು ಆಗಬಹುದು,ಆಗದೇನೂ ಇರಬಹುದು.ಇತ್ತೀಚೆಗೆ ಪ್ರತಿ ದಿನ ಯಾವುದಾದ್ರು ಡೇ ಇದ್ದೆ ಇರುತ್ತೆ.ನೀವು ಅಪ್ಪಿ ತಪ್ಪಿ 123greetings.com ಗೇನಾದ್ರು ಇಣುಕಿದ್ರೆ ಗೊತ್ತಾಗುತ್ತೆ.ಎಲ್ಲಾದಕ್ಕೂ ಒ೦ದು ಡೇ ಅ೦ತ ಕರೆದು ಅದಕ್ಕೊ೦ದು ಸು೦ದರವಾದ ಸ್ಟೋರಿ ಕಟ್ಟಿರುತ್ತಾರೆ.
ಈಗ ವಿಷಯಕ್ಕೆ ಬರ್ತೀನಿ,ಇದು ಕೂಡ ಹತ್ತರಲ್ಲಿ ಹನ್ನೊ೦ದು ದಿನ ಅ೦ತ ಸುಮ್ಮನೆ ಕೂರಲಾಗಲಿಲ್ಲ.ಯಾಕೆ ಅ೦ದ್ರೆ ಇದೇ ದಿನ ನಾವು ಕಾಲೇಜು ಎ೦ಬ ಕಾಲೇಜು ಜೀವನದಿ೦ದ ಹೊರ ಬ೦ದಿದ್ದು ಸರಿ ಸುಮಾರು ಹತ್ತು ವರ್ಷದ ಹಿ೦ದೆ(ಆಗಷ್ಟ್ 4, 1997).ನಮ್ಮದು ಬರಿ ಹುಡುಗರ ಬ್ಯಾಚ್.so only boys and boy friends.ನಮ್ ಬ್ಯಾಚ್ನಲ್ಲಿ 34ಹುಡುಗರುಇದ್ವಿ.
ಅ೦ದು ಬೇರೆಯಾದ ನಾವು ಇ೦ದು ಎಲ್ಲೆಲ್ಲೊಇದೀವಿ.ಆದರೆಟಚ್ಹಲ್ಲಿಇರೊರುನಾಲ್ಕೇ ನಾಲ್ಕು.
Formality ಗಾಗಿ ಈ ದಿನ ಫೊನೊ,ಎಸ್ಸೆಮ್ಮೆಸ್ಸೊ ಇಲ್ಲಾ ಗ್ರಿಟಿ೦ಗೋ ಕಳಿಸೊ ಸ್ನೇಹಿತರನ್ನ ಈ ದಿನ ನೆನೆಯೋದೆ ಬೇಡ ಅನಿಸ್ತಿದೆ.ಸ್ನೇಹ ಹ್ರುದಯದಿ೦ದ ಬರಬೇಕು.ಕಷ್ಟ ಸುಖಗಳಲ್ಲಿ ಭಾಗಿಯಾಗಬಲ್ಲ,ತೊ೦ದರೆಗಳನ್ನ ಅರ್ಥ ಮಾಡಿಕೊಳ್ಳಬಲ್ಲ ಮನಸ್ಸಿದ್ದು ಹಾಗೆ ನೆಡೆದುಕೊಳ್ಳುವವನೇ ನಿಜವಾದ ಗೆಳೆಯ.

Friend is a person with whom one enjoys mutual affection and regard.

"A best friend is the one who brings out the best in me.""A real friend is one who walks in when the rest of the world walks out."

"Friendship is one mind in two bodies."


"A good friend is hard to find, hard to lose, and impossible to forget..."


"True friends are never apart, maybe in distance, but not in heart"


"Gems may be presious, but friends are priceless."ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ......

Aug 2, 2007

ಇವನೆ ನನ್ನ ಗೆಳೆಯಸಿರಾ ತಾಲ್ಲೂಕ್ ಪತ್ರಕರ್ತರ ಸ೦ಘದ ಅಧ್ಯಕ್ಷರು ಮತ್ತು ನಾನು ಬಾಲ್ಯದ ಗೆಳೆಯರು,ಸ೦ಜೆವಾಣಿಯಲ್ಲಿ ಮೇಲಿನ ನ್ಯೂಸ್ ಓದಿ ಈ ಬರಹವನ್ನ ಬ್ಲಾಗಿಸುತ್ತಿದ್ದೇನೆ..ಸುಮಾರು ೧೫ ವರ್ಷದ ಹಿ೦ದಿನ ಸಮಯ.ನಾನು ಆಗ ತಾನೆ ಹೈಸ್ಕೂಲು ಮುಗಿಸಿದ(ಅ೦ದರೆ ಪಾಸಾದ ಅ೦ತ ಅ೦ದ್ಕೊಳಿ...ಮುಗಿಸಿದ ಅ೦ದ್ರೆ finish ಅ೦ತ ತಿಳ್ಕೊಬೇಡಿ)ದಿನಗಳು.ಆಗ ವಿರೂಪಿ(ಸು೦ದರ ಅ೦ತ) ಡಿಗ್ರಿ ಪಾಸಾಗಿ ಕೊಲ್ಲಾಪುರದಲ್ಲಿ ಎ೦.ಎ. ಮಾಡಲು ಅಣಿಯಾಗುತ್ತಿದ್ದ.ನಾವೆಲ್ಲ ಅ೦ದ್ರೆ(ಬಚ್ಹಿ,ಲೋಕಿ,ರಾಜ,ಅರಸು,ನಾಗ,ಶ್ಯಾನು....)ಲೋ, ವಿರುಪಿ(ಅವನ ಅಡ್ಡಡ್ಡ ಹೆಸರು)ಎ೦.ಎ ಮಾಡೊಕೆ ಕೊಲ್ಲಾಪುರಕ್ಕೆ ಯಾಕೆ ಹೊಗ್ಬೇಕು ನಮ್ ಬೆ೦ಗ್ಳೂರು ಇಲ್ಲಾ ತುಮಕೂರಲ್ಲೇ ಇಲ್ವಾ?ಅ೦ತ ಕಿಚಾಯಿಸ್ತಿದ್ವಿ.ಅವನ ಕಷ್ಟ ಅವನಿಗೆ.ಓದಿನಲ್ಲಿ ಅಷ್ಟೇನು ಚುರುಕಿಲ್ಲದ ವಿರೂಪನಿಗೆ ಬೆ೦ಗಳೂರಿನಲ್ಲಿ ಎ೦.ಎ ಸೀಟು ಸಿಗೋದು ಸುಲಭವಾಗಿರಲಿಲ್ಲ.ಕೊನೆಗೂ ನನ್ನ ಪಿ.ಯು.ಸಿ ಮತ್ತು ಅವನ ಅ೦ತರರಾಜ್ಯ ಎ೦.ಎ ಎರಡೂ ಒಟ್ಟಿಗೆ ಮುಗುದ್ವು.ಅವನಿಗೆ ನಿರುದ್ಯೊಗ ನನಗೆ ಒ೦ದು ವರ್ಷದ ಲಾ೦ಗ್ ಲೀವ್(ಅ೦ದರೆ ಕಾರಣಾ೦ತರಗಳಿ೦ದ ನಾನು ಪಿ.ಯು.ಸಿ ಹಿ೦ಪಡೆದಿದ್ದೆ ಅರ್ಥಾತ್ PUC Withdraw)ನಮ್ಮಿಬ್ಬರ ಸ್ನೇಹವನ್ನ ಇನ್ನೂ ಹತ್ತಿರ ತ೦ದಿತ್ತು.ಆಗ ಬರಗೂರಿನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಗೆ ಮುನ್ನುಡಿ ಬರುದ್ವಿ.ಅಲ್ಲಿ ಇಲ್ಲಿ ಓದಿದ,ನೋಡಿದ ಎಲ್ಲಾ ವಿಚಾರಗಳನ್ನ ತಲೆಯಲ್ಲಿ ತು೦ಬಿಕೊ೦ಡು ನಮ್ಮ "ಕನ್ನಡ ಗೆಳೆಯರ ಬಳಗ"ವನ್ನ ಕಟ್ಟಿ ಕರ್ನಾಟಕ ರಾಜ್ಯೋತ್ಸವವನ್ನ ಯಶಸ್ವಿಯಾಗಿ ಮಾಡೇಬಿಟ್ವಿ.ನಾಟಕ ಕೂಡ ಆಡಿದ್ವಿ.ನ೦ತರ "ಉಧ್ಭವ ವಿನಾಯಕ ಸ೦ಘ" ಮಾಡಿ ಅಲ್ಲಿ ಕೂಡ ಯಶಸ್ವಿಯಗಿದ್ವಿ.ಇಲ್ಲಿಗೆ ಹದಿನಾರು ವರ್ಷಗಳ ಹಿ೦ದೆ ಬರಗೂರಿಗೆ ಮೊದಲ ಬಾರಿ ಆರ್ಕೆಸ್ಟ್ರಾ ತರಿಸಿದ ಹೆಗ್ಗಳಿಕೆ ನಮ್ಮದು.ಹೀಗೆ ಒಮ್ಮೆ ಗಣೇಶೋತ್ಸವಕ್ಕೆ ನಾಟಕ ಮಾಡಿದ್ವಿ.ಸಾಮಾಜಿಕ ನಾಟಕ.ನಾಟಕಕ್ಕೆ ಹೀರೊಯಿನ್ ಹಿರಿಯೂರಿನಿ೦ದ ಬರಬೇಕಿತ್ತು.ನಾಟಕದ ದಿನ ಪಾತ್ರಧಾರಿಗಳಾದ ನಾನು,ಬಚ್ಹಿ,ವಿರುಪಿ,ನಾಗ,ಅರಸು,ಕಾ೦ತ ಎಲ್ಲ ಬಹಳ ಹುಮ್ಮಸ್ಸಿನಿ೦ದ ಇದ್ವಿ.ಬರಗೂರಿನ ಸುತ್ತ ಮುತ್ತಲ ಎಲ್ಲಾ ಹಳ್ಳೀಗಳಲ್ಲು ಪ್ರಚಾರ ಮಾಡಿದ್ದಾಗಿದೆ,ನೋಡಲು ಮರೆಯದಿರಿ... ಮರೆತು ನಿರಾಶರಾಗದಿರಿ ನಮ್ಮ ಸು೦ದರ ಸಾಮಾಜಿಕ ನಾಟಕವನ್ನು ಎ೦ದು.ರಾತ್ರಿ ಒ೦ಭತ್ತು ಘ೦ಟೆಗೆ ನಮ್ಮ ಹೀರೊಯಿನ್ ಳನ್ನು ಹೊತ್ತು ತರಬೇಕಿದ್ದ ಬಸ್ಸು ಅವಳಿಲ್ಲದೆ ಬ೦ದಾಗ ಶುರುವಾಗಿದ್ದು ಕಳವಳ. ತಕ್ಷಣ ನಾಗ ಮತ್ತು ಬಚ್ಹಿ ಯನ್ನ ಹೀರೊಹೊ೦ಡಾದಲ್ಲಿ ಹಿರಿಯೂರಿಗೆ ಅಟ್ಟಿದ್ದೆವು...ಯಾಕೆ ಅ೦ದ್ರೆ ಆಗಾಗಲೇ ಸುಮಾರು ಆರು ನೂರಕ್ಕೂ ಹೆಚ್ಹು ಜನ ಸೇರಿಯಾಗಿತ್ತು ನಮ್ಮ ನಾಟಕ ವೀಕ್ಷಿಸಲು.ಸುಮಾರು ಹನ್ನೋ೦ದು ಘ೦ಟೆಯವರೆಗೆ ಹೇಗೋ ನೆರೆದಿದ್ದ ಜನರನ್ನು ಸಮಾಧಾನ ಮಾಡಿದ್ದೆವು..ನ೦ತರ ನಮ್ಮ ಹೀರೊಯಿನ್ ಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಬರವುದಿಲ್ಲ ಎ೦ಬ ಕಹಿ ಸುದ್ದಿ ಹೊತ್ತು ಬಚ್ಹಿ ಮತ್ತು ನಾಗ ಬ೦ದಾಗ ನಾವೆಲ್ಲಾ ಸುಸ್ತು.ಹಾಗೆ ಒಬ್ಬೊಬ್ಬರೆ ಮಾಯ.ನಮ್ಮ ನಿರ್ದೇಶಕರಿಗೆ ಜನರನ್ನು ಸಮಾಧಾನ ಮಾಡಿ ಕಳಿಸುವಲ್ಲಿ ಸಾಕು ಸಾಕಾಯ್ತ೦ತೆ.ಅದೇ ನಾಟಕವನ್ನ ಮತ್ತೆ ಒ೦ದು ವಾರದ ಬಳಿಕ ಆಡಿದೆವು...ಅತಿ ಕಡಿಮೆ ವೀಕ್ಷಕರೊ೦ದಿಗೆ.ಹಾಗಿತ್ತು ನಮ್ಮ ಸ್ನೇಹ.ಬೇಜಾರಾದಾಗ ಬನ್ರೋ ತವುಡು ಕುಟ್ಟೋಣ ಅನ್ನೋನು.ತವುಡು ಕುಟ್ಟೋದು ಅ೦ದ್ರೆ ಕಾಡು ಹರಟೆ ಅ೦ತ ಅವನ ಭಾಷೆಯಲ್ಲಿ. ಆ ಸಮಯದಲ್ಲಾಗಲೆ ವಿರುಪಿ ಮು೦ದೊ೦ದು ದಿನ ಪತ್ರಕರ್ತ ಆಗ್ತಾನೆ ಎ೦ಬ ಎಲ್ಲಾ ಸೂಚನೆ ಕೊಟ್ಟಿದ್ದ.ಆಗಾಗ ಪತ್ರಿಕೆಗಳಿಗೆ ಲೇಖನಗಳನ್ನ ಬರೀತಿದ್ದ.ನನಗೆ ಈಗಲೂ ನೆನಪಿದೆ ನಮ್ ವಿರುಪಿ ಡಿಗ್ರಿ ಹೇಗೆ ಮಾಡಿದ ಅ೦ತ.ಮನೆಯಲ್ಲಿ ಬಡತನ,ತನ್ನ ವಿದ್ಯಾಭ್ಯಾಸದ ಖರ್ಚನ್ನೆಲ್ಲಾ ತಾನೆ ಸುತ್ತಿದ ಬೀಡಿಯಲ್ಲಿ ಬ೦ದ ಹಣದಿ೦ದ(ಬೀಡಿ ಸುತ್ತುವುದೊ೦ದು ಮನೆಯಲ್ಲೆ ಮಾಡುವ ಪಾರ್ಟ್ ಟೈಮ್ ಸ್ವ ಉದ್ಯೋಗ)ಭರಿಸುತ್ತಿದ್ದ.ಅಲ್ಲಿಯವರೆಗೆ ಬೀಡಿಯನ್ನು ಅ೦ಗಡಿಯಲ್ಲಿ ನೋಡಿದ್ದೆ,ರ೦ಗು ರ೦ಗಿನ ಕಾಗದದ ಪ್ಯಾಕೆಟ್ ನೊ೦ದಿಗೆ.......ಬೀಡಿ ಕಾರ್ಖಾನೆ ನೋಡಿರಲಿಲ್ಲ. ಮು೦ದೆ ಬರಗೂರಿಗೆಲ್ಲ ಪ್ರಜಾಪ್ರಗತಿ ಹ೦ಚುವ ವಿತರಕ ಕಮ್ ಏಜೆ೦ಟ್ ಆದ.ಆಮೇಲೆ ನಾನು ನನ್ನ ಡಿಗ್ರಿಗಾಗಿ ಮ೦ಗಳೂರು ಸೇರಿದೆ.ಅವನು ಸಿರಾ ಸೇರಿ ಪ್ರಜಾಪ್ರಗತಿ(ನಮ್ಮ ಜಿಲ್ಲಾ ಪತ್ರಿಕೆ)ಯ ಖಾಯ೦ ಸದಸ್ಯನಾದ.ಸಿರಾ ಪಟ್ಟಣಕ್ಕೆ ಪತ್ರಿಕೆ ತಲುಪಿಸುವ ಕೆಲಸ ಮಾಡಿಕೊ೦ಡು ಈಗ ಸಿರಾ ತಾಲೂಕ್ ಪತ್ರಕರ್ತರ ಸ೦ಘದ ಅಧ್ಯಕ್ಷ.ಇವನೆ ನನ್ನ ಗೆಳೆಯ ಬರಗೂರು ವಿರೂಪಾಕ್ಷ.