Dec 20, 2019

ಬದುಕಲಿ ಕಲಿ-ಬದುಕಲು ಕಲಿ

ಬದುಕಲಿ ಕಲಿ-ಬದುಕಲು ಕಲಿ

ನಿಮಗೆಲ್ಲಾ ಗೊತ್ತಿರುವ ಹಾಗೇ
ಅಚಾನಕ್ಕಾಗಿ
ಕೀನ್ಯಾಗೆ ಬಂದೆ
ಮೂರು ವಾರಗಳಾಗಿದೆ
ಪರಿಸ್ತಿತಿಗೆ ಹೊಂದಿಕೊಳ್ಳುವ
ಪ್ರಯತ್ನ ಮಾಡ್ತಾ ಇದ್ದೇನೆ.
ಭಗವದ್ಗೀತೆ ಯನ್ನು ಓದಲು
ಪ್ರಾರಂಭಿಸಿದ್ದೇನೆ
ಅದಲ್ಲದೇ ನನ್ನಿಷ್ಟದ
ಬರಹಗಾರರನ್ನು ಓದಲು
ಶುರು ಮಾಡಿದ್ದೇನೆ
ಅದರಲ್ಲೂ
ನಮ್ಮ ಮಣಿಯಣ್ಣನ
"ನವಿಲು ಗರಿ"
ತುಂಬಾ ಅಪ್ತವೆನಿಸುತ್ತಿದೆ
ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವ ಹಾಗೆ
ನಾವಿಲ್ಲಿ ನೆಪ ಮಾತ್ರ
ಬದುಕನ್ನು ಬಂದ ಹಾಗೆ
ಸ್ವೀಕರಿಸಬೇಕು
ಅದರ ಉದ್ದೇಶ ಮುಖ್ಯವೇ
ಹೊರತು
ನಾವನುಭವಿಸುವ
ಯಾತನೆಯಲ್ಲ.
ಎಲ್ಲಾ ಮನುಜನಿಗೂ
ಬರುವ ಹಾಗೆ ಕಷ್ಟ
ಕಾರ್ಪಣ್ಯಗಳು
ನಮಗೂ ಬರುತ್ತವೆ.
ಹಿಂದೆ ನೆಡೆದುದರ ಬಗ್ಗೆ
ಹೆಚ್ಚು ಆಲೋಚಿಸಿ ಫಲವಿಲ್ಲ.
ನಾವಿಲ್ಲಿ ನಿಮಿತ್ತ ಮಾತ್ರ.
ನಾಳೆ ಏನಿರಬಹುದು
ಎನ್ನುವ
ಭಯಕ್ಕಿಂತ ನಾಳೆ ಹೀಗಿರಬೇಕು
ಎಂದು ಬದುಕಬೇಕು.
ಇಲ್ಲಿನ ಜನ ಜೀವನ
ಅವರು ಬದುಕುತ್ತಿರುವ
ರೀತಿ ನೋಡಿದ್ರೆ
ಆ ದೇವರು ನಮ್ಮನ್ನು
ಚೆನ್ನಾಗಿಯೇ ಇಟ್ಟಿದ್ದಾನೆ
ಎನಿಸುತ್ತದೆ
ಸರಿಯಾದ ರಸ್ತೆಗಳಿಲ್ಲ
ಮನೆಗಳಿಲ್ಲ
ಕುಡಿಯುವ ನೀರಿನ ವ್ಯವಸ್ತೆ ಇಲ್ಲ.
"ಕೀನ್ಯಾ'ದ ರಾಜಧಾನಿಯಾದ
"ನೈರೋಬಿ"ಯಿಂದ
ಸುಮಾರು ಐದು ನೂರು
ಕಿಲೋಮೀಟರ್ ದೂರದ
"ಲೇಕ್ ವಿಕ್ಟೋರಿಯಾ"
ದಡದಲ್ಲಿನ
ಒಂದು ಹಳ್ಳಿ ಇದು
"ಹೋಮಾ ಬೇ" ಕೌಂಟಿ ಯಲ್ಲಿನ
"ಬೀಟಾ"ಎಂಬ ಸಣ್ಣ ಊರು.
ವಿಕ್ಟೋರಿಯಾ ಸರೋವರವು
ಸುಮಾರು ಆರು ನೂರು ಕಿ.ಮೀ
ಚದುರ ಳತೆಯ
ಪ್ರಪಂಚದ ಎರಡನೇ ಅತಿ ದೊಡ್ಡ
ಸಿಹಿ ನೀರ ಸರೋವರ.
ಅದರಲ್ಲಿ ನೈಸರ್ಗಿಕವಾಗಿ
ಬೆಳೆಯುವ
ನೈಲ್ ಪರ್ಚ್ ಎನ್ನುವ
ಮೀನು ಇವರುಗಳ
ಜೀವನಾಧಾರ.
ಬೀಟಾ ದಿಂದ ಮೂರು
ಕಿಲೋಮೀಟರ್ ದೂರದಲ್ಲಿ
ನಾನೀಗ ಕೆಲಸ ಮಾಡುತ್ತಿರುವ
ಮೀನು ಸಂಸ್ಕರಿಸಿ ರಫ್ತು
ಮಾಡುವ ಕಂಪನಿ
ಇರುವುದು.
ಬೆಳಗಿನ ಜಾವ
ಐದು ಗಂಟೆಗೆ ಅಲ್ಲಿಗೆ
ನೆಡೆದುಕೊಂಡೇ
ಕೆಲಸಕ್ಕೆ ಬರುವ
ಇಲ್ಲಿನ ಜನಗಳು
ಅವರ ಆರ್ಥಿಕ ಪರಿಸ್ಥಿತಿ
ನೋಡಿದರೆ
ಪ್ರಪಂಚದಲ್ಲಿ
ಇನ್ನೂ ಎಷ್ಟೆಲ್ಲಾ ಕಷ್ಟಗಳಿವೆ
ಎರಡೊತ್ತಿನ
ಊಟಕ್ಕೂ ಪರಿತಪಿಸುವ
ಅಸಹಾಯಕತೆ.
ನಾನೂ ಬಂದಿರುವುದು
ಅದಕ್ಕೇ ಅಲ್ಲವೇ
ನಮಗೆ
ಎಲ್ಲಾ ಇದ್ದು
ಇಲ್ಲದುದರ ಬಗ್ಗೆ ಚಂತೆ
ಅವರಿಗೆ
ಎರಡೊತ್ತಿನ
ಊಟದ ಚಿಂತೆ
ನಾಳೆಯ ಅರಿವಿಲ್ಲ
ಅಷ್ಟಾಗಿ ಅನುಕೂಲಗಳಿಲ್ಲ
ಸವಲತ್ತುಗಳಿಲ್ಲ
ಸ್ವಾವಲಂಬನೆ ಇಲ್ಲ.
ಇಲ್ಲಿನ ಸರಕಾರಗಳೂ
ಅವರ ಬಗ್ಗೆ ಹೆಚ್ಚು
ಕಾಳಜಿ ವಹಿಸೋಲ್ಲ
ವ್ಯವಸಾಯದ ಅರಿವಿಲ್ಲ.
ಅತಿ ಚಿಕ್ಕ ದೇಶವಾದ
"ಇಸ್ರೇಲ್" ಇಂದು
ಅಗ್ರಿಕಲ್ಚರ್ ನಲ್ಲಿ
ಮಹತ್ತರವಾದ ಸಾಧನೆ
ಮಾಡಿರುವಾಗ
ಇವರಿಗೇಕೆ ಸಾಧ್ಯವಿಲ್ಲ.
ಆಫ್ರಿಕಾ ಒಂದು
ಕಗ್ಗತ್ತಲ ಖಂಡ
ಎಂದು ನಲವತ್ತು ವರ್ಷದ
ಹಿಂದಿನಿಂದ
ಓದಿಕೊಂಡು ಬಂದಿರುವೆ
ಇವತ್ತಗೂ ಹಳ್ಳಿಗಳಲ್ಲಿ
ವಿದ್ಯುತ್ ವ್ಯವಸ್ತೆಯಿಲ್ಲ
ಶಾಲೆಗಳಿಲ್ಲ.
ಎಂದು ಬದಲಾಗುವುದು
ಸರಿಯಾದ ನಾಯಕತ್ವದ
ಕೊರತೆ ಎದ್ದು ಕಾಣುತ್ತದೆ
ಸಂಪನ್ಮೂಲಗಳ ಬಳಕೆಯನ್ನು
ಸಂಪೂರ್ಣವಾಗಿ
ಕಡೆಗಣಿಸಿದಂತಿದೆ.
ಫಲವತ್ತಾದ ಭೂಮಿಯಿದೆ
ನೀರಿದೆ
ಇವರು ಮನಸ್ಸು ಮಾಡಿದ್ರೆ
ಕಾಲು ಪ್ರಪಂಚಕ್ಕೇ
ಆಹಾರ ರಪ್ತು ಮಾಡಬಹುದು.
ಇರುವ ಮಾನವ
ಸಂಪನ್ಮೂಲಕ್ಕೆ
ಸರಿಯಾದ
ಮಾರ್ಗದರ್ಶನದ ಅವಶ್ಯ ಕತೆ ಇದೆ.
ಯಾರು ಮಾಡಬಲ್ಲರು
ಎನ್ನುವುದೇ ದೊಡ್ಡ ಪ್ರಶ್ನೆ.
ಅವರ ದೈನಂದಿನ ಶ್ರಮ
ನೋಡಿ
ಅವರ ಉಲ್ಲಾಸ ಕಂಡು
ಬದುಕಲಿ ಕಲಿ
ಬದುಕಲು ಕಲಿ
ಎಂದು ಎಚ್ಚರಿಸಿದಂತಿದೆ
ಜೀವನ.
ಹ್ಯಾಟ್ಸ್ ಆಫ್ ಟು ಲೈಫ್
ಅದು ನಿರಂತರ.
ನೆಡೀಲಿ ಹೀಗೆ
ನಗ್ತಾ ಇರಿ
ಖುಷಿ ಖುಷಿಯಾಗಿ
ಬದುಕನ್ನು ಆಸ್ವಾದಿಸಿ
ಅಂತ ಹೇಳ್ತಾ
ಸೈನಿಂಗ್ ಆಫ್
ಪ್ರಂ ವೀಕೆಂಡ್ ವಿತ್ ಶ್ರೀಧರ್
ಮತ್ತೆ ಸಿಗೋಣ.

ನಿಮ್ಮ.....ಶ್ರೀ






No comments: