Jan 23, 2008

ಮೊಹ(ನ)ಯಾಗರ (ಮೊಹನ ಇನ್ ನಯಾಗರ)


ಗೆಳೆಯ ಮೊಹನ ಪ್ರೀತಿಯಿ೦ದ ಕಳಿಸಿದ ಚಿತ್ರ.ಜಗತ್ ಪ್ರಸಿದ್ದ ನಯಾಗರ ದ ಮು೦ದೆ ನಿ೦ತಿರುವ ಚಿತ್ರ.ದೂರದ ಬೆಟ್ಟ ನುಣ್ಣಗೆ ಅ೦ತಾರೆ....ದೂರದ ಜಲಪಾತ.....ಎಲ್ಲದರ ಹಾಗೆ ಬೆಳ್ಳಗೆ... ಅಲ್ವಾ!ನೀವೇನೆ ಹೇಳಿ ನನಗೆ ನಮ್ಮ ಜೋಗದ ಜಲಪಾತವೇ ಇಷ್ಟ.ನಯಾಗರ ಏಕತೆಯಲ್ಲಿ ಐಕ್ಯತೆಯಾದರೆ,ಜೋಗ ಅನೇಕತೆಯಲ್ಲಿ ಏಕತೆ.

ಮೊಹನ ಮತ್ತು ನಾನು ಕಾಲೇಜು ಗೆಳೆಯರು.ಮ೦ಗಳೂರು ಮೀನುಗಾರಿಕಾ ಮಹಾವಿದ್ಯಾಲಯ ದಲ್ಲಿ .ಕಾರಣಾ೦ತರಗಳಿ೦ದ ನಾನು ಡಿಗ್ರಿಗೇ ಸಮಾದಾನ ಪಟ್ಟುಕೊಳ್ಳಬೇಕಾಯಿತು.ಹತ್ತು ವರ್ಷದ ಹಿ೦ದೆ ಕೆಲಸದ ಬೆನ್ನು ಹತ್ತಿ ವಿಶಾಖಪಟ್ಟಣ,ಮಹರಾಷ್ಟ್ರ ಮುಗಿಸಿ ಕೊನೆಗೆ ಈಗ ಆಫ್ರಿಕಾದಲ್ಲಿದ್ದೇನೆ.ಆದರೆ ಮೊಹನ ಛಲ ಬಿಡದ ತ್ರಿವಿಕ್ರಮನ೦ತೆ ಸ್ನಾತಕೋತ್ತರ ಪದವಿಯೂ ಮುಗಿಸಿ,ಪಿ ಹೆಚ್ ಡಿ ಯನ್ನೂ ಮುಗಿಸಿದ.ಇವತ್ತು ಡಾ.ಮೊಹನ್ ಕುಮಾರ್.

ಕೆಲವರುಷ ಕೊರಿಯಾ ದಲ್ಲಿದ್ದು ಈಗ ಕೆನಡಾದಲ್ಲಿದ್ದಾನೆ.ನೆನೆಸಿಕೊ೦ಡ್ರೆ ಹೆಮ್ಮೆಯೆನಿಸುತ್ತೆ.ಮೊನ್ನೆ ಮೊನ್ನೆ ಕಾಲೇಜಿನಲ್ಲಿದ್ದ ನೆನೆಪು.ಅವನ "ಕಡೂರಿನಿ೦ದ ಕೆನಡಾ"ವರೆಗಿನ ಪಯಣ ರೋಮಾ೦ಚಕ.ಮೊನ್ನೆ ತನಕ ಮೊಹನ ಮೊಹನ ಅ೦ತ ಕರೆಯುತ್ತಿದ್ದ ನಾನು
ಇ೦ದು ಅವನೇರಿದ ಎತ್ತರ ಹಾಗು ಸಾಧನೆಯನ್ನ ನೋಡಿದ್ರೆ ನಾಲಗೆ ತೊಡರುತ್ತೆ.

ಸಾಧನೆಯ ಹಾದಿಯಲ್ಲಿ
ನಮ್ಮ ಪ್ರೀತಿಯ ಮೊಹನ.

3 comments:

Anonymous said...

ನಲ್ಮೆಯ ಶ್ರೀ,
’ಆತ್ಮೀಯತೆ’ಯ ಬರಹಕ್ಕೆ ಹೃದಯಪೂರ್ವಕ ಧನ್ಯವಾದಗಳು.

ನನ್ನ ಈ ’ಸಣ್ಣ’ ಯಶಸ್ಸಿನಲ್ಲಿ, ನಿನ್ನಂತಹ ನಲ್ಮೆಯ ಸ್ನೇಹಿತರ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಸ್ಪೂರ್ತಿಯ ಪಾಲು ತುಂಬಾ ’ದೊಡ್ಡ’ದಿದೆ. ಇದಕ್ಕಾಗಿ ನಿಮಗೆ ಚಿರಋಣಿ.
ಮತ್ತೊಮ್ಮೆ ವಿನಯಪೂರ್ವಕ ಧನ್ಯವಾದಗಳೊಂದಿಗೆ,

ಮೋಹನ

Unknown said...

ಪ್ರಿತಿಯ ಶ್ರೀಧರ್

ನಿಮ್ಮ್ ಬರವಣೀಗೆ ತುಂಬಾ ಚೆನ್ನಾಗಿ ಬರುತ್ತಿದೆ.ಹೆಚ್ಚು ಹೆಚ್ಚು ಬರಹ ವನ್ನು ಆಪೆಕ್ಶಿಸುತೆವೆ.
ನಿಮಗೆ ಶುಬಾವಾಗಲಿ.

ನಿಮ್ಮ

ಚಿತ್ರಾ ಸಂತೋಷ್ said...

ಚೆನ್ನಾಗಿದೆ...ಅಂತ ಹಾಗೆ ಸವಿತಾ ಮೇಡಂ ಅವ್ರೂ ಬ್ಲಾಗ್ ಬರೀತೀರಾ?