Jul 11, 2007

ಕನ್ನಡ ಈ ಮೈಲ್


ಆತ್ಮೀಯರೇ,
ಕನ್ನಡದಲ್ಲಿ ಈ ಮೈಲ್ ಬರೆದಾಗ ಸಿಗೋ ಅಂತ ಸಂತೋಷ ಆನಂದ ಇಂಗ್ಲಿಷ್‌ನಲ್ಲಿ ಬರೆದಾಗ ಸಿಗೋದಿಲ್ಲ. ಅದಕ್ಕೊಂದು ಚಿಕ್ಕ ಉದಾಹರಣೆ ಕೆಳಗಿನ ಮೈಲ್. ನನ್ನ ಸ್ನೇಹಿತ ದಕ್ಷಿಣ ಕೊರಿಯದಲ್ಲಿ ಇದಾನೆ, ಮೊನ್ನೆ ಮೊನ್ನೆವರೆಗೆ ಇಂಗ್ಲಿಷ್‌ನಲ್ಲೇ ಮೈಲ್ ಮಾಡ್ತಾ ಇದ್ದೇ ಅದ್ಯಾಕೋ ಈ ಸಾರಿ ಹಟ ಮಾಡಿ ಪಟ್ಟು ಹಿಡಿದು ಕನ್ನಡದಲ್ಲೇ ಮಾಡಿದೆ.ಅಲ್ಲಿ ಅವನಿಗೆ ಆದ ಸಂತೋಷ ಮತ್ತು ಉತ್ತರ ನೋಡಿದಾಗ ಇಲ್ಲಿ ನನಗೆ ಆದ ಖುಷಿ ನಿಮ್ ಹತ್ರ ಹಂಚಿಕೋಬೇಕು ಅನಿಸ್ತು.ನೀವೂ ಏಕೆ ಪ್ರಯತ್ನ ಮಾಡಬಾರದು.

ನಿಮ್ಮ,
ಅಹರ್ನಿಶಿ.

Date:
Tue, 3 Jul 2007 13:21:32 +0100 (BST)
From:
"Mohana kumar B." View Contact Details Yahoo! DomainKeys has confirmed that this message was sent by yahoo.co.in. Learn more
Subject:
ಸಂತಸವಾಯಿತು.........
To:
"sreedhara T"

ಆತ್ಮೀಯ ಶ್ರೀ,

ನಿನ್ನ ಕನ್ನಡ ಪತ್ರ ಓದಿ ಸಂತಸವಾಯಿತು.
ಅಲ್ಲಿ ನೀವೆಲ್ಲಾ ಸೌಖ್ಯವಾಗಿರುತ್ತೀರೆಂದು ಭಾವಿಸುತ್ತೇನೆ.
ನಾನು ತಾಯ್ನಾಡಿಗೆ ಮರಳುವ ದಿನ ಸಮೀಪಿಸುತ್ತಿರುವಂತೆ, ಒಂದೊಂದಾಗಿಯೇ ಎಲ್ಲಾ ಕೆಲಸಗಳನ್ನು ಮುಗಿಸುತ್ತಿದ್ದೇನೆ. ಬರುವ ೧೭ ಅಥವಾ ೧೯ ರಂದು ನಾನು ಹೊರಡುತ್ತಿದ್ದು, ಭಾರತಕ್ಕೆ ಮರಳಿದ ನಂತರ ಕೆನಡದ ವೀಸಾಕ್ಕಾಗಿ ಅಪ್ಲೈ ಮಾಡುತ್ತೇನೆ. ಎಲ್ಲಾ ಕೆಲಸಗಳು ಸುಲಲಿತವಾಗಿ ಕೈಗೂಡಿದರೆ, ಆಗಸ್ಟ್ ಕೊನೆಯವಾರದಲ್ಲಿ (೩೦ ರಂದು) ಕೆನಡಾಕ್ಕೆ ತೆರಳುವ ನಿರ್ಧಾರ ನನ್ನದು.
ಊರಿನಲ್ಲಿ ಮನೆ ಕಟ್ಟುವ ಕೆಲಸ ಭರದಿಂದ ಸಾಗುತ್ತಿದೆ. ಜಿಟಿಜಿಟಿ ಸೋನೆ ಮಳೆಯ ಕಾರಣ ಕೆಲಸಕ್ಕೆ ಅಷ್ಟೇನೂ ತೊಂದರೆಯಾಗುತ್ತಿಲ್ಲ. ಮನೆ ಕಟ್ಟುವ ಕೆಲಸದಲ್ಲಿ ಎಲ್ಲರೂ 'ವ್ಯಸ್ತ' ವಾಗಿರುವ ಜೊತೆಗೆ, ಈಗ 'ಅಧಿಕ ಜೇಷ್ಟ' ಮತ್ತು ಮುಂದಿನ 'ಆಷಾಡ' ಸಮೀಪಿಸುತ್ತಿರುವ ಕಾರಣ, ಮದುವೆಯ ವಿಚಾರವಾಗಿ ಅಂಥಹ ಬೆಳವಣಿಗೆಗಳೇನೂ ನಡೆದಿಲ್ಲ. ವಿದ್ಯಮಾನಗಳೇನಾದರೂ ಇದ್ದಲ್ಲಿ ಖಂಡಿತಾ ತಿಳಿಸುತ್ತೇನೆ.


'ಬರಬಾರದೇ ಪ್ರಿಯತಮೆ ಬಾಳಿಗೆ...
ನೀ ಬಾರದೇ ಮನಸು ಬರಿದಾಗಿದೆ........'

ಬಿಡುವಾದಾಗ ಮತ್ತೊಮ್ಮೆ ಬರೆಯುತ್ತೇನೆ.......



ನಿಮಗೆ ಶುಭವಾಗಲಿ,

ಸಪ್ರೇಮದಿಂದ,

ಮೋಹನ

sreedhara T wrote:
ಮೋಹನ,
ಹೇಗಿದಿಯ,ಬಹಳ ದಿನಗಳಾಯ್ತು ನಿನ್ನ ಮೈಲ್ ನೋಡಿ.

ಏನು ಸಮಾಚಾರ.ಯಾವಾಗ ಭಾರತಕ್ಕೆ ಹೋಗ್ತಿಯ .

ನಿನ್ನ ಕೆಲಸ ಎಲ್ಲ ಮೂಗುದ್ವಾ.ಹಾಗೂ ಕೆನಡಾ ವೀಸಾ ಬಂತಾ.

ಪಾಲಾಕ್ಷ ಹೇಗಿದಾನೆ.ಅವನಿಗೆ ನನ್ನ ವಂದನೆಗಳನ್ನು ತಿಳಿಸು.

ದಯವಿಟ್ಟು ಮರೆಯದೇ ಬೇಗ ಉತ್ತರ ಬರೆ.

ಭಾರತ ದಲ್ಲಿ ಮುಂಗಾರು ಮಳೆಯೊಂದಿಗೆ ಎಲ್ಲ ನಿನ್ನ ಕಾಯ್ತಾ ಇದಾರೆ ಅನ್ಸುತ್ತೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.

ಸ್ವಾತೀ ಮುತ್ತಿನ ಮಳೆ ಹನಿ ಮೆಲ್ಲ ಮೆಲ್ಲನೇ ದರೆಗಿಳಿಯೇ.

ಕನ್ನಡ ದಲ್ಲಿ ಮೈಲ್ ಮಾಡಿ ಅದರ ಖೂಷಿನೆ ಬೇರೆ ನೋಡಿ.

ಪ್ರೀತಿಯಿಂದ,
ಶ್ರೀ.

1 comment:

Anonymous said...

GOOD letters