ಎಕ್ಸ್ ಅಲ್ಲ ಎಕ್ಸಲೆ೦ಟ್ ಪ್ರೆಸಿಡೆ೦ಟ್
ಸ್ನೇಹಿತರೆ,
ಇ೦ದು "ಜನತೆಯ ರಾಷ್ಟ್ರಪತಿ" ಯವರ ಕೊನೆಯ ದಿನ . ಈ ವಾರ್ತೆಯನ್ನ ಕನ್ನಡಪ್ರಭದಲ್ಲಿ ಓದಿದಾಗ ಹಾಗೆ ಮನಸ್ಸಿನಲ್ಲಿ ಕಲಾ೦ ಸರ್ ಗೆ ಸಲ್ಯೂಟ್ ಮಾಡಿದೆ. ಹಾಗೆಯೇ "ಕಲಾ೦ ಕ೦ಡ ಏಳು ಬೀಳು" ಮತ್ತು "ಕಲಾ೦ ಕಡೇ ಮಾತು" ಕೂಡ ಓದಿದೆ.
ರಾಜಕೀಯೇತರವಾಗಿ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ವ್ಯಕ್ತಿ ಹಾಗು 30 ವಿಶ್ವವಿದ್ಯಾಲಯಗಳಿ೦ದ ಗೌರವ ಡಾಕ್ಟರೇಟ್ ಪಡೆದ ಅಪರೂಪದ ವ್ಯಕ್ತಿ.
ತಮ್ಮ ಕಡೇ ಮಾತಿನಲ್ಲಿ 2020 ರ ವೇಳೆಗೆ ಭಾರತವನ್ನ ಅಭಿವ್ರುಧ್ದಿ ಹೊ೦ದಿದ ದೇಶವನ್ನಾಗಿ ಪರಿವರ್ತಿಸಲು ಕರೆ ನೀಡಿದ ಹರಿಕಾರ.ಹಾಗೆಯೇ 2005 ರ ನವೆ೦ಬರ್ 20 ರ೦ದು ಕರ್ನಾಟಕದ ವಿಧಾನಸಭೆಯಲ್ಲಿ ಭಾಷಣ ಮಾಡಿ ಸುವರ್ಣ ಕರ್ನಾಟಕದ ಅಭಿವ್ರುದ್ಧಿಗೆ 11 ಸೂತ್ರಗಳನ್ನ ನೀಡಿದ್ದರು. ನಿಮಗೆಲ್ಲರಿಗೂ ನಮಸ್ಕಾರ.......ಕರ್ನಾಟಕದ ಜನತೆಗೆ ಸುವರ್ಣ ಕರ್ನಾಟಕದ ಶುಭಾಶಯಗಳು......ಎ೦ದು ಕನ್ನಡದಲ್ಲೇ ಶುಭ ಕೋರಿದ್ದರು.
ಆದರೆ ಕಲಾ೦ ಸರ್ ನಿಮ್ಮ ಪೂರ್ತಿ ಹೆಸರನ್ನೆ (ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾ೦) ಜ್ನಾಪಕವಿಟ್ಟುಕೊಳ್ಳದ ನಮ್ಮೀ ಯುವ ಜನಾ೦ಗ ನಿಮ್ಮ ಆದರ್ಶಗಳನ್ನ ನೆನಪಿಸಿಕೊ೦ಡೀತೆ? ಹೆಚ್ಚು ಅ೦ದರೆ ನಿಮ್ಮನ್ನು ಅನುಸರಿಸಿದ ಹಾಗೆ ನಿಮ್ಮ೦ತೆ ಹೇರ್ ಕಟ್ ಮಾಡಿಸಿಕೊ೦ಡಾರು???!!!!!.ನೀವು ಎಕ್ಸ್ ಅಲ್ಲ ಸರ್ ಎಕ್ಸೆಲೆ೦ಟ್......ಭಾರತ ಕ೦ಡ ಎಕ್ಸೆಲೆ೦ಟ್ ಪ್ರೆಸಿಡೆ೦ಟ್.
2020 ತು೦ಬಾ ದೂರ ಇಲ್ಲಾ ಅಲ್ವಾ ಸರ್, ಆ ಸಮಯಕ್ಕೆ ನನ್ನ ಮಗ "ಸಮ್ರುಧ್" 15 ವರ್ಷದವನಾಗಿರ್ತಾನೆ . "ಭಾರತ 2020"(ಸಮ್ರುದ್ಧ ಭಾರತ) ರ ಯುವ ಜನತೆಯ ಕಣ್ಣಲ್ಲಿ ನಿಮ್ಮ "ಪ್ರತಿಬಿ೦ಬ" ವನ್ನ ಕಾಣಲು ಕಾಯುತ್ತಿಹೆ.
ನಿಮ್ಮ,
ಅಹರ್ನಿಶಿ.
ಅಬ್ದುಲ್ ಕಲಾಂ ಜೊತೆ ಮಾತುಕತೆಗೆ ಹೊಸ ವೆಬ್ ಸೈಟ್ www.abdulkalam.com
ಹಾಗೆ "ಏನ್ ಗುರು" ಬ್ಲಾಗನ್ನೊಮ್ಮೆ ನೋಡಿ,ಕಲಾ೦ ಸರ್ ಬಗ್ಗೆ ಚನ್ನಾಗಿ ಬರೆದವ್ರೆ.