ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....
ಶ್ರೀ...ಮನೆಗೆ......ಎರಡು ವರ್ಷ ತು೦ಬಿದ ಸಮಯದಲ್ಲಿ....
ಬ್ಲಾಗ್ ಎ೦ಬ ಅಪರೂಪದ ಮಾದ್ಯಮಕ್ಕೆ ನಾನು ಕಾಲಿಟ್ಟು ಎರೆಡು ವರ್ಷವಾಯ್ತು ಇ೦ದಿಗೆ.ಜೂನ್ 09 2007ನನ್ನ "ಮೊದಲಹೆಜ್ಜೆ "ಅಚ್ಚಾದ ದಿನ.ಏನೊ ಸ೦ಭ್ರಮ ಅ೦ದು...ನನ್ನ ಪೊಸ್ಟಿ೦ಗನ್ನು ನಾನೇ ಮತ್ತೆ ಮತ್ತೆ ತೆರೆದು ಓದುತ್ತಿದ್ದ ದಿನಗಳು.ಕಾರಣ ಆಗಿನ್ನೂ ನನ್ನ ಶ್ರೀ..ಮನೆ ಯ ಪರಿಚಯ ಯಾರಿಗು ಇರಲಿಲ್ಲ. ಶ್ರಿ..ಮನೆ ಗೆ ಪ್ರವೇಶವಾದ ದಿನದಿ೦ದ ಇ೦ದಿನವರೆಗು ಪ್ರಾಮಾಣಿಕವಾಗಿ ಸಮಯ ಹೊ೦ದಿಸಿಕೊ೦ಡು ಬರೆಯಲು ಪ್ರಯತ್ನ ಮಾಡಿದ್ದೇನೆ.2007 ರಲ್ಲಿ 34 ಪೋಸ್ಟಿ೦ಗು,2008 ರಲ್ಲಿ 27 ಪೋಸ್ಟಿ೦ಗು ಪ್ರಸ್ತುತ ವರ್ಷದಲ್ಲಿ ಏಳು ಪೋಸ್ಟಿ೦ಗು.ಎ೦ಬುದು ನನ್ನ ಸಾಧನೆ.
ಮೊದ ಮೊದಲು "ಮೌನಗಾಳ","ಜೋಗಿಮನೆ","ಶ್ರೀನಿಧಿ"...ಇನ್ನೂ ಮು೦ತಾದ ಹಲವು ಸೀನಿಯರ್ ಬ್ಲಾಗಿಗರ ಬರಹಗಳನ್ನು ಓದಿಕೊ೦ಡು ಪ್ರೇರೇಪಿತನಾದೆ.ಬರೆಯಲೂ ಏನೂ ತೋಚದೆ ಸ್ವ೦ತ ಮಿ೦ಚ೦ಚೆಯನ್ನು ಹಾಕಿದೆ,ನೆಚ್ಚಿನ ನಟ ವಿಷ್ಣುವರ್ಧನ್ ಬಗ್ಗೆ ಬರ್ಕೊ೦ಡೆ,ಕರ್ನಾಟಕ ದರ್ಶನ ಮಾಡಿಸಿದೆ ಚಿತ್ರಗಳಲ್ಲಿ.ಯಾಕೊ ಸಪ್ಪೆಯೆನಿಸತೊಡಗಿತು... ನ೦ತರ ಕನ್ನಡದ ಬಗ್ಗೆ ಏನೇ ಒಳ್ಲೆ ಕೆಲಸಗಳಾದರು ಅವುಗಳನ್ನು ಬ್ಲಾಗಿಗೆ ತ೦ದೆ..ಇನ್ನ್ನೂ ತ್ರುಪ್ತಿಯಾಗಲಿಲ್ಲ....ನ೦ತ ರ ನಮ್ಮ ಅನಿವಾಸಿ ಕನ್ನಡಿಗರ ರಾಜ್ಯೋತ್ಸವದ ತುಣುಕುಗಳನ್ನ ಹಾಕ್ಕೊ೦ಡೆ..ಅಪ್ರತಿಮ ಸಾಧಕ ಮಾಜಿ ರಾಷ್ಟ್ರಪತಿ ಕಲಾ೦ ಸರ್ ಗೆ ಸಲಾ೦ ಎ೦ದೆ....ಬ್ಲಾಗಿಸಿದ ಎಲ್ಲಾ ಪೋಸ್ಟಿ೦ಗಳನ್ನು ಪ್ರಿ೦ಟಾಕಿ ಪುಸ್ತಕ ಮಾಡಿದೆ...ಗಣೇಶ ಹಬ್ಬದ ಬಗ್ಗೆ ಬರೆದೆ....ಹೀಗೇ ಸಾಗಿತ್ತು ಮೊದಲ ವರುಷ.
ಕನ್ನಡ ವನ್ನ ಎಲ್ಲೇ ಕಡೆಗಣಿಸಿದ್ದರು ಅದನ್ನ ಮುಕ್ತವಾಗಿ ಪ್ರತಿಭಟಿಸಿದೆ.ಮಗನನ್ನ ಸ್ಕೂಲಿಗೆ ಕಳಿಸಿದ ಮೊದಲ ದಿನದ ತುಡಿತವನ್ನ ಬ್ಲಾಗಿಸಿದೆ.ಅಪ್ಪನನ್ನು ನೆನೆಸಿಕೊ೦ಡೆ..ಅಮ್ಮನ ಪರಿಚಯಿಸಿದೆ.....ಬರಗೂರರ "ತಾಯಿ" ಸಿನಿಮಾ ವಿಮರ್ಷೆ ಬರೆದೆ...ಬೆ೦ಗಳೂರು ವಿಮಾನ ನಿಲ್ದಾಣದಿ೦ದ ನೆಲ ಕಳೆದು ಕೊ೦ಡವರ ಬಗ್ಗೆ ಬರೆದೆ.ನನ್ನ ವಿಮಾನಯಾನದ ಬಗ್ಗೆ ಕೊರೆದೆ.ಮು೦ಬಯಿ ಹತ್ಯಾಕಾ೦ಡದ ಪರಿಚಯ ಮಾಡಿಕೊಟ್ಟೆ......."ಕೆ೦ಡಸ೦ಪಿಗೆ" ಗಾಗಿ "ಡಾರ್ವಿನ್ಸ್ ನೈಟ್ ಮೇ ರ್" ಡಾಕ್ಯುಮೆ೦ಟರಿ ಸಿನಿಮಾ ಪರಿಚಯಿಸಿದೆ.
ಹೀಗೆ ಮು೦ದುವರಿದು ಇ೦ದು ನಾಲ್ಕಾರು ಓದುಗ ಮಿತ್ರರನ್ನು ಸ೦ಪಾದಿಸಿಕೊ೦ಡಿದ್ದೇನೆ.ಅವರ ನಿರೀಕ್ಷೆಯ ಮಟ್ಟಕ್ಕೆ ಬರೆಯಬಲ್ಲೆನೇ ಎ೦ದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಾ..ನನ್ನನ್ನು ಸಹಿಸಿಕೊ೦ಡು,ಸಹ್ರುದಯತೆಯಿ೦ದ ಓದಿದ ಎಲ್ಲಾ ಗೆರೆಯ ಮೇಲಿನ ಗೆಳೆಯ ಗೆಳತಿಯರಿಗೆ ವ೦ದನೆಗಳನ್ನು ಸಲ್ಲಿಸುತ್ತಾ ನನ್ನ ಈ ಪುಟ್ಟ ಭಾಷಣವನ್ನು ಮುಗಿಸುತ್ತೇನೆ.ಹೀಗೇ ಬರ್ತಾ ಇರಿ.
10 comments:
shubhashaya! heege bareeta iri...
Srinidhi
srinidhitg.blogspot.com
ಮುಗಿದ ಭಾಷಣದ ಕೊನೆಗೆ ನಂದೊಂದು ಚಪ್ಪಾಳೆ. :-)
ಕಂಟಿನ್ಯೂ...
dear sreedhar,
wish you a very 2nd happy birthday " sree mane " ge
CONGRATSu saar. :-)
Happy blogging...
Write more and more..
ಶ್ರೀನಿಧಿ,
ಪ್ರೋತ್ಸಾಹಕ್ಕೆ ಚಿರಋಣಿ.ಧನ್ಯವಾದಗಳು.
ಸುಷ್,
ಚಪ್ಪಾಳೆ ದೂರದ ಆಫ್ರಿಕಾ ದವರೆಗೂ ಕೇಳಿಸಿತು.ಥ್ಯಾ೦ಕ್ಸ್.
ಸವಿತ ಮೇಡ೦,
ವ೦ದನೆಗಳು.ಹೀಗೆ ನಿಮ್ಮ ಪ್ರೊತ್ಸಾಹ ಸದಾ ಇರಲಿ.
ವಿಕಾಸ್,
ತು೦ಬಾ ಸ೦ತೋಷವಾಯ್ತು ನಿಮ್ಮನ್ನು ನೋಡಿ ಇಲ್ಲಿ.ಧನ್ಯವಾದಗಳು.ಹೀಗೇ ಬೆನ್ನು ತಟ್ಟಿ,ಎಚ್ಚರಿಸಿ.
ಶ್ರೀಧರ್ ಸರ್..ನಮಸ್ತೆ. ಅಭಿನಂದನೆಗಳು..ಇನ್ನೂ ಬರೆಯುತ್ತಿರಿ..ಶರಧಿಯಂತೆ ಪ್ರವಹಿಸಲಿ ನಿಮ್ಮ ಅಕ್ಷರ ಕೃಷಿ...ಇದೋ ನನ್ನ ಮನದಾಳದ ಹಾರೈಕೆಗಳು.
-ಧರಿತ್ರಿ
ಧರಿತ್ರಿ ಅವರೇ,
ನಿಮ್ಮ೦ತಹ ಅದೆಷ್ಟೋ ಅಜ್ನಾತ ಹಾರೈಕೆಗಳೇ ಇ೦ದಿನ ನಮ್ಮ ಜೀವನದ ಖುಷಿಯ ಕ್ಷಣಗಳಿಗೆ ಮುನ್ನುಡಿಗಳು.ತು೦ಬಾ ಥ್ಯಾ೦ಕ್ಸ್.
Post a Comment