Jul 17, 2007

ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.


ಹೀಗೆ ಸುಮ್ಮನೇ!!!!!. ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ. ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ, ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ. ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ. ಬ್ಲಾಗ್ ಅಂದರೆ ಜೋಲಿಗೆ, ಸರಿನಾ ಅಂತ ಯೋಚಿಸಿದೆ. ಆದ್ರೆ ನಾವು ಜೋಳಿಗೆಯನ್ನ ಇನ್ನೊಬ್ಬರ ಹತ್ತಿರ ಬೇಡೋದಕ್ಕೆ ಉಪಯೋಗಿಸುತ್ತೇವೆ. ಇದು ಹೇಗೆ ಬ್ಲಾಗಿಗೆ ಪರ್ಯಾಯ ಪದ ಆಗೋಕೆ ಸಾಧ್ಯ ಅಂತ ಕೈ ಬಿಟ್ಟೆ. ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ನನಗೆ ಅನಿಸಿದ್ದು ಬ್ಲಾಗಿಗೆ ಸರಿಯಾದ ಕನ್ನಡ ಪದ "ಅಕ್ಷರ ಪಾತ್ರೆ".
ನಿಮಗೆ ಏನನ್ನಿಸಿತು.ಇದೆ ವಿಷಯವನ್ನ www.sampada.net ನಲ್ಲಿ ಕೂಡ ಹಾಕಿದಿನಿ.


ಮೊಗೆದಷ್ಟು ಮುಗಿಯದ "ಅಕ್ಷಯ ಪಾತ್ರೆ" . ಈ "ಅಕ್ಷರ ಪಾತ್ರೆ"(Blog).




ಇತ್ತೀಚೆಗೆ ಬ್ಲಾಗ್......... ಬ್ಲಾಗ್......... ಎಲ್ನೋಡಿ ಬ್ಲಾಗ್.




ಗಣಕ ಕ್ರಾಂತಿ ಯೊಂದಿಗೆ ಅಕ್ಷರಕ್ರಾಂತಿ.
ನಿಮ್ಮ,
ಅಹರ್ನಿಶಿ.

2 comments:

dinesh said...

ಶ್ರೀ ಸಾಮಾನ್ಯ... ಸುಮ್ಮನೆ ಒಂದು ಸುತ್ತು ಹಾಕುವಾಗ ನಿಮ್ಮ ಬ್ಲಾಗ್ ಕಾಣ್ತು.. ಹ್ಯಾಗಿದ್ದೀರಿ ಸಾರ್.. ನಮ್ಮೂರಲ್ಲಿ ಈಗ ಸಿಕ್ಕಾಪಟ್ಟೆ ಮಳೆ..ಮೀನು ದಂಡಿಯಾಗಿ ಸಿಗುತ್ತಂತೆ..ನನಗೆ ಊರಿಗೆ ಹೋಗೋಕೆ ಆಗ್ತಾ ಇಲ್ಲಾ...ಬ್ಲಾಗಿಸುತ್ತಿರಿ..

ಅಹರ್ನಿಶಿ said...

ದಿನೇಶ್ ಅವರೆ.....
ತು೦ಬಾ ಸ೦ತೊಷ.ಮೀನು ಜಾಸ್ತಿ ಅ೦ದ್ರಲ್ವ .ಯಾವೂರು ನಿಮ್ಮದು ಅ೦ತ ತಿಳ್ಕೊಬಹುದಾ.ನಿಮ್ಮ "ಅಕ್ಷರ ಪಾತ್ರೆ"(ದಿಗ೦ತ) ಯಾಕೊ ಬಿಚ್ಹಿಕೊಳ್ಲಿಲ್ಲ ಇವತ್ತು.ನಾಳೆ ಖ೦ಡಿತ ನೋಡ್ತಿನಿ.