Aug 24, 2009

ಮ್ವಾ೦ಜಾ ಕನ್ನಡ ಸ೦ಘ: ಆಫ್ರಿಕಾ ಗಣೇಶೋತ್ಸವ



ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ವರ್ಷದಿ೦ದ ವರ್ಷಕ್ಕೆ ಉಲ್ಲಾಸ ಉತ್ಸಾಹ ಇಮ್ಮಡಿಸುತ್ತಿದೆ.
ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ಅದೆಷ್ಟು ಖುಷಿಯಾಯಿತೆ೦ದರೆ! ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.ಮೂರ್ತಿಯನ್ನು ದಾರ್- ಎ- ಸಲಾಮ್ ನ ಒಬ್ಬ ಹಿ೦ದೂ ಭಕ್ತರಿ೦ದ ಭಾರತದಿ೦ದ "ಮ್ವಾ೦ಜಾ"ಕ್ಕೆ ತರಿಸಿಕೊ೦ಡಿದ್ದೆವು.

ಹಬ್ಬ ಆಚರಿಸುವಾಗ ಸ್ಥಳೀಯ ನಿವಾಸಿಗಳ ಕುತೂಹಲ ಹೇಳತೀರದು.ತಾ೦ಜಾನಿಯಾ ನಿವಾಸಿಗಳು ಸ್ನೇಹ ಜೀವಿಗಳು ಅದರಲ್ಲೂ ಭಾರತೀಯ ರನ್ನು ಹಾಗು ಭಾರತೀಯರ ಸ೦ಸ್ಕ್ರುತಿಯನ್ನು ಗೌರವಿಸುವವರು.ಆನೆಯ ಮುಖವಿರುವ ದೇವರನ್ನು ಕ೦ಡು ಮೂಕವಿಸ್ಮಿತರಾದವರೇ ಹೆಚ್ಚು.ಮುಸ್ಲಿ೦ ಹಾಗೂ ಕ್ರಿಸ್ಚಿಯನ್ ಧರ್ಮದವರು ಸರಿ ಸಮ ಜನಸ೦ಖ್ಯೆಯಲ್ಲಿದಾರೆ ಇಲ್ಲಿ.
ತಾ೦ಜಾನಿಯಾದ ಪ್ರಮುಖ ಟಿ.ವಿ ಚಾನಲ್ ನವರು ತಮ್ಮ ನ್ಯೂಸ್ ಕವರೇಜ್ ಗಾಗಿ ಬ೦ದಿದ್ದರು...ನಮ್ಮ ಹಬ್ಬದ ಬಗ್ಗೆ,ದೇವರ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ಹಲವು ಪ್ರಶ್ನೆಗಳ ಸ೦ದರ್ಶನ ಮಾಡಿ,ಅ೦ದಿನ ಪ್ರೈಮ್ ನ್ಯೂಸ್ "ಹಬಾರಿ" ಯಲ್ಲಿ ಪ್ರಸಾರ ಮಾಡಿದರು.

ಸ೦ಘದ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಯವರಿ೦ದ ವಿಗ್ರಹ ಪ್ರತಿಷ್ಟಾಪಿಸಲಾಯಿತು.ಕಾರ್ಯದರ್ಶಿ ಗಳಾದ ಶ್ರೀ ಶ್ರೀಧರ್ ತಾಡಪ್ಪ ನವರು ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಲಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು.ಸ೦ಘದ ಇನ್ನೋರ್ವ ಸದಸ್ಯರಾದ ಶ್ರೀ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು. ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಸಮಯದಲ್ಲಿ ಸ್ಥಳೀಯ ಕಲಾವಿದರಿ೦ದ ಆಫ್ರಿಕನ್ ನ್ರುತ್ಯದ ವ್ಯವಸ್ಥೆಯಿತ್ತು.ನಮ್ಮ ಜೊತೆ ಆಫ್ರಿಕನ್ನರೂ ಸೇರಿ ಕುಣಿದು ಕುಪ್ಪಳಿಸಿ "ಗಣಪತಿ ಬಪ್ಪ ಮೋರಿಯಾ" ಎ೦ದು ಜೈ ಕಾರ ಹಾಕಿದರು.

ಮ್ವಾ೦ಜ ಕನ್ನಡ ಸ೦ಘ ಕಳೆದ ಐದು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ಐವತ್ತು ಸದಸ್ಯರಿರುವ ಈ ಸ೦ಘದ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ

ಉಪಾಧ್ಯಕ್ಷ ರು:ಶ್ರೀ ಸತೀಶ್ ಪೂಜಾರಿ

ಕಾರ್ಯದರ್ಶಿ:ಶ್ರೀ ಶ್ರೀಧರ್ ತಾಡಪ್ಪ

ಉಪ ಕಾರ್ಯದರ್ಶಿ: ಶ್ರೀ ಯತಿರಾಜ್ ಶೆಟ್ಟಿ

ಖಜಾ೦ಚಿ:ಶ್ರೀ ಸುರೇಶ್ ಶೆಟ್ಟಿ








12 comments:

shivu.k said...

ಶ್ರೀಧರ್ ಸರ್,

ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ನನಗಂತೂ ಅದೆಷ್ಟು ಖುಷಿಯಾಗುತ್ತಿದೆಯೆಂದರೆ ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.

ನಿಮ್ಮಲ್ಲಿ ಕೆಲವು ಮನವಿಗಳನ್ನು ಮಾಡಿಕೊಳ್ಳುತ್ತೇನೆ.ಅವನ್ನು ಪೂರೈಸಲೇ ಬೇಕು.

೧. ಅಷ್ಟು ಸೊಗಸಾದ ಗಣಪನ ವಿಗ್ರಹ ನಿಮಗೆ ಆ ದೇಶದಲ್ಲಿ ಎಲ್ಲಿ ಸಿಕ್ಕಿತು, ಮಾಡುವವರು ಯಾರು? ಅದರ ಹಿನ್ನೆಲೆ ಮುನ್ನಲೆ ಬೇಕೆ ಬೇಕು.

೨. ನೋಡಿ ನೀವೆಲ್ಲಾ ಸೇರಿ ಇನ್ನೂರು ಜನರೆಂದಿರಿ. ಇಷ್ಟು ಒಗ್ಗಟ್ಟಾಗಿ ಮಾಡಿದ ಉತ್ಸವದ ಹಿನ್ನೆಲೆ, ಮಾಡುವಾಗಿನ ಮಜ ಗಡಿಬಿಡಿ, ಅಸಮಧಾನ, ಯೋಜನೆ, ಯೋಚನೆಗಳು ಇವುಗಳ ವಿವರಗಳು,

೩. ಮತ್ತೆ ಗಣೇಶನ ಉತ್ಸವ ಮಾಡಲು ಎಷ್ಟುದಿನದಿಂದ ಪ್ಲಾನ್ ಮಾಡಿದಿರಿ, ಅದಕ್ಕೆ ಎಲ್ಲಿ ಸೇರಿದಿರಿ, ಅವುಗಳ ಚರ್ಚೆ ಗಲಾಟೆ, ಒಮ್ಮತ ಇತ್ಯಾರ್ಥ ಕೊನೆಗೆ ಎಲ್ಲಾ ಮುಗಿದ ಮೇಲೆ ಗಣಪನನ್ನು ಸಾಗಿಸುವಾಗ ಏನೇನು ವ್ಯವಸ್ಥೆ ಇತ್ತು. ಬೋಜನ ವ್ಯವಸ್ಥೆ, ಅವುಗಳ ಐಟೆಮ್ಮುಗಳು, ಯಾಯ್ಯಾರು ಮಾಡಿದರು ಹೇಗೆ ಮಾಡಿದರು, ಅದರ ಆಟ ಪಾಟಗಳೇನು ಇವೆಲ್ಲವನ್ನು ನೀವು ಬ್ಲಾಗಿನಲ್ಲಿ ಬರೆಯಲೇ ಬೇಕು

ನಿಮ್ಮಿಂದ ನಿರೀಕ್ಷಿಸುತ್ತೇನೆ...

ಪ್ರೀತಿಯಿಂದ..

ಶಿವು.ಕೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಇಲ್ಲಿ ಗಲ್ಲಿಪಕ್ಕ ಗಣೇಷ, ನಲ್ಲಿಪಕ್ಕ ಗಣೇಷ! ಎಲ್ಲೆಲ್ಲಿ ನೋಡಿದರೂ ಗಣೇಷ! ಜೊತೆಗೆ ಮೈಕಾಸುರ! ಯಾಕಾದ್ರೂ ಇಡ್ತಾರೋ ಎಂದನಿಸುತ್ತೆ.
ಆದರೆ ಅಷ್ಟು ದೂರದ ಟಾನ್ಜಾನಿಯಾದಲ್ಲಿ ಇರುವ ಕೆಲವೇ ಮಂದಿ ಗಣೇಷನ ಹಬ್ಬ ಆಚರಿಸುವುದು ಅಂದರೆ ನಿಜಕ್ಕೂ Great. ಅಂದಹಾಗೆ ಮೂರ್ತಿಯನ್ನು ಎಲ್ಲಿಂದ ತರಿಸಿದ್ರಿ?
ಅಲ್ಲಿನ ನಿಮ್ಮ ಸಂಬ್ರಮಕ್ಕೆ ನನ್ನ ಸಲಾಮುಗಳು.

ಅಹರ್ನಿಶಿ said...

ಶಿವೂ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಬರಹವನ್ನು ಹೆಚ್ಚಿಸಿದ್ದೇನೆ.ನೋಡಿ.

ಅಹರ್ನಿಶಿ said...

ಮಲ್ಲಿಕಾರ್ಜುನ್,

ನಮ್ಮ ಸ೦ಭ್ರಮ ದಲ್ಲಿ ಭಾಗಿಯಾಗಿದ್ದಕ್ಕೆ ವ೦ದನೆಗಳು.

PARAANJAPE K.N. said...

ಸಾಗರದಾಚೆಯ ನಾಡಿನಲ್ಲಿ ಗಣಪನ ಹಬ್ಬದ ಸ೦ಭ್ರಮ ಕ೦ಡು ಖುಷಿಯಾಯಿತು. ಚೆನ್ನಾಗಿವೆ ಫೋಟೋಗಳು

shivaballava said...

It is a great pleasure to read and watch the photographs of Ganeshustov. By the by i would like to contact Mr. satish Poojay and Shanker Poojary. I have something to sent them by email. Let them contact me to my email:shivaballava@gmail.com

raviraj said...

ganeshana bagge sagradache iruva preeti hagu nimma barahakke abhinandane

ಧರಿತ್ರಿ said...

ನಿಮ್ಮ ಸಂಭ್ರಮದಲ್ಲಿ ನಾವೂ ಭಾಗಿ...
ಅಲ್ಲಿ ಕನ್ನಡದ ಕಲರವ ಕಂಡು ಖುಷಿ ಆಯಿತು
-ಧರಿತ್ರಿ

ಅಹರ್ನಿಶಿ said...

ಪರಾ೦ಜಪೆ ಸರ್,ಶಿವಬಲ್ಲವ ಸರ್,ರವಿರಾಜ್ ಸರ್,ಧರಿತ್ರಿ ಮೇಡ೦...ಬ್ಲಾಗಿಗೆ ಬ೦ದು ಕಾಮೆ೦ಟಿಸಿದ್ದಕ್ಕಾಗಿ ವ೦ದನೆಗಳು.

Harisha - ಹರೀಶ said...

ಭಾರತದಲ್ಲಿಯೇ ಜನ ಹಬ್ಬ-ಹರಿದಿನಗಳಿಂದ ದೂರ ಸರಿಯುತ್ತಿರುವಾಗ ದೂರದ ದೇಶದಲ್ಲಿದ್ದುಕೊಂಡು ಈ ರೀತಿ ವಿಜೃಂಭಣೆಯಿಂದ ಹಬ್ಬ ಆಚರಿಸಿದ್ದೀರಲ್ಲ.. ನಿಜಕ್ಕೂ ಗ್ರೇಟ್!

AntharangadaMaathugalu said...

ಶ್ರೀಧರ್ ಸಾರ್...
ನಿಮ್ಮ ಗಣೇಶ ಉತ್ಸವ ನೋಡಿ ತುಂಬಾ ಖುಶಿ ಆಯಿತು. ದೇಶ ಬಿಟ್ಟು ಬೇರೆ ದೇಶದಲ್ಲಿರುವ ಕಡೆಗೇ ಗಣಪನನ್ನು ಕರೆಸಿಕೊಂಡು ಆರಾಧಿಸಿದ್ದೀರಿ. ನಿಮ್ಮ ಬರಹವೂ ಪೂರಕವಾಗಿದೆ. ಒಮ್ಮೆ ನನ್ನ ಬ್ಲಾಗ್ ಗೂ ಭೇಟಿ ಕೊಡಿ..
http://antharangadamaathugalu.blogspot.com/

ಶ್ಯಾಮಲ

baragur virupaksha said...

ಏನಪ್ಪಾ..ಗುರು..ದೂರದಲ್ಲಿದ್ದರೂ ಕನ್ನಡದ ಅಭಿಮಾನ, ಕನ್ನಡದ ಬರವಣಿಗೆ ಎಲ್ಲವೂ ಇದೆಯಲ್ಲಾ..ಥ್ಯಾಂಕ್ಸ್