ಬಾಲ್ಯ್ದ ದ ಆಟ ಆ ಹುಡುಗಾಟ
ಬಾಲ್ಯ್ದ ದ ಆಟ ಆ ಹುಡುಗಾಟ
ಜಿಗಿದು ಜಿಗಿದು
ಬಾಲ್ಯವ ಮೊಗೆದು
ಅಳೆದು ಸುರಿದು.
ಆಡಿದ್ದೇ ಆಡಿದ್ದು
ಮಾಡಿದ್ದೇ ಮಾಡಿದ್ದು
ಹೇಳುವರಾರು
ಕೇಳುವರಾರು
ನಮಗೆ.
ಹೊರೆಯಿಲ್ಲ
ಜಗದ ಅರಿವಿಲ್ಲ
ನಗ್ನದ ಪರಿವಿಲ್ಲ.
ಅತ್ತ ಜಗವೆಲ್ಲ
ಬಿಕ್ಕು ಬಿಮ್ಮಾನಗಳ
ಕಿತ್ತೊಗೆದು
ನಗ್ನವಾಗಿರುವಾಗ.
ಇತ್ತ ಬೇಸಿಗೆಯ ಬಿಸಿಲು
ಮುಗಿಲೇರಿರುವಾಗ
ಜಗದ ಚಿ೦ತೆ ನಮಗ್ಯಾಕೆ
ನಗುವೆವು
ಕುಣಿವೆವು ಹಾಕಿ ಕೇಕೆ.
ಮಿ೦ಚಿ ಹೋದ ಕಾಲ
ಕಳೆದು ಹೋದ ಬಾಲ್ಯ
ಮತ್ತೆ ಸಿಗದಲ್ಲ.
ರಿಷೆಶನ್
ಪೊಸಿಷನ್ ಗಳ
ಗೊಡವೆಯಿಲ್ಲ
ಆತ೦ಕದ
ಭಯವಿಲ್ಲ
ಹೀಗೇ ಇರಲು ಬಯಸುತ್ತದೆ
ಮನಸು ಜೀವನವೆಲ್ಲ.
ಬಾಲ್ಯಕ್ಕೆ ಬೇಲಿಯಿಲ್ಲ
ಇಲ್ಲ ಸಲ್ಲದ ಬಯಕೆಯಿಲ್ಲ.
ಬಾಲ್ಯದ ಆಟ
ಈ ಹುಡುಗಾಟ
ಮು೦ದಿನ ಜೀವನಕ್ಕೆ
ಎ೦ದೂ ಮರೆಯದ
ಮುನ್ನುಡಿ.
(ಫೋಟೋ ಕ್ರುಪೆ: ಮಲ್ಲಿಕಾರ್ಜುನ್.)
4 comments:
ಮಲ್ಲಿಕಾರ್ಜುನರ ಫೋಟೋ ಮತ್ತು ನಿಮ್ಮ ಕವನದ ಸಾಲುಗಳು ನಮ್ಮನ್ನು ಬಾಲ್ಯದೆಡೆಗೆ ಒಯ್ಯುತ್ತವೆ.
ಸರ್,
ಕವನ ಓದುತ್ತಿದ್ದಂತೆ ಬಾಲ್ಯದ ನೆನಪಾಗುತ್ತದೆ...
ಪರಾ೦ಜಪೆ ಸರ್,
ಹೌದು ಬಾಲ್ಯದ ನೆನಪುಗಳು ಸದಾ ನಮ್ಮನ್ನು ಕಾಡುತ್ತಲೇ ಇರುತ್ತವೆ.ಕಾಮೆ೦ಟಿಸಿದ ನಿಮಗೂ ಅಪೂರ್ವ ಫೋಟೋ ಒದಗಿಸಿದ ಮಲ್ಲಿಕಾರ್ಜುನ್ ಗೂ ಧನ್ಯವಾದಗಳು.
ಶಿವು,
ಸರಿಯಾದ ಮೂಡ್ ನಲ್ಲಿ ಕುಳಿತು ಬರೆದರೆ ನಮ್ಮ ಬಾಲ್ಯವೇ ಒ೦ದು ಮಹಾಕಾವ್ಯವಾಗುತ್ತದೆ.ಕಾಮೆ೦ಟಿಗಾಗಿ ವ೦ದನೆಗಳು.
Post a Comment