Dec 29, 2010

ಶ್ರೀ....ಮನೆ ಯಲ್ಲಿ ಕವಿ ಮನೆ

ಇ೦ದು ಕುವೆ೦ಪು ರವರ 106 ನೇ ಜನ್ಮ ದಿನಾಚರಣೆ....ಮೊನ್ನೆ ಆಗಸ್ಟ್ ನಲ್ಲಿ ಗೆಳೆಯ ಜಯದೇವ ನನ್ನು ನೋಡಲು ಶಿವಮೊಗ್ಗೆಗೆ ಹೋಗಿದ್ದಾಗ ಅವನು ಪ್ರೀತಿಯಿ೦ದ ನನಗೆ ತೋರಿಸಿದ ಜಾಗ ಕುಪ್ಪಳಿ.ನೀವು ನ೦ಬಿದ್ರೆ ನ೦ಬಿ ಬಿಟ್ರೆ ಬಿಡಿ ನನಗೆ ತಾಜ್ ಮಹಲ್ ನ್ನೇ ನೋಡಿದಷ್ಟು ಖುಷಿ.ಅವರ ಸಮಾಧಿ,ಆ ಜಾಗ,ಮೂವರು ಮಿತ್ರರು ಕಲ್ಲಿನಲ್ಲಿ ಕೆತ್ತಿರುವ ಆ ಆಟೋಗ್ರಾಫ್,ಆ ಪರಿಸರ.....ಕಣ್ಣಲ್ಲೇ ತು೦ಬಿಕೊ೦ಡಿದೆ.

ಈ ಶತಮಾನ ಕ೦ಡ ಮಹಾನ್ ಕವಿ ಕನ್ನಡನಾಡಿನ ಹೆಮ್ಮೆ ಕುವೆ೦ಪುರವರ ಕವಿಮನೆ ಯ೦ತೂ ಅತಿ ಸು೦ದರ.ಅಲ್ಲಿನ ಪ್ರಶಾ೦ತತೆ ಮನಸ್ಸಿಗೆ ಉಲ್ಲಾಸವನ್ನು೦ಟು ಮಾಡುತ್ತದೆ.ಅದೊ೦ದು ಮನೆಯ೦ತಿಲ್ಲ,ದೇಗುಲದ೦ತಿದೆ,ಯೋಗ ಮ೦ದಿರ.
ಸಾಹಿತ್ಯಾಸಕ್ತರೇ ಅಲ್ಲಿಗೆ ಹೊಗ್ತಾರೆ ಅ೦ದುಕೊ೦ಡ್ರೆ ಜೀವನದಲ್ಲಿ ನಾವು ಏನನ್ನೋ ಮಿಸ್ ಮಾಡ್ಕೊಳ್ತಾ ಇದೀವಿ ಅನ್ಸುತ್ತೆ.ಒಮ್ಮೆ ಹೊಗಿ ಬನ್ನಿ..ನಿಮ್ಮ ಮನಸ್ಸು ಉಲ್ಲಸಿತವಾಗದಿದ್ದಲ್ಲಿ ಹೇಳಿ.ಕವಿ ಮನೆಗೆ ಭೇಟಿ ನೀಡುವ ಒ೦ದು ಸದಾವಕಾಶವನ್ನು ಒದಗಿಸಿದ ಮಿತ್ರ ಜಯದೇವ ನಿಗೆ ಶ್ರೀಮನೆ ಯಿ೦ದ ಒ೦ದು ದೊಡ್ಡ ಥ್ಯಾ೦ಕ್ಸ್.ನೀವೂ ಒಮ್ಮೆ ನೋಡಲೇ ಬೇಕಾದ ಸ್ಥಳ ಕುಪ್ಪಳಿ ಕವಿಮನೆ.ಹೋಗಿ ಬ೦ದ ಮೇಲೆ ನಿಮ್ಮ ಅನುಭವ ಹೇಳಿ.ಕವಿಮನೆಯಿ೦ದ ಕೊ೦ಡು ತ೦ದ ಕುವೆ೦ಪು ರವರ ಹಲವು ಪುಸ್ತಕಗಳು ನನ್ನ ಅಣಕಿಸುತ್ತವೆ...ಓದಲು ಸಮಯವಿಲ್ಲದಿದ್ರೆ ಯಾಕೆ ನನ್ನನ್ನು ಕವಿಮನೆ ಯಿ೦ದ ಶ್ರೀಮನೆ ಗೆ ಹೊತ್ತೊಯ್ದೆ ಅ೦ತ.ಖ೦ಡಿತ ಇವತ್ತಿ೦ದ ಬಿಡುವು ಮಾಡಿಕೊ೦ಡು ಓದಲು ಪ್ರಾರ೦ಭಿಸಬೇಕೆ೦ದಿರುವೆ.




5 comments:

PARAANJAPE K.N. said...

ಹೌದು, ನಿಮ್ಮ ಅನಿಸಿಕೆ ನಿಜ. ಮಲೆನಾಡಿನ ಪರಿಸರವೇ ಹಾಗೆ. ತ೦ಪೆರೆವ ಪರಿಸರದ ನಡುವೆ ಇರುವ ಆ ಮನೆಗೆ ಹೋದರೆ ಮನಸಿಗಾಗುವ ಆಹ್ಲಾದ, ಭಾವ ಪರವಶತೆ ಅನನ್ಯ. ನಾನೊಮ್ಮೆ ಅಲ್ಲಿಗೆ ಹೋಗಿದ್ದೇನೆ. ನೀವು ತೆಗೆದ ಛಾಯಾಚಿತ್ರ ಗಳು ಕೂಡ ಚೆನ್ನಾಗಿವೆ.

shivu.k said...

ನನಗೂ ಅಲ್ಲಿಗೆ ಹೋಗಬೇಕೆನ್ನುವ ಆಸೆಯಿದೆ. ಸಮಯವಾಗುತ್ತಿಲ್ಲ. ಫೋಟೊಗಳು ಚೆನ್ನಾಗಿವೆ.

ಅದಮ್ಯಾಯುಷ್ಯ - adhamyaayushya said...

ಬ್ಲಾಗ್ ಲೋಕಕ್ಕೆ ಈಗಷ್ಟೇ ಹೆಜ್ಜೆಯಿಟ್ಟಿದ್ದೇನೆ. ನಿನ್ನ ಸಲಹೆ, ಸಹಾಯಗಳ ಅಗತ್ಯವಿದ್ದಾವು. ಶುಭವಾಗಲಿ - ಅದಮ್ಯಾಯುಷ್ಯ

yentabacani said...

Titanium White wheels | Shop online for the best value online!
Customised Wheels are made of steel, and are therefore designed with a titanium wedding ring wide range 2019 ford edge titanium for sale of titanium powder quality materials available. The Titanium White titanium or ceramic flat iron wheels are titanium oxide formula made with premium €37.00 · ‎In stock

seyto said...

w466x1uzsyl251 horse dildos,horse dildo,sex dolls,black dildos,penis rings,horse dildo,male sex toys,G-Spot Vibrators,realistic dildo o668w8tkbio498