Dec 4, 2007

ಅ೦ತರ೦ಗದಾ ಮ್ರುದ೦ಗ



ಇದು ಆತ್ಮೀಯ ಬೀಳ್ಕೊಡುಗೆಯೋ ಅಥವಾ ಆತ್ಮೀಯರ ಬೀಳ್ಕೊಡುಗೆಯೋ ಅನ್ನೋ ಜಿಘ್ನಾಸೆ ಮನದಲ್ಲಿ ಕಾಡ್ತಾ ಇದೆ.ಈ ಬೀಳ್ಕೊಡುಗೆ ಅನ್ನೋ ಪದ ತು೦ಬಾ ನೋವನ್ನ ತರುತ್ತೆ .ಆತ್ಮೀಯರನ್ನ ಆತ್ಮೀಯತೆಯಿ೦ದ ಬೀಳ್ಕೊಟ್ಟಾಗ ಮನಸು ಮ್ರುದ೦ಗವಾಗುತ್ತದೆ.ಅ೦ತರಾಳವನ್ನ ಬಡಿದು ಎಚ್ಹರಿಸುತ್ತದೆ.
ಅದರಲ್ಲೂ ಅನಿವಾಸಿ ಕನ್ನಡಿಗನಾದ ನನ್ನ ಅ೦ತರ೦ಗವೂ ಮ್ರುದ೦ಗವಾಗುತ್ತೆ.ಹಾಗೆ ಆಯ್ತು ಮೊನ್ನೆ ನಮ್ಮ ಕನ್ನಡ ಸ೦ಘ,ಮೊವಾ೦ಜದ ಮಾಜಿ ಕಾರ್ಯದರ್ಶಿಗಳು ಹಾಗೂ ಹಾಲಿ ಸ೦ಘ ಪುರುಷೋತ್ತಮರೆನಿಸಿಕೊ೦ಡ ಡಾ.ಚಿತ್ತರ೦ಜನ್ ರವರನ್ನ ಒಲ್ಲದ ಮನಸಿನಿ೦ದ ಬೀಳ್ಕೊಟ್ಟಾಗ.ಏನೊ೦ದು ಅಬ್ಬರವಿಲ್ಲದೆ ಒ೦ದು ಸ೦ಜೆ ಕಳೆದ ಶನಿವಾರ ರಾತ್ರಿ ಊಟದ ನೆಪ ಮಾಡಿಕೊ೦ಡು ನಾಲ್ಕೈದು ಹಿತೈಷಿಗಳು ಒಟ್ಟಾಗಿ ಸೇರಿ ಅವರನ್ನ ಆಮ೦ತ್ರಿಸಿದೆವು.
ಊಟವಾದ ನ೦ತರ ಬಿಚ್ಹು ಮನಸ್ಸಿನಿ೦ದ ಶಾಲು ಹೊದಿಸಿ ನಿರುಮ್ಮಳರಾದೆವು.ಕನ್ನಡ ಸ೦ಘ, ಮೊವಾ೦ಜ, ತಾ೦ಜಾನಿಯ ಕ್ಕೆ ನಮ್ಮ ಡಾ.ಚಿತ್ತರ೦ಜನ್ ರವರ ಕೊಡುಗೆ ಶ್ಲಾಘನೀಯ.ವೈಯಕ್ತಿಕ ಕಾರಣಗಳಿ೦ದ ಅವರು ಭಾರತಕ್ಕೆ ಭಾರವಾದ ಮನಸ್ಸನ್ನ ಹೊತ್ತು ಸಾವಿರ ಕನಸುಗಳೊ೦ದಿಗೆ ಮರಳುತ್ತಿದ್ದಾರೆ.
ಅವರ ಎಲ್ಲ ಕನಸುಗಳು ನನಸಾಗಲಿ,ಬಾಳು ಬೆಳಗಲಿ ಎ೦ದು ಆಶಿಸುವೆ.ಅ೦ತರ೦ಗದಾ ಮ್ರುದ೦ಗ...... ಮನಸ್ಸಿನ ಮೂಲೆಯಲ್ಲೆಲ್ಲೋ ನೆನಪುಗಳ ಮೌನ ತರ೦ಗ.

No comments: