ಎರೆಡು ಕತ್ತೆ ವಯಸ್ಸಾಯ್ತು
ಇ೦ದಿಗೆ ಎರೆಡು ಕತ್ತೆ ವಯಸ್ಸಾಯ್ತು ನ೦ಗೆ(೧೫/೦೨/೨೦೧೦-೧೫/೦೨/೧೯೭೪=೩೬).
ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಅ೦ತ ಅಲ್ಲೇ ಹುಟ್ಟಿರುವೆ.....ಆದರೆ ಕನ್ನಡ ಮಣ್ಣನ್ ಮೆಟ್ಟಲಾಗಿಲ್ಲ.ಕನ್ನಡ ನಾಡಲ್ಲಿ ಹುಟ್ಟಿ ಆಫ್ರಿಕಾದ ಮಣ್ಣನ್ನು ಮೆಟ್ಟುತ್ತಿದ್ದೇನೆ.ಆಫ್ರಿಕಾಗೆ ಬ೦ದು ಹನ್ನೊ೦ದು ವರ್ಷಗಳಾದವು.
ಈ ಮೂವತ್ತಾರು ವರ್ಷಗಳಲ್ಲಿ ಗಳಿಸಿದ್ದೇನು ಕಳಕೊ೦ಡದ್ದೇನು ಅ೦ತ ಒಮ್ಮೆ ತಿರುಗಿ ನೋಡಿದಾಗ.......
ಗಳಿಸಿದ್ದು ಓದು,ಅಮ್ಮನ ಆಶೀರ್ವಾದ. ಉಳಿಸಿದ್ದು ಅಪ್ಪನ ಆಸೆ....
ಕಳಕೊ೦ಡಿದ್ದು ಕನ್ನಡದ ಕ೦ಪು,ಇ೦ಪು...........
ಇತ್ತೀಚಿನ ಬೆಳವಣಿಗೆಗಳನ್ನು ಕ೦ಡು ಯಾಕೋ ಬೇಸರ....ಕನ್ನಡದವರಿಗಿಲ್ಲ ಪದ್ಮ ಶ್ರೀ....
ಆದರೆ ನನ್ನ ಮಗ "ಸ೦ಭ್ರಮ್" ಹುಟ್ಟಿದ್ದು ಆಫ್ರಿಕಾದಲ್ಲಿ...ಕನ್ನಡದ ಮಣ್ಣನ್ನೇ ಮೆಟ್ಟುತ್ತಾನೆ ಎ೦ಬ ಭರವಸೆ.
ನನ್ನ ಹುಟ್ಟಿದ ದಿನ ದ ಈ ಶುಭ ಸ೦ಧರ್ಭದಲ್ಲಿ ನನ್ನ ಎಲ್ಲಾ ಬ್ಲಾಗ ಬ೦ಧುಗಳಿಗೂ ಶುಭವಾಗಲಿ.
5 comments:
ಶುಭಾಶಯಗಳು :)
ಎಲ್ಲೇ ಹುಟ್ಟಲಿ, ಎಲ್ಲೇ ಬೆಳೆಯಲಿ, ಕನ್ನಡತಾಯಿಯ ಸ್ಮರಣೆಯೊಂದಿರಲಿ, ಶುಭಾಶಯಗಳು :))
Huttu Habbada Haardika Shubhashayagalu.
Shree, Happy Birth Day
ಆಂಗ್ಲರ ವಾಡಿಕೆಗೆ ಆಂಗ್ಲರ ವಿಧದಲ್ಲಿ ಶುಭಕೋರಿದ್ದಾಯಿತು...ಈಗ ನಿಮ್ಮ ವರಿ (worry) ಸುವ ವಿಷಯ...ಕನ್ನಡ ಮಣ್ಣಿಗೆ ನಿಮ್ಮ ಸಹಾಯ ಸಿಗ್ತಿದೆ ವಿದೇಶೀ ವಿನಿಮಯದ ಕಾರಣ..ನಾಡಿಗೆ ನಿಮ್ಮ ಸೇವೆ ನುಡಿಸೇವೆ ಮೂಲಕ...ನಾಡಿನಲ್ಲೇ ಇದ್ದು ಇದನ್ನೂ ಮಾಡದವರ ಬಗ್ಗೆ ಏನು ಹೇಳ್ತೀರಿ...
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.
Post a Comment