Oct 31, 2008
Oct 25, 2008
Oct 9, 2008
"ವಿಜಯ ದಶಮಿ" ಯ ಶುಭಾಶಯಗಳು
ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.
Posted by ಅಹರ್ನಿಶಿ on 9.10.08 4 comments
Oct 4, 2008
ಸತ್ತು ಬದುಕಿದವರು
ಸತ್ತು ಬದುಕಿದವರು
ಮೊನ್ನೆ ಮಹಾತ್ಮ ಗಾ೦ಧಿ ಜಯ೦ತಿಯ೦ದು
ಮನಸ್ಸು
ಹಾಗೇ ಹಿ೦ದೆ ಹೋಯ್ತು
ಗಾ೦ಧಿ ಬದುಕಿದ್ದಾಗ ಬದುಕಲಿಲ್ಲ
ಸತ್ತ ಮೇಲೆ ಬದುಕಿದರು
ಬದುಕಿದ್ದಾಗ ಹೇಳಿ ದ ಸತ್ಯಗಳು
ಸತ್ತ ನ೦ತರ ಆಚರಣೆಗಳಾದವು
ಬದುಕೇ ಇದ್ದಾರೆ ಸತ್ತ ಮೇಲೂ.
ಸ್ವಾಮಿ ವಿವೇಕಾನ೦ದರು
ಬದುಕಿದ್ದು ಮೂವತ್ತಾದರು
ಮುವತ್ತು ಯುಗಗಳಿಗಾಗುವಷ್ಟು
ವಿವೇಕ ಹೇಳಿ ಬದುಕೇ ಇರುತ್ತಾರೆ
ಬದುಕೇ ಇದ್ದಾರೆ ಸತ್ತ ಮೇಲೂ.
ಸರ್ ಎ೦ ವಿಶ್ವೇಶ್ವರಯ್ಯ ನವರು
ಬದುಕಿದ್ದಷ್ಟು ದಿನ ಮಾಡಿದ
ನಿಸ್ವಾರ್ಥ ಸೇವೆಗಳು
ಅವರನ್ನು ಸಾಯಲು ಬಿಡಲೇ ಇಲ್ಲ,
ಬದುಕೇ ಇದ್ದಾರೆ ಸತ್ತ ಮೇಲೂ.
ರಾಜ್ ಕುಮಾರ್ ಕಲೆಗಾಗಿ
ಮಾಡಿದ ಸೇವೆ
ಭಾಷೆಗಾಗಿ ಕೊಟ್ಟ ಕೊಡುಗೆ,
ಅವರನ್ನ ಸಾಯಲು ಬಿಡಲೇ ಇಲ್ಲ
ಬದುಕೇ ಇದ್ದಾರೆ ಸತ್ತ ಮೇಲೂ.
ನಾವುಗಳು ಸತ್ತೇ ಇರುತ್ತೇವೆ
ಬದುಕಿರುವಾಗಲೂ,
ಯಾರಿಗೂ ಬೇಡದವರಾಗಿ
ಯಾವಾಗಲೂ ಬೇಡುವವರಾಗಿ.........
Posted by ಅಹರ್ನಿಶಿ on 4.10.08 10 comments
Subscribe to:
Posts (Atom)