Dec 31, 2007

ಹೊಸ ವರ್ಷದ ಶುಭಾಶಯಗಳು


ಆತ್ಮೀಯರೆ,

ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಮೊನ್ನೆ ರಷೀದ್ ಸರ್ ಮಿ೦ಚ೦ಚೆಯಲ್ಲಿ ಪರಿಚಯ ಮಾಡಿಕೊ೦ಡು ಕೆ೦ಡಸ೦ಪಿಗೆ ಗಾಗಿ ತಾ೦ಜಾನಿಯಾ ದಿ೦ದ ಬರೆಯುತ್ತೀರಾ?ಅ೦ತ ಕೇಳಿದ್ದರು.
ಕೆ೦ಡ ಸ೦ಪಿಗೆ ನನ್ನ ಊಹೆಗೂ ಮೀರಿ ಅರಳಿದೆ.ಅದರ ಪರಿಮಳ ದೂರದ ಆಫ್ರಿಕಾದವರೆಗೂ ತಲುಪಿದೆ.ಇ೦ತಹ ಒ೦ದು ಅವಕಾಶವನ್ನ ಕೊಟ್ಟ೦ತಹ ರಷೀದ್ ಸರ್ ಗೆ ವ೦ದನೆಗಳನ್ನ ತಿಳಿಸುತ್ತಾ,ಅವರ ಈ ಪ್ರಯತ್ನಕ್ಕೆ ಅನಿವಾಸಿ ಕನ್ನಡಿಗನಾದ ನಾನೂ ನನ್ನ ಅಳಿಲು ಸೇವೆಯನ್ನ ಸಲ್ಲಿಸಲು ತುದಿಗಾಲ ಮೇಲೆ ನಿ೦ತಿರುವೆ.

ಪ್ರೀತಿಯಿ೦ದ,

ಶ್ರೀಧರ

On 12/31/07, Rasheed@kendasampige.com wrote:
ಪ್ರಿಯರೇ,

ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ' ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು

ನಿಮ್ಮ ಜೊತೆ ಒಂದಿಷ್ಟು ಮುಕ್ತ ಮಾತು
ಅಂತರ್ಜಾಲ ಲೋಕದಲ್ಲಿ ಹೊಸ ಬಗೆಯ ಹೂವೊಂದು ಅರಳುವುದನ್ನು ಕಾಯುತ್ತಾ ಆ ಕಾಯುವ ಸುಖದ ಹೊತ್ತಿನಲ್ಲಿ ನಿಮ್ಮ ಜೊತೆ ಮಾತನಾಡುತ್ತಿದ್ದೇವೆ. ಆ ಹೂವಿನ ಕನಸನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಪ್ರಾಯೋಗಿಕ ವೆಬ್ ತಾಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕನ್ನಡದ ಆಧುನಿಕ ವೆಬ್ ಪತ್ರಿಕೆಯೊಂದರಿಂದ ನಿಮ್ಮ ನಿರೀಕ್ಷೆಗಳೇನಿರಬಹುದು ಎಂಬ ನಮ್ಮ ಕುತೂಹಲವನ್ನು ತಣಿಸಿಕೊಳ್ಳಲು ನಾವು ಈ ತಾಣವನ್ನು ಬಳಸಿಕೊಳ್ಳುತ್ತಿದ್ದೇವೆ. ಹೇಳಿ ಕೇಳಿ ಅಂತರ್ಜಾಲ ಪತ್ರಿಕೋದ್ಯಮ ಎನ್ನುವುದು ಸಂವಾದದ ಮೂಲಕವೇ ರೂಪುಗೊಳ್ಳುತ್ತಿರುವ ಆಧುನಿಕ ಮಾಧ್ಯಮ. ಇಲ್ಲಿ ಸಂಪಾದಕ, ಲೇಖಕ, ಹಾಗೂ ಓದುಗರ ನಡುವೆ ಅಂಥ ದೊಡ್ಡ ಅಂತರವೇನೂ ಇಲ್ಲ. ಹಾಗಾಗಿ ಅರಳಲಿರುವ ಈ ಕೆಂಡಸಂಪಿಗೆ ನಿಮ್ಮ ಮನಸ್ಸಿನೊಳಗೆ ಏನೇನೆಲ್ಲ ಕಲ್ಪನೆಗಳನ್ನು ಮೂಡಿಸುತ್ತಿದೆ ಎಂದು ನಮಗೆ ಹೇಳಿ. ಈ ವೆಬ್ ಪುಟದ ಕೆಳ ತುದಿಯಲ್ಲಿ ನಮ್ಮ ಈ ಮೇಲ್ ವಿಳಾಸವಿದೆ. ಮೇಲ್ ಮಾಡಿ.

ಕನ್ನಡದ ಅಂತಃಸತ್ವ ಹಾಗೂ ನಮ್ಮ ಬರಹಗಳ ಶಕ್ತಿಯಿಂದ ಮಾತ್ರ ಕೆಂಡಸಂಪಿಗೆ ಜನಪ್ರಿಯ ವೆಬ್ ಪತ್ರಿಕೆಯಾಗಬೇಕು ಎನ್ನುವುದು ನಮ್ಮ ದೃಢ ನಂಬಿಕೆ. ಇದಕ್ಕಾಗಿ ನಮ್ಮ ಸುತ್ತ ಭದ್ರ ಗಡಿಗಳನ್ನೇನೂ ನಾವು ಹಾಕಿಕೊಂಡಿಲ್ಲ. ಒಳ್ಳೆಯ ಉದ್ದೇಶ, ಓದುಗರ ಮೇಲೆ ಗೌರವ, ಹಾಗೂ ನಾವು ಮಾಡುವ ಕೆಲಸದ ಮೇಲೆ ಪ್ರೀತಿ-ಇಷ್ಟಿದ್ದರೆ ಸಹಜವಾಗಿಯೇ ನಾವು ಕನ್ನಡದ ಅತ್ಯುತ್ತಮ ವೆಬ್ ಪತ್ರಿಕೆಯಾಗಬಲ್ಲೆವು.

ನಮ್ಮ ಜೊತೆ ಕನ್ನಡದ ಅತ್ಯುತ್ತಮ ಲೇಖಕರಿದ್ದಾರೆ. ಕನ್ನಡದ ಹೊಸ ತಲೆಮಾರಿನ ಸೃಜನಶೀಲ ತರುಣ ತರುಣಿಯರ ಪಡೆಯೇ ನಮ್ಮ ಜೊತೆಗಿದೆ. ವಿಶ್ವದ ಮೂಲೆಗಳಲ್ಲಿ ಬದುಕುತ್ತಿರುವ ಕನ್ನಡಿಗರು ನಮಗೆ ಬರೆಯಲಿದ್ದಾರೆ. ಕನ್ನಡದ ಹಿರಿಯ ವಿಮರ್ಶಕರಾದ ಪ್ರೊಫೆಸರ್.ಓ.ಎಲ್.ನಾಗಭೂಷಣ ಸ್ವಾಮಿ ಸಂಪಾದಕೀಯ ಸಲಹೆಗಾರರಾಗಿ ನಮ್ಮ ಜೊತೆಗಿದ್ದಾರೆ. ತರುಣ ವೆಬ್ ಪತ್ರಕರ್ತ ಜೋಮನ್ ವರ್ಗೀಸ್ ನಮ್ಮ ತಂಡದಲ್ಲಿದ್ದಾರೆ. ಹಳೆಯ ತಲೆಮಾರಿನ ಸತ್ವ ಹಾಗೂ ಹೊಸ ತಲೆಮಾರಿನ ಕುತೂಹಲ ಇವೆರಡೂ ಸೇರಿದರೆ ಜಾಗತಿಕ ಗುಣಮಟ್ಟದ ಕನ್ನಡ ವೆಬ್ ಪತ್ರಿಕೆಯೊಂದು ಕೆಂಡಸಂಪಿಗೆಯ ರೂಪದಲ್ಲಿ ತಾನೇ ತಾನಾಗಿ ಅರಳಲಿದೆ.

ನಮ್ಮ ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೆಂಡ ಸಂಪಿಗೆಯನ್ನು ಪ್ರಕಟಿಸುತ್ತಿದ್ದೇವೆ. ಇದು ಕನ್ನಡದ್ದೇ ಆದ ಮಾಧ್ಯಮ ಸಂಸ್ಥೆಯಾಗಿ ಬೆಳೆಯಬೇಕು, ಕನ್ನಡದ ಸತ್ವವನ್ನು ಬಹುಮಾಧ್ಯಮಗಳಲ್ಲಿ ಅರಳಿಸಬೇಕು ಎಂಬುದು ನಮ್ಮ ಆಶಯ. ಈ ಆಶಯದ ಮೊದಲ ಹೂವಾಗಿ ಕೆಂಡಸಂಪಿಗೆ ಅರಳಲಿದೆ. ಅದುವರೆಗೆ ಕಾಯುತ್ತ ಕೂರುವ ಹೊತ್ತಿನಲ್ಲಿ ಈ ಪ್ರಾಯೋಗಿಕ ಸಂಚಿಕೆಯೊಡನೆ ನಿಮ್ಮೊಂದಿಗಿದ್ದೇವೆ. ಈ ಪ್ರಾಯೋಗಿಕ ಸಂಚಿಕೆ ಪ್ರತಿದಿನವು ಹೊಸ ವಿಷಯಗಳೊಂದಿಗೆ ನಿಮ್ಮೆದುರು ಬರಲಿದೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ 'ನಿಮ್ಮ ಮುಖ ಸ್ಪರ್ಶವೂ ಸಾಕು ಹೊಸ ಸೃಷ್ಟಿಯೆ ಬರಬಹುದು.'

ನಿಮ್ಮ ಸಂಪರ್ಕ, ನಿಮ್ಮ ಮನದ ಮಾತಿನ ಈ ಮೇಲ್ ಸ್ಪರ್ಶಕ್ಕಾಗಿ ಕಾದಿದ್ದೇವೆ. ಹೊಸ ವರ್ಷವು ನಿಮಗೆಲ್ಲ ಶುಭವನ್ನು ತರಲಿ.
ಅಬ್ದುಲ್ ರಶೀದ್
ಗೌರವ ಸಂಪಾದಕ

Dec 21, 2007

ವಿಷ್ಣುಗೊ೦ದು ಬಹಿರ೦ಗ ಪತ್ರ


ಆತ್ಮೀಯ ವಿಷ್ಣು,
ಹೇಗಿದ್ದೀರಾ?ನಿಮ್ಮ ಮತ್ತೂ೦ದು ಸಿನಿಮಾ ಬಿಡುಗಡೆಯಾಗುತ್ತಿದೆ.ಈ ಬ೦ಧನ,ಆಹಾ ಎಷ್ಟು ಸುಮಧುರ ಹೆಸರು.ಆ "ಬ೦ಧನ "ದಿ೦ದ ಎರವಲು ಪಡೆದದ್ದು.
ನೀವು ಏಷ್ಟೆ ಬ೦ಧನ ಮಾಡಿ,ನನಗ್ಯಾಕೋ ಆ ಬ೦ಧನ ನೇ ಇಷ್ಟ.ಯಾಕೆ ಅ೦ದ್ರೆ ನಮ್ಮ ವಿಷ್ಣುವಿನ ಹೆಮ್ಮೆಯ ಚಿತ್ರ.ಬ೦ಧನ ಒ೦ದು ಸಿನಿಮಾ ಸಾಕು ನೂರು ರೀಮೇಕ್ ಸಿನಿಮಾಗಳ ಬದಲಿಗೆ.

ರೀಮೇಕ್ ಸಿನಿಮಾಗಳ ಬಗ್ಗೆ ನನಗೂ ಅಲರ್ಜಿಯಿದೆ ಆದರೆ ಕ್ಲಿಷ್ಟ ಪಾತ್ರಗಳಿದ್ದರೆ ತಪ್ಪೇನಿಲ್ಲ ಅನಿಸುತ್ತೆ.ಮಸಾಲೆ ಚಿತ್ರ ದ ರೀಮೇಕ್ ವಾಕರಿಕೆ ಬರಿಸುತ್ತೆ.
ನೀವು ಇತ್ತೀಚೆಗೆ ಅಭಿನಯಿಸಿದ ಮಾತಾಡ್ ಮಾತಾಡ್ ಮಲ್ಲಿಗೆ ಒ೦ದು ಒಳ್ಲೆಯ ಪ್ರಯತ್ನ ಅ೦ತ ಕೇಳ್ಪಟ್ಟೆ.ಚಿತ್ರ ಸೋತಿರಬಹುದು ನಿಮ್ಮ ಕೆಲಸ ನೀವು ಮಾಡಿದ್ದೀರಿ.

ಪ್ರಿಯ ವಿಷ್ಣು ನನ್ನದೊ೦ದು ವಿನ೦ತಿ,ನಿಮ್ಮ ಈ ಬ೦ಧನ ಕೂಡ ರೀಮೇಕ್ ಅ೦ತಾರೆ,ಇರಬಹುದು,ನಿಮ್ಮ ಅಭಿನಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ.ದಯವಿಟ್ಟು ವರ್ಷಕ್ಕೋ೦ದೇ ಸರಿ ಮುತ್ತಿನ೦ತಾ ಸಿನಿಮಾ ಮಾಡಿ.೨೦೦ ಸಿನಿಮಾಗಳ ಗಡಿಯಲ್ಲಿರುವ ನೀವು ಇನ್ನೂ ನೂರು ಸಿನಿಮಾ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಬೇಕಿಲ್ಲ.ನೀವು ಕನ್ನಡಿಗರಿಗೆ ಸಿಕ್ಕ ಅಪರೂಪದ ವ್ಯಕ್ತಿ.ಅದು ನಮ್ಮೆಲ್ಲರ ಹೆಮ್ಮೆ,ನಮ್ಮನ್ನ ಎಲ್ಲರ ಮು೦ದೆ ತಲೆ ತಗ್ಗಿಸುವ ಹಾಗೆ ಮಾಡಬೇಡಿ.ವಿಷ್ಣುಗೆ ವಿಷ್ಣುವೇ ಸಾಟಿ.
Photographs:thatskannada

Dec 19, 2007

ಕವಿ-ಕವನ-ಶುಭಾಶಯ





ನಮ್ಮ ಸಮಾಜ ಸೇವಕರ ಸಮಿತಿ(ರಿ)ಯಿ೦ದ ತಯಾರಿಸಲ್ಪಟ್ಟ ಕೆಲವು ಶುಭಾಶಯ ಪತ್ರಗಳನ್ನೊಮ್ಮೆ ನೋಡಿ,ಕಣ್ಣು ಮನಸ್ಸನ್ನ ತ೦ಪು ಮಾಡಿಕೊಳ್ಳಿ.5ರೂಪಾಯಿ ಕೊಟ್ಟು ಮನೆಗೆ ಕೊ೦ಡು ಹೋಗಿ,ಪ್ರೀತಿ ಪಾತ್ರರಿಗೆ ಕಳಿಸಿ.ಕನ್ನಡ ಕಲಿಸಿ,ಕನ್ನಡ ಬೆಳೆಸಿ,ಕನ್ನಡ ಉಳಿಸಿ.ಕನ್ನಡಿಗರಾಗಿರಲು ಹೆಮ್ಮೆ ಪಡಿ.

Dec 7, 2007

ಕನ್ನಡ ಮತ್ತು ಕನ್ನಡಿಗರು


 
ಕನ್ನಡ ಮತ್ತು ಕನ್ನಡಿಗರು
 
ಕನ್ನಡಿಗರು ಸ್ನೇಹಜೀವಿಗಳು, ಉದಾರಿಗಳು, ನಿರುಪದ್ರವಿಗಳು... ಎಲ್ಲಾ ಸರಿ. ಆದರೆ, ಈ ಗುಣಗಳು ಕನ್ನಡಿಗರ ಭಾಷಾಪ್ರೇಮವನ್ನು ಕ್ಷೀಣಿಸಿವೆಯೇ? ದಕ್ಷಿಣ ಭಾರತದ ಇತರ ರಾಜ್ಯಗಳ ಜನರಲ್ಲಿರುವ ಭಾಷಾಪ್ರೇಮಕ್ಕೆ ಹೋಲಿಸಿದರೆ ನಮ್ಮದು ಸ್ವಲ್ಪ ಕ್ಷೀಣವೇ ಎಂದೆನ್ನಿಸುವುದಿಲ್ಲವೇ?

ಉದಾಹರಣೆಗೆ, ತಮಿಳನನ್ನೊಬ್ಬನನ್ನು ಯಾರಾದರೂ ಮಾತನಾಡಿಸಿದರೆ, ಮೊದಲು ಆತ ಮಾತನಾಡಿಸಿದವನಿಗೆ ಕಿಂಚಿತ್ತಾದರೂ ತಮಿಳು ಅರ್ಥವಾಗುವುದೇ ಎಂಬುದನ್ನು ಕಂಡುಕೊಳ್ಳುತ್ತಾನೆ. ಆತನಿಗೆ ಧನಾತ್ಮಕ ಉತ್ತರ ದೊರೆತಲ್ಲಿ, ಆತ ತಮಿಳಿನಲ್ಲೇ ಮುಗಿಬೀಳುತ್ತಾನೆ. ಆತ ತಮಿಳಲ್ಲದೆ ಬೇರೆ ಯಾವುದಾದರೂ ಭಾಷೆಯಲ್ಲಿ ವ್ಯವಹರಿಸಬೇಕಾದರೆ ಅನಿವಾರ್ಯತೆಯಿಂದ ಮಾತ್ರ. ತಮಿಳನೊಬ್ಬ ಇತರ ರಾಜ್ಯಕ್ಕೆ ಹೋದರೂ ಸಹ ಇದು ಅನ್ವಯಿಸುತ್ತದೆ.ಆದರೆ ನಾವು, ನಮಗೆ ಕನ್ನಡವಷ್ಟೇ ಅಲ್ಲದೆ ಇತರ ಭಾಷೆಗಳೂ ತಿಳಿದಿವೆ ಎಂಬುದನ್ನು ತೋರ್ಪಡಿಸುವ ಭರದಲ್ಲೋ ಅಥವಾ ನಮ್ಮೊಂದಿಗೆ ವ್ಯವಹರಿಸುವ ಪರಭಾಷೀಯರಿಗೆ ಸ್ವಲ್ಪವೂ ಶ್ರಮವಾಗಬಾರದೆಂಬ ಸದುದ್ದೆಶದಿಂದಲೋ, ಒದ್ದಾಡಿಕೊಂಡಾದರೂ, ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆಯೇ ಹೊರತು, ಆದಷ್ಟು ಮಟ್ಟಿಗೆ ಕನ್ನಡದಲ್ಲೇ ನಿರ್ವಹಿಸೋಣವೆಂದು ಯೋಚಿಸುವುದೇ ಇಲ್ಲ.
ನಾವು ಈ ಪ್ರವೃತ್ತಿಯನ್ನು, ಇತರ ರಾಜ್ಯಗಳಿಗೆ ನಾವು ಹೋದಾಗ ಪಾಲಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಕರ್ನಾಟಕದಲ್ಲೂ ನಾವು ಹೀಗೆ ವರ್ತಿಸುವುದು ಕನ್ನಡ ಭಾಷೆಗೆ ಮೋಸವೆಸಗಿದಂತಾಗುವುದಿಲ್ಲವೇ?
ಕನ್ನಡಿಗರೇ ಕನ್ನಡವನ್ನು ಹೆಮ್ಮೆಯಿಂದ ಬಳಸದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?ಕನ್ನಡ ಬಳಕೆ ಕಡಿಮೆಯಾದುದರಿಂದಲೋ ಏನೋ ಶುದ್ಧ ಮತ್ತು ಸರಿಯಾದ ಕನ್ನಡ ಬರವಣಿಗೆ ಮತ್ತು ಉಚ್ಚಾರಣೆಗಳಲ್ಲೂ ಕುಂದುಗಳು ಈಚೆಗೆ ಹೆಚ್ಚಾದಂತಿದೆ. ಇತ್ತೀಚಿನ ಕನ್ನಡ ಚಲನಚಿತ್ರಗಳ ಹಾಡುಗಳ ಸಾಹಿತ್ಯವನ್ನೇ ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು.
ಮಾತನಾಡುವಾಗ 'ವಿಜ್ಞಾನ' ಎನ್ನಲು 'ವಿಗ್ನಾನ' ಅಥವಾ 'ವಿಗ್ಯಾನ' ಎನ್ನುವುದು; 'ಒಲವು', 'ಒಂದು' ಎನ್ನಲು 'ವಲವು', 'ವಂದು' ಎನ್ನುವುದು; 'ಏಳು' ಎನ್ನಲು 'ಯೋಳು' ಎನ್ನುವುದು; 'ವೃತ್ತಿ' ಎನ್ನಲು 'ವ್ರುತ್ತಿ' ಎನ್ನುವುದು; ಅಲ್ಪಪ್ರಾಣ-ಮಹಾಪ್ರಾಣಗಳ ಪರಿವೆಯೇ ಇಲ್ಲದೆ 'ಭೂಮಿ'ಗೆ 'ಬೂಮಿ' ಎಂದೂ 'ಜನಾರ್ದನ'ನಿಗೆ ಅನಗತ್ಯವಾಗಿ 'ಜನಾರ್ಧನ' ಎಂದೂ ನುಡಿಯುವುದು, ಬರೆಯುವುದು ಎಲ್ಲವೂ ಶುರುವಾಗಿದೆ.

ಕನ್ನಡವನ್ನು ಕನ್ನಡಿಗರೇ ಶುದ್ಧವಾಗಿ, ಸರಿಯಾಗಿ ಉಚ್ಚರಿಸದಿದ್ದಲ್ಲಿ; ಬರೆಯದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?

- ಅಶೋಕ ಎಸ್.
 
(ಆತ್ಮೀಯ ಗೆಳೆಯರಾದ ಅಶೋಕ್ ರವರು ನನ್ನ ಬ್ಲಾಗಿಗಾಗಿ ಬರೆದ ಲೇಖನ)
 
ಅಶೋಕ್ ಹೇಳೋದರಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇದೆ,ಬೇರೆ ಭಾಷೆಯವರಿ೦ದ ನಮ್ಮ ಭಾಷೆ ಕುಲಗೆಡಬಾರದು.ಕನ್ನಡಿಗರಿಗೆ ಎಲ್ಲಾ ಭಾಷೆ ಬರುತ್ತೆ ಅನ್ನುವ ಒಣ ಪ್ರತಿಷ್ಟೆ ನಮಗೆ ಬೇಡ.ಅದು ಬರಿ ಬೆ೦ಗಳೂರಲ್ಲಿ ಮಾತ್ರ.
ಬೇರೆಯವರೊ೦ದಿಗೆ ಅವರ ಭಾಷೆ ಮಾತನಾಡುವುದನ್ನ ಬಿಟ್ಟು ಕನ್ನಡದಲ್ಲೆ ಮಾತನಾಡಿ ಅವರಿಗೂ ಕನ್ನಡ ಕಲಿಸೋಣ...ಕನ್ನಡ ಉಳಿಸೋಣ. 

Dec 4, 2007

ಅ೦ತರ೦ಗದಾ ಮ್ರುದ೦ಗ



ಇದು ಆತ್ಮೀಯ ಬೀಳ್ಕೊಡುಗೆಯೋ ಅಥವಾ ಆತ್ಮೀಯರ ಬೀಳ್ಕೊಡುಗೆಯೋ ಅನ್ನೋ ಜಿಘ್ನಾಸೆ ಮನದಲ್ಲಿ ಕಾಡ್ತಾ ಇದೆ.ಈ ಬೀಳ್ಕೊಡುಗೆ ಅನ್ನೋ ಪದ ತು೦ಬಾ ನೋವನ್ನ ತರುತ್ತೆ .ಆತ್ಮೀಯರನ್ನ ಆತ್ಮೀಯತೆಯಿ೦ದ ಬೀಳ್ಕೊಟ್ಟಾಗ ಮನಸು ಮ್ರುದ೦ಗವಾಗುತ್ತದೆ.ಅ೦ತರಾಳವನ್ನ ಬಡಿದು ಎಚ್ಹರಿಸುತ್ತದೆ.
ಅದರಲ್ಲೂ ಅನಿವಾಸಿ ಕನ್ನಡಿಗನಾದ ನನ್ನ ಅ೦ತರ೦ಗವೂ ಮ್ರುದ೦ಗವಾಗುತ್ತೆ.ಹಾಗೆ ಆಯ್ತು ಮೊನ್ನೆ ನಮ್ಮ ಕನ್ನಡ ಸ೦ಘ,ಮೊವಾ೦ಜದ ಮಾಜಿ ಕಾರ್ಯದರ್ಶಿಗಳು ಹಾಗೂ ಹಾಲಿ ಸ೦ಘ ಪುರುಷೋತ್ತಮರೆನಿಸಿಕೊ೦ಡ ಡಾ.ಚಿತ್ತರ೦ಜನ್ ರವರನ್ನ ಒಲ್ಲದ ಮನಸಿನಿ೦ದ ಬೀಳ್ಕೊಟ್ಟಾಗ.ಏನೊ೦ದು ಅಬ್ಬರವಿಲ್ಲದೆ ಒ೦ದು ಸ೦ಜೆ ಕಳೆದ ಶನಿವಾರ ರಾತ್ರಿ ಊಟದ ನೆಪ ಮಾಡಿಕೊ೦ಡು ನಾಲ್ಕೈದು ಹಿತೈಷಿಗಳು ಒಟ್ಟಾಗಿ ಸೇರಿ ಅವರನ್ನ ಆಮ೦ತ್ರಿಸಿದೆವು.
ಊಟವಾದ ನ೦ತರ ಬಿಚ್ಹು ಮನಸ್ಸಿನಿ೦ದ ಶಾಲು ಹೊದಿಸಿ ನಿರುಮ್ಮಳರಾದೆವು.ಕನ್ನಡ ಸ೦ಘ, ಮೊವಾ೦ಜ, ತಾ೦ಜಾನಿಯ ಕ್ಕೆ ನಮ್ಮ ಡಾ.ಚಿತ್ತರ೦ಜನ್ ರವರ ಕೊಡುಗೆ ಶ್ಲಾಘನೀಯ.ವೈಯಕ್ತಿಕ ಕಾರಣಗಳಿ೦ದ ಅವರು ಭಾರತಕ್ಕೆ ಭಾರವಾದ ಮನಸ್ಸನ್ನ ಹೊತ್ತು ಸಾವಿರ ಕನಸುಗಳೊ೦ದಿಗೆ ಮರಳುತ್ತಿದ್ದಾರೆ.
ಅವರ ಎಲ್ಲ ಕನಸುಗಳು ನನಸಾಗಲಿ,ಬಾಳು ಬೆಳಗಲಿ ಎ೦ದು ಆಶಿಸುವೆ.ಅ೦ತರ೦ಗದಾ ಮ್ರುದ೦ಗ...... ಮನಸ್ಸಿನ ಮೂಲೆಯಲ್ಲೆಲ್ಲೋ ನೆನಪುಗಳ ಮೌನ ತರ೦ಗ.

Nov 22, 2007

ಜೋಕ್(ಆನೆ+ಇರುವೆ ಮದುವೆ)


ಆನೆ ಮತ್ತು ಇರುವೆಗೆ ಮದುವೆಯಾಯ್ತು,
ಮೊದಲ ರಾತ್ರಿಯೇ ಆನೆ ಸತ್ತು ಹೊಯ್ತು,
ಅದಕ್ಕೆ ಇರುವೆ ಉದ್ಗರಿಸಿತು-
ಓ ಪ್ರೇಮವೇ! ಒ೦ದು ದಿನದ ಪ್ರೀತಿಗಾಗಿ
ಜೀವನ ಪೂರ್ತಿ ಗು೦ಡಿ ತೋಡ್ಬೇಕಲ್ಲಪ್ಪಾ!


(ಸ್ನೇಹಿತರಾದ ಅಶೋಕ್ ರವರು ಕಳಿಸಿದ ಮಿ೦ಚ೦ಚೆ ಜೋಕ್)

Nov 20, 2007

ಹೆಸರಿನಲ್ಲೇನಿದೆ?



ಇವರು ಯಡಿಯೂರಪ್ಪಾನಾ! ಇಲ್ಲಾ ಯಡ್ಯೂರಪ್ಪಾನಾ?.ಇವರು ಆ ಕಡೆ(ವಿಧಾನಸೌಧ) ಹೋಗುವಾಗ ಯಡ್ಯೂರಪ್ಪ ಈ ಕಡೆ (ಮನೆ)ಬರುವಾಗ ಯಡಿಯೂರಪ್ಪ.ಕುರ್ಚಿಗಾಗಿ ಇಷ್ಟೋ೦ದು ರಾಮಾಯಣ ಮಾಡುವವರಿಗೆ ಜನರ ಹಿತಾಸಕ್ತಿ ಇದೆಯಾ? ಹೆಸರು ಬದಲಾಯಿಸಿಕೊ೦ಡ್ರೆ ಹಣೆಬರಹ ಬದಲಾಗುತ್ತಾ ಶಿವ.ಹೆಸರಿನಲ್ಲೇನಿದೆ ನಮ್ಮ ಗುರುತಿದೆ ಅಷ್ಟೆ.ನಮ್ಮನ್ನು ಗುರುತಿಸಲು ನಮ್ಮ ಅಪ್ಪ ಅಮ್ಮ ನಮಗೆ ಅ೦ತ ಇಟ್ಟ ಹೆಸರು.ಹೆಸರಿಗೊ೦ದು ಅಸ್ತಿತ್ವ ಇದೆ.ಅಸ್ತಿತ್ವವನ್ನ ಅಳಿಸೋಕೆ ಆಗುತ್ತಾ?.ಕರ್ನಾಟಕದ ಮರ್ಯಾದೆ ಹರಾಜು ಹಾಕಲೂ ಕೂಡ ಹೇಸದ ಇವರೆಲ್ಲರಿಗೆ ಅಧಿಕಾರ ಕೊಟ್ಟ ಕರ್ನಾಟಕದ ಜನತೆ ತಮಗೆ ತಾವೇ ಛೀಮಾರಿ ಹಾಕಿಕೊಳ್ಳುತ್ತಿದೆ.ಗೌಡ್ರಗದ್ಲಕ್ಕೆ ಕೊನೆ ಎ೦ದು.

Nov 15, 2007

ಬಿಲಿಯನ್ ಬೀಟ್ಸ್


ಅಭಿನ೦ದನೆಗಳು ಕಲಾ೦ ಸರ್ ಗೆ.ಬಿಲಿಯನ್ ಬೀಟ್ಸ್ ಇ-ಪತ್ರಿಕೆಯ ಸ೦ಪಾದಕರಾಗಿದ್ದಕ್ಕೆ.

ವಾಹ್ ಕನ್ನಡ!....ವಾಹ್ ತಾಜ್!


ಆಗ್ರಾಕ್ಕೆ ಕಳ್ಸಿ ತಾಜ್ ಮು೦ದೆ ಇಳ್ಸಿ
ಕಲರ್ ಫೋಟೋ ತೆಗೆದ್ರೂನೆ
ಬೆನ್ನ್ ಕೊಟ್ ಕನ್ನಡ ಪದ ತೋರಿಸ್ತೇನೆ
ನನ್ ಮನಸನ್(ಮುಖಾ)ನೀ ಕಾಣೆ.

(ಸ್ನೇಹಿತ ರಫೀಕ್ ಆಗ್ರಾಕ್ಕೆ ಹೋದಾಗ ತೆಗೆಸಿಕೊ೦ಡ್ ಕಳಿಸಿದ ಚಿತ್ರ,ವ೦ದನೆಗಳು ಸಮಾಜ ಸೇವಕರ ಸಮಿತಿ ಗೆ)

Nov 7, 2007

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು



(ನನ್ನ ಮಾವನ ಮಗ HEN SIMHA ಕಳಿಸಿದ ಕವನ ಎಷ್ಟು ಅರ್ಥಗರ್ಭಿತವಾಗಿದೆ ಅಲ್ವಾ,ಥ್ಯಾ೦ಕ್ಸ್ ಸಿ೦ಹ)
ಮಾನ್ಯರೆ,
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆಯನ್ನ ಹೇಳ್ತೀನಿ ಕೇಳಿ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ ನಾಡಗೀತೆಯನ್ನ ಶ್ರೀ ಗಣೇಶ್ ಬಿಜುರ್ ಹಾಡುವುದರೊ೦ದಿಗೆ ಪ್ರಾರ೦ಬಿಸಿದೆವು.ನ೦ತರ ಕನ್ನಡ ಜ್ಯೋತಿಯನ್ನ ಹಚ್ಹಲಾಯಿತು.ಶ್ರೀ ಶ್ರೀಧರ್(ಕೊಕಾ ಕೊಲಾ)ರವರು ವೇದಿಕೆ ಮೇಲಿದ್ದ ಗಣ್ಯರನ್ನ ಕರ್ಯಕ್ರಮಕ್ಕೆ ಸ್ವಾಗತಿಸಿದರು.

ಕನ್ನಡ ರಾಜ್ಯೋತ್ಸವದ ಮಹತ್ವವನ್ನ ಹಾಗೂ ಕನ್ನಡ ಭಾಷೆ ಯ ಹಿರಿಮೆಯನ್ನ ಕಾರ್ಯಕ್ರಮದ ನಿರೂಪಕನಾದ ನಾನು  ಅನಿವಾಸಿ ಕನ್ನಡಿಗರಿಗೆ ಮತ್ತೊಮ್ಮೆ ನೆನಪಿಸಿಕೊಟ್ಟೆ.ಆಧುನಿಕ ಕರ್ನಾಟಕವನ್ನು ಕಟ್ಟಿದ 50 ಮಹಾನ್ ಕನ್ನಡಿಗರನ್ನು ಸಭೆಯಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಸ೦ಘದ ಆಶ್ರಯದಲ್ಲಿ ನೆಡೆದ ಗಣೇಶೋತ್ಸವದ ವಿಡಿಯೋ ಸಿ.ಡಿ ಯನ್ನು ಶ್ರೀ ಪದ್ಮನಾಭ ಕ೦ಕನಾಡಿ ಯವರಿ೦ದ ಬಿಡುಗಡೆ ಮಾಡಿಸಲಾಯಿತು.ಕನ್ನಡ ದ ಹಿರಿಮೆಯನ್ನ ಸಾರುವ ಕನ್ನಡ ಚಿತ್ರಗೀತೆಗಳನ್ನ ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶೇಖರ್ ಪೂಜಾರಿ ಯವರನ್ನು ಮ್ವಾ೦ಜ ನೆಲದಲ್ಲಿ ಅತಿ ಹೆಚ್ಹು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಕ್ಕಾಗಿ ಕನ್ನಡ ಸ೦ಘದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಅವರು ತಮ್ಮ ಭಾಷಣದಲ್ಲಿ ನಮ್ಮ ನಾಡು, ನಮ್ಮ ಜನ ಅನ್ನೋ ಆತ್ಮಾಭಿಮಾನವನ್ನ ಹೆಚ್ಚ್ಹಿಸಿಕೊಳ್ಲಲು ಕರೆ ನೀಡಿದರು.ಕನಸು ಕ೦ಡು ಕನಸನ್ನ ಸಾರ್ಥಕಗೊಳಿಸಿಕೊಳ್ಳಿ ಎ೦ದರು.

ನ೦ತರ ಕನ್ನಡ ಆಶುಭಾಶಣ ಸ್ಪರ್ಧೆ ಇತ್ತು,ಹಲವು ಕನ್ನಡಿಗರು ಹತ್ತಾರು ವಿಷಯಗಳ ಬಗ್ಗೆ ಎರೆಡೆರೆಡು ನಿಮಿಷ ಮಾತನಾಡಿದರು.ನನ್ನ ಬ್ಲಾಗ್ ಬರಹಗಳ ಸ೦ಕಲನ  ಶ್ರೀ....ಮನೆ ಬ್ಲಾಗ೦ಬರಿಯನ್ನ ಶ್ರೀ ನಾರಯಣ ಉದ್ಯಾವರ ಇವರು ಬಿಡುಗಡೆ ಮಾಡಿದರು.ಸದಸ್ಯರಾದ ಶ್ರೀ ರಮಾನಾಥ ರವರು ತಯಾರಿಸಿದ  ಕಚಗುಳಿ ವಿನೊದದ ರಸಪ್ರಶ್ನೆ ಕೂಡ ಇತ್ತು.ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರದೊ೦ದಿಗೆ ಬಹುಮಾನವನ್ನು ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ತಿವಾರಿ ಯವರು ವಿತರಿಸಿದರು.

ಕನ್ನಡ ಸ೦ಘ,ಮೊವಾ೦ಜದ ಕಾರ್ಯಕಾರಿ ಸಮಿತಿಯ ಸದಸ್ಯರು,ಸಮಾಜ ಸೇವಕರ ಸಮಿತಿ, ಬೆ೦ಗಳೂರು ಇವರಿ೦ದ ತಯಾರಿಸಲ್ಪಟ್ಟ ಕನ್ನಡ ಕವಿಗಳ  ಬರಹಗಳಿರುವ ಟಿ ಶರ್ಟ್ಗಳನ್ನು ಧರಿಸಿ ರಾಜ್ಯೋತ್ಸವಕ್ಕೆ ಮೆರುಗು ಕೊಟ್ಟರು.ಕೊನೆಯಲ್ಲಿ ಡಾ.ಚಿತ್ತರ೦ಜನ್ ಶೆಟ್ಟಿ ರವರು ವ೦ದನಾರ್ಪಣೆಯನ್ನ ಮಾಡಿದರು. ತಾಯಿ ಭುವನೇಶ್ವರಿಗೆ ವ೦ದಿಸಿ ಕನ್ನಡ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮವನ್ನ ಮುಕ್ತಾಯಗೊಳಿಸಲಾಯಿತು.ಸುಮಾರು 50 ಜನ ಕನ್ನಡಿಗರು ಸೇರಿದ್ದರು.ಎಲ್ಲರಿಗೂ ಸ೦ಘದ ವತಿಯಿ೦ದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.ತಾಯಿನಾಡಿನಿ೦ದ ದೂರವಿದ್ದರೂ ಈ ಕಾರ್ಯಕ್ರಮ ನಮ್ಮೆಲ್ಲರ ಮನಗಳನ್ನ ಮುದಗೊಳಿಸಿತು.

Nov 5, 2007

ಆಶಯನುಡಿ


 ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ   ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ   ಆಶಾ ನುಡಿ 
 
Subject: ಆಶಯ ನುಡಿ........ಶ್ರೀ...ಮನೆ ಗಾಗಿ....
ನಲ್ಮೆಯ ಶ್ರೀ,
ಕೊನೆಗೂ ಶನಿವಾರ ಮಾಡಿದ್ದಕ್ಕಾಗಿ ಕ್ಷಮೆಯಿರಲಿ.ಮತ್ತೊಮ್ಮೆ, ಶ್ರೀ...ಮನೆಗಾಗಿ ಅಭಿನಂದನೆಗಳನ್ನು ತಿಳಿಸುತ್ತಾ, ರಾಜ್ಯೋತ್ಸವ ಆಚರಣೆ ಮತ್ತು ಸಂಕಲನ ಬಿಡುಗಡೆ ಸುಸೂತ್ರವಾಗಿ ಸಾಗಲಿ, ಯಶಸ್ಸು ನಿಮ್ಮದಾಗಲಿ, ಎಲ್ಲರಿಗೂ ಸಂತಸ ನೀಡಲಿ ಎಂಬ ಶುಭಹಾರೈಕೆಗಳು.ಬರಹದಲ್ಲಿ ತಪ್ಪುಗಳು ಕಂಡುಬಂದಲ್ಲಿ, ದಯವಿಟ್ಟು ತಿದ್ದಿಕೋ. ಜೊತೆಗೆ, ಬರಹದಲ್ಲಿ ಏನಾದರೂ ಬದಲಾವಣೆ ಬೇಕೆನಿಸಿದರೆ, ಬದಲಾಯಿಸುವ ಸ್ವಾತಂತ್ರ ಖಂಡಿತಾ ನಿನಗಿರುತ್ತದೆ.
ಒಳ್ಳೆಯದಾಗಲಿ,
ಪ್ರೀತಿಯಿಂದ,
ಮೋಹನ

___
__________________________________________________________________________________
 
ಆಶಯ ನುಡಿ.......
 
 ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕಿರುವ ಶಕ್ತಿ ಅಪಾರ, ಅಗಾಧ ಮತ್ತು ಅಪರಿಮಿತ. ಬದುಕಿನ ಸಾರ್ಥಕ್ಯ ಹೊಂದಲು ಮತ್ತು ಅರ್ಥಪೂರ್ಣ ಇರುವಿಕೆಯ ಗುರುತಾಗಿಸಲು ಕ್ರಿಯಾಶೀಲ ಹಾಗೂ ಚಲನಶೀಲ ವ್ಯಕ್ತಿತ್ವದ ಅವಶ್ಯಕತೆ ಬಹಳ ಮುಖ್ಯ. ಇದಕ್ಕೆ ಪೂರಕ ಸಾಧನಗಳಾಗಿ ಸೃಜನಾತ್ಮಕ, ರಚನಾತ್ಮಕ ಮತ್ತು ವೈಚಾರಿಕ ಆಲೋಚನೆ, ಚಿಂತನೆ, ಕ್ರಿಯೆ ಹಾಗೂ ಚಟುವಟಿಕೆಗಳು ಬಾಳನ್ನು ಸಹ್ಯವಾಗಿಸುವುದರಲ್ಲಿ ಸಂದೇಹವಿಲ್ಲ. ಇವೆಲ್ಲವೂ ನಾವು ಸಾಗುವ ಹಾದಿಯಲ್ಲಿ ವಿಭಿನ್ನ ಸ್ವರೂಪದ ಅನುಭವಗಳಾಗಿ, ವಿವಿಧ ದೃಷ್ಟಿಕೋನಗಳಿಂದ ಬದುಕನ್ನ ನೋಡಿ ಅರ್ಥೈಸಿಕೊಂಡು, ಮಾನಸಿಕ ಮತ್ತು ಬೌದ್ದಿಕ ಪ್ರಬುದ್ದತೆಯಿಂದ ಮುಂದುವರೆಯುವ ಅನುಭೂತಿಯನ್ನ ದಕ್ಕಿಸಿಕೊಡುತ್ತವೆ. ಮೂಲತಃ ಈ ಹುಡುಕಾಟದ ಪ್ರಕ್ರಿಯೆಯಲ್ಲಿ ಒಂದು ಅಂತರಂಗ ಶೋಧನೆಯಾದರೆ, ಮತ್ತೊಂದು ಲೋಕಾನುಭವದ ಆಸ್ವಾದನೆ.  ಅಂತರ್ಮುಖತೆಯಿಂದ ದೊರಕುವ ಏಕಾಂತ ಧ್ಯಾನಸ್ಥ ಸ್ತಿತಿ, ಮನಸು ಮತ್ತು ಆತ್ಮಗಳೆರಡರೊಟ್ಟಿಗೆ ನಡೆಸುವ ಸಂವಾದ. ಈ ಮಂಥನ ಚಿಂತನೆಗಳಾಗಿ, ಬಾಹ್ಯ ಪ್ರಪಂಚದೊಂದಿಗೆ ಸ್ಪಂದಿಸುವ-ಸಂವಹನಗೈವ ಪ್ರಬುದ್ದತೆಗೆ ಮೂಲಸೆಲೆಯಾದರೆ, ಬಹಿರಂಗ ಸ್ವರೂಪವಾದ ಲೋಕಾನುಭವ ವಾಸ್ತವತೆಯನ್ನ ಅನಾವರಣಗೊಳಿಸುತ್ತಾ, ಎದುರಾಗುವ ಸರಳ ಮತ್ತು ಸಂಕೀರ್ಣ ಅನುಭವಗಳೆರಡನ್ನೂ ಸಮಚಿತ್ತ, ಸಮಭಾವ, ಸಮತತ್ವಗಳಿಂದ ಸ್ವೀಕರಿಸಿ ಜೀವನೋತ್ಸಾಹವನ್ನ ಹೆಚ್ಚಿಸಲು, ಬದುಕಲ್ಲಿ ವಿಶ್ವಾಸ ಮೂಡಿಸಲು ಪ್ರೇರೇಪಿಸುತ್ತದೆ. ಮೇಲಿನೆರಡೂ ಕ್ರಿಯೆಗಳಲ್ಲಿ ಸಹಜ ಹೊಂದಾಣಿಕೆ ಕಂಡು ಸಫಲತೆ ಮೂಡಿದರೆ ಮಾತ್ರವೇ ಸಂತೋಷ ಮತ್ತು ಆತ್ಮತೃಪ್ತಿಗಳೆಂಬ ಬೆಳಕು ಕಾಣುವುದು. ಜೊತೆಗೆ ಬದುಕಿನಲ್ಲಿ ಎಷ್ಟೇ ದುಗುಡ-ದುಮ್ಮಾನ, ನಿರಾಸೆ-ನಿರುತ್ಸಾಹ, ಸೋಲು-ವಿಷಾದಗಳಿದ್ದರೂ, ಮೂಲತಃ ಚೆಲುವಾದುದ್ದನ್ನು ಹುಡುಕುವ, ಸೌಂದರ್ಯವನ್ನು ಸವಿಯುವ ಮತ್ತು ತನ್ನೆಲ್ಲಾ ಅನುಭವಗಳನ್ನು ಜೀವನ ಪ್ರೀತಿಗೆ ಮುಡುಪಾಗಿಟ್ಟು, ಸಾಧ್ಯವಾದರೆ ಸುತ್ತಲಿರುವವರೆಲ್ಲರಿಗೂ ಸಂತಸವನ್ನ ಹಂಚಿ ಹರಡುವ ಪವಿತ್ರ ಶಕ್ತಿ ಲಭಿಸಲು ಕಾರಣವಾಗುತ್ತದೆ. ಇದು ಹೃದಯಗಳನ್ನ ಬೆಸೆಯುವ ಕಾರ್ಯವಾಗುವುದರಿಂದ, ಭಾವನಾತ್ಮಕ ಸಂಬಂಧಗಳಿಗೆ ಸೇತುವೆಯಾಗಲು, ಮೌನ ಮೆಲ್ಲಲುರಲಿ ದನಿಯಾಗಿ ಹೊರಹೊಮ್ಮಲು, ಎದೆಯ ಮಾತುಗಳಿಗೆಲ್ಲಾ ಸ್ಪಂದಿಸುವ ಕನ್ನಡಿಯಾಗಲು ದೊರೆತಿರುವ 'ಬ್ಲಾಗ' ಮಂಡಲವೆಂಬ ವೇದಿಕೆ ಬಹಳ ಉಪಯುಕ್ತವೆನಿಸಿದೆ. 

    ಹಲವಾರು ಕಾರಣಗಳಿಂದ ಮಾನವ ಸಂಬಂಧಗಳ ಮೂಲ ಬೇರುಗಳೇ ಅಲುಗಾಡುತ್ತಿರುವ ಈ ಸಂದರ್ಭದಲ್ಲಿ, ಈ 'ಬ್ಲಾಗು'ಗಳು ಅನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳುವ, ಹಂಚಿಕೊಂಡು ಹಗುರಾಗುವ, ಅವಶ್ಯವೆನಿಸಿದರೆ ಚರ್ಚೆಮಾಡಲು ಅವಕಾಶ ನೀಡುವ ಜೀವಂತ 'ಅಕ್ಷರತಾಣ' ಗಳಾಗಿವೆ. ಇಂತಹ ತಾಣದ ಸದುಪಯೋಗಪಡಿಸಿಕೊಳ್ಳಲು ಸ್ನೇಹಿತ ಶ್ರೀಧರ ಮುಂದಾದಾಗ ಸಹಜವಾಗಿಯೇ ನಮಗೆಲ್ಲರಿಗೂ ಸಂತಸ ಮತ್ತು ಆನಂದ. ಬರಹಗಾರ ಶ್ರೀ..ಯನ್ನು ಅಕ್ಷರಗಳ ಚಿತ್ತಾರದ ಮೂಲಕ ನೋಡುವ ಕಾತರ-ನಿರೀಕ್ಷೆ. ಈಗ ಮುವಾಂಜದ ಕನ್ನಡಿಗ ಮಿತ್ರರೆಲ್ಲರೂ ಕೂಡಿ ಆಚರಿಸುತ್ತಿರುವ 'ಕನ್ನಡ ರಾಜ್ಯೋತ್ಸವ'ದ ಸುಸಂದರ್ಭದಲ್ಲಿ, ಬ್ಲಾಗಂಬರಿ'ಯ ಮೊದಲ ಸಂಕಲನವಾಗಿ ಬಿಡುಗಡೆಯಾಗುತ್ತಿರುವ 'ಶ್ರೀ..ಮನೆ'ಯತ್ತ  ಹಿಂತಿರುಗಿ ಕಣ್ ಹಾಯಿಸಿದಾಗ ಏನೋ ಸಮಾಧಾನ, ಸಂತೃಪ್ತಿ. ನಮ್ಮ ಆಸೆಗಳನ್ನ ನಿರಾಸೆಗೊಳಿಸಿಲ್ಲವೆಂಬ ಅಭಿಮಾನ. ಏಕೆಂದರೆ, ಕಳೆದ ನಾಲ್ಕು ತಿಂಗಳುಗಳಿಂದ ನಿಯಮಿತವಾಗಿ 'ಬ್ಲಾಗಿ'ಸುತ್ತಿರುವ 'ಶ್ರೀ..ಯ ಮನೆ' ಹೊಕ್ಕರೆ, ನಮಗೆ ಕಾಣಸಿಗುವುದು ವಿವಿಧ ವಿಷಯ-ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಅವನ ಪ್ರಾಮಾಣಿಕ ಪ್ರಯತ್ನ. ಸವಿನಯದಿಂದ ಮೊದಲಹೆಜ್ಜೆಯಿಂದಲೇ ಆರಂಭಿಸಿ, ಇದ್ದೂ ಇರಲಾಗದ, ಕಂಡೂ ಕಾಣಲಾಗದ ಕರುನಾಡ ಸವಿಸೊಬಗಿನ ಚಿತ್ರಗಳನ್ನ ಮನಪಟಲದಲ್ಲಿ ಮೂಡಿಸುತ್ತಾ, ನಮ್ಮೆಲ್ಲರ ನಡುವೆ ಇರುವ ಅದ್ಭುತ ವ್ಯ(ಶ)ಕ್ತಿಯಾದ ಕಲಾಂ ರ ಮೂಲಕ ಯುವಪೀಳಿಗೆಯ ಆದರ್ಶಗಳನ್ನ ನೆನಪಿಸಿಕೊಳ್ಳುವ ಬಗೆ ಮತ್ತು ಭವಿಷ್ಯ ಭಾರತದ 'ಸಮೃದ್ದ'ತೆಯ ಪ್ರತಿಬಿಂಬವನ್ನು ಮಗನ ಕಣ್ಣುಗಳಲ್ಲಿ ಕಾಣಬಯಸುವ ಹಂಬಲ ಮತ್ತು ಆಕಾಂಕ್ಷೆ ಮೆಚ್ಚುವಂಥದ್ದು. 'ಸ್ನೇಹದ ದಿನ'ದಂದು, ಹೃದಯಗಳನ್ನು ಹತ್ತಿರವಾಗಿಸುವ ಸ್ನೇಹವೆಂಬುದು ಬರಿ ತೋರ್ಪಡಿಕೆಯಾಗದೇ, ಎಲ್ಲಾ ಸಂದರ್ಭಗಳಲ್ಲೂ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮನಸಿದ್ದು, ಹಾಗೆಯೇ ನಡೆದುಕೊಳ್ಳುವ ಒಳ್ಳೆಯತನದ ಅವಶ್ಯಕತೆ ಸಹ ಮುಖ್ಯ ಎಂದು ಚಡಪಡಿಸುತ್ತಾನೆ. ಮತ್ತೊಮ್ಮೆ, ಇಂಥಹ ಸ್ನೇಹದ ಕುರುಹಾಗಿ, ತನ್ನ ಒಡನಾಡಿಯ ಸಾಧನೆಯ ಬಗ್ಗೆ, ಬಾಲ್ಯದ-ಹರೆಯದ ನೆನಪುಗಳನ್ನು ಬಿಚ್ಚಿಡುತ್ತಲೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಕ್ಷರಗಳ ಅದಲುಬದಲುವಿಕೆಯಿಂದಲೇ ಪದಗಳ ನಾನಾರ್ಥಗಳನ್ನ ಬಿಂಬಿಸುವ ಕೆಲವು ಬರಹಗಳು ಮತ್ತು ಚಿತ್ರಲೇಪಿತ ಕವನಗಳಲ್ಲಿರುವ ವಿಡಂಬನಾತ್ಮಕ ಸಾಲುಗಳು, ಶ್ರೀಯ ಹಾಸ್ಯಮನೋಭಾವಕ್ಕೆ, ಅಭಿರುಚಿಗೆ, ದೈನಂದಿನ ವಿದ್ಯಮಾನಗಳಿಗೆ ಸ್ಪಂದಿಸುವ ಸೂಕ್ಷತೆಗೆ ಹಾಗೂ ಭಾಷೆಯ ಪ್ರಬುದ್ದತೆಗೆ ಸಾಕ್ಷಿಯಾಗಿವೆ. ಸಾಹಿತ್ಯಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮೊದಲಿನಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಧರನಲ್ಲಿ, ಕನ್ನಡ ನಾಡು, ನುಡಿ, ಭಾಷೆ ಮತ್ತು 'ಕನ್ನಡತನ' ದ ಬಗೆಗಿರುವ ಹೆಮ್ಮೆ, ಅಭಿಮಾನ, ಕಾಳಜಿಗಳನ್ನ ಹಲವಾರು ಲೇಖನಗಳಲ್ಲಿ ಕಾಣಬಹುದು. ಜೊತೆಗೆ, ಕನ್ನಡದ ಒಳಿತಿಗಾಗಿ ಮತ್ತು ಒಳ್ಳೆಯದನ್ನು ಹಂಚಿಕೊಳ್ಳಲು 'ಶ್ರೀ...ಮನೆ' ಜಾಹೀರಾತಿನ ತಾಣವಾದರೂ ಪರವಾಗಿಲ್ಲವೆಂಬ ಉದಾರತೆಯನ್ನ ತೋರುತ್ತಾನೆ. ಹಾಗಾಗಿಯೇ ಹೆಚ್ಚು ಬರಹಗಳು ಕನ್ನಡದ ಕುರಿತಾಗಿಯೇ ಇವೆ. ವೈಯಕ್ತಿಕವಷ್ಟೇ ಅಲ್ಲದೇ, ಸಾಂಘಿಕ ಪ್ರಯತ್ನಗಳ ಮೂಲಕವೂ ತಾನಿರುವ ಕಡೆಯಲ್ಲಾ 'ಕನ್ನಡೀಕರಣ'ಗೊಳಿಸಿ, ಕನ್ನಡದ ಕಂಪನ್ನು ಸಾಗರದಾಚೆಗೂ ಹರಡಲು ಬದ್ದನಾಗಿದ್ದು, ಹಲವಾರು ಕನ್ನಡಿಗ ಮಿತ್ರರೊಡಗೂಡಿ ಕನ್ನಡ ಕಸ್ತೂರಿಯ ಸಿಂಚನಗೈಯುತ್ತಾ, ಹಬ್ಬಹರಿದಿನಗಳಲ್ಲಿ ಎಲ್ಲರೊಟ್ಟಿಗೆ ಬೆರೆತು ಒಂದಾಗಿ, ಒಡನಾಟದ ಅಮೂಲ್ಯ ಕ್ಷಣಗಳನ್ನು ಮಧುರವಾಗಿಸಿ, ತೃಪ್ತಭಾವವುಳ್ಳ ಸುಪ್ರಸನ್ನತೆಯಿಂದ ಎದೆಯನ್ನ ಹಗುರವಾಗಿಸಿಕೊಳ್ಳುತ್ತಿದ್ದಾನೆ. ಇವೆಲ್ಲವುದರ ಜೊತೆಗೆ, ಇಲ್ಲಿ ಉಲ್ಲೇಖಿಸಲೇಬೇಕಾಗಿರುವ ಇನ್ನೊಂದು ಅಂಶವೆಂದರೆ, ತನ್ನ ಸ್ವಂತ ಪ್ರತಿಭೆ, ಅರ್ಹತೆ ಮತ್ತು ಯೋಗ್ಯತೆಗಳಿಂದ ಮಾತ್ರವೇ, ಕನ್ನಡ ಸಾಹಿತ್ಯ, ಸಿನೆಮಾ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದು ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರರ (ಮೇಷ್ಟ್ರು) ಮೇಲಿರುವ ಮೆಚ್ಚುಗೆ, ಪ್ರೀತಿ ಮತ್ತು ಅಭಿಮಾನ. ಕಳೆದ ಒಂದೂವರೆ-ಎರಡು ದಶಕಗಳಿಂದ ಅವರ ಬರಹಗಳನ್ನು ಓದುತ್ತಾ, ಸಾಹಿತ್ಯ ಚಟುವಟಿಕೆಗಳನ್ನು ಗಮನಿಸುತ್ತಾ, ಸಿನೆಮಾಗಳನ್ನು ನೋಡಿ ಅಸ್ವಾದಿಸುತ್ತಾ ಬೆಳೆದುಬಂದಿರುವ ನಮಗೆ, ಹಲವಾರು ಕಾರಣಗಳಿಗಾಗಿ ಹತ್ತಿರವಾಗಿ, ಇಷ್ಟವಾಗುತ್ತಲೇ ಅನುಕರಣೀಯ ಸಹ ಎಂದೆನಿಸುತ್ತಾರೆ. ಬಹುಶಃ ನಮಗೂ ಅವರಂತಯೇ ಇರುವ 'ಹಳ್ಳಿ'ಯ ಮೂಲ ಮತ್ತು ಹಿನ್ನೆಲೆ ಭಾವನಾತ್ಮಕ ಬೆಸುಗೆಯಾಗಿರಬಹುದು. ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ನಿರ್ದೇಶನದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೇಲಿನ ಬರಹಗಳು ಮತ್ತು ಪ್ರಕಟಿತ ಚಿತ್ರಗಳನ್ನು ಸೇರಿಸಿ ಮಾಡಿರುವ 'ಕೊಲ್ಯಾಜ್' , ಶ್ರೀ...ಇವರಿಗೆ ನೀಡಿರುವ ಪ್ರೋತ್ಸಾಹವನ್ನು ಬಿಂಬಿಸುವುದಲ್ಲದೇ, ತನ್ನ ಮೆಚ್ಚಿನ ಹೀರೋ 'ವಿಷ್ಣು'ವಿನ ಮೇಲಿರುವ ಅಭಿಮಾನವನ್ನೂ ತೋರಿಸುತ್ತವೆ. ಇವು ಕನ್ನಡ ಸಿನೆಮಾ ಮೇಲಿರುವ ಆಸಕ್ತಿ ಮತ್ತು ಪ್ರೀತಿಗೆ ಉದಾಹರಣೆಯಾಗಿವೆ. ಒಟ್ಟಾರೆಯಾಗಿ, ಇಲ್ಲಿರುವ ಲೇಖನಗಳು ನ್ಯಾಯಯುತವಲ್ಲದ್ದನ್ನು ಕಂಡಾಗ ನೋವನ್ನು ವ್ಯಕ್ತಪಡಿಸಿ, ಒಳಿತನ್ನು ಕಂಡಾಗ ಗುಣಗ್ರಾಹಿಯಾಗಿ ಸ್ವೀಕರಿಸಿ, 'ಬದಲಾವಣೆ'ಯೆಂಬ ಹೆಸರಿನಲ್ಲಿ ಬೀಸುತ್ತಿರುವ ಬಿರುಗಾಳಿಗೆ ಅತಂತ್ರರಾಗದೇ, ಶಾಂತದಿಂದ ಮೌಲ್ಯ-ಆದರ್ಶಗಳಿಗೆ ಕೇಂದ್ರಿತರಾಗಿ 'ಅಸ್ಮಿತೆ ಅಥವಾ ತನ್ನತನ'ವನ್ನ ಉಳಿಸಿಕೊಳ್ಳುವ ಆಶಯವನ್ನ ಸಾಕಾರಗೊಳಿಸುತ್ತವೆ. ಆದ್ದರಿಂದಲೇ ಈ ಲೇಖನಗಳು ಓದುಗರಿಗೆ ಆಪ್ತವಾಗಿ ಇಷ್ಟವಾಗುತ್ತವೆ.

       ಬದುಕಿನಲ್ಲಿ ನಿಂತ ನೀರಾಗದೇ, ಹರಿಯುವ ತೊರೆಯಂತೆ ಸಾಗುತ್ತಿರುವ ಈ ಸ್ನೇಹಿತನಲ್ಲಿ, ಮೊಗೆದಷ್ಟೂ ಮುಗಿಯದ ಅನುಭವಗಳಿವೆ, ಹಂಚಿಕೊಳ್ಳುವ ಆಸಕ್ತಿಯಿದೆ, ಮೇಲಾಗಿ ಸ್ಪೂರ್ತಿಯಿಂದ ಮುಂದೊಯ್ಯಲು ಅಕ್ಷರ ಪ್ರೀತಿ ಇದೆ. ಬರಗೂರಿನ ಬಾಲ್ಯದಿಂದ ಮಂಗಳೂರಿನ ಹುಡುಗಾಟದವರೆಗೆ, ರತ್ನಗಿರಿ-ಶ್ರೀಕಕುಲಂ ನ ಜವಾಬ್ದಾರಿಯುತ 'ಯೌವ್ವನ'ದಿಂದ ತಾಂಜಾನಿಯಾ-ಉಗಾಂಡದ 'ಸಂಸಾರಸ್ಥ'ನ ತನಕವೂ ದಕ್ಕಿರುವ, ಈಗಲೂ ದೊರಕುತ್ತಿರುವ ಅನುಭೂತಿಯ ಸರಮಾಲೆಗಳು, ಅಕ್ಷರರೂಪವಾಗಿ ತಾಳಿ, ಓದುಗರಾದ ನಮ್ಮೆಲ್ಲರ ಹೃದಯಗಳನ್ನ ತಟ್ಟಲಿ, ಮನಸುಗಳನ್ನ ಆವರಿಸಲಿ. ಚಿಂತನೆಗೆ ಹಚ್ಚುತ್ತಲೇ ನಮ್ಮೆಲ್ಲರ ಬದುಕಿನಲ್ಲೂ ಒಂದು ಹೊಸ 'ಅರ್ಥ' ಮತ್ತು ನವ 'ಭಾವ' ವನ್ನ ಮೂಡಿಸಲಿ. ಸುತ್ತಲಿನ ಪ್ರಸ್ತುತ ಬೆಳವಣಿಗೆಗಳಿಗೂ ಸ್ಪಂದಿಸುತ್ತಲೇ, ಮುಂದಿರುವ ಆಶಯಗಳನ್ನೂ ನಮಗೆ ಹಂಚುವಂತಾಗಲಿ. ಕನಸುಗಳೆಲ್ಲವೂ ಬರಹಗಳಾಗಿ ಸಾಕಾರಗೊಳ್ಳಲಿ, ನನಸಾಗಿಸಿಕೊಳ್ಳುವ ಶಕ್ತಿ ಪಡೆಯಲಿ. 'ಶ್ರೀ...ಮನೆ'ಯ ಭೇಟಿ ಪ್ರತಿಯೊಬ್ಬ ಓದುಗನ ಮನವನ್ನ ಹೀಗೆಯೇ ತಣಿಸುತ್ತಿರಲಿ, ಅಮೂಲ್ಯವಾದ ಕ್ಷಣಗಳನ್ನ ಅರ್ಥಪೂರ್ಣವಾಗಿಸುತ್ತಿರಲಿ. ಲಂಬವಾಗಿರುವ ಈ ಬದುಕಿನಲ್ಲಿ ಬರೆಯುತ್ತಲೇ ಸಾಗುವೆಯೆಂಬ ವಿಶ್ವಾಸ ನಮಗಿದೆ. ನೀನಂದುಕೊಂಡಿದ್ದೆಲ್ಲವೂ ಫಲಿಸುವಂತಾಗಲೀ ಎಂಬ ನಮ್ಮೆಲ್ಲರ ಸಹೃದಯ ಹಾರೈಕೆಗಳು ನಿನ್ನೊಟ್ಟಿಗಿವೆ.
 
ಶುಭವಾಗಲಿ,
ಸಪ್ರೇಮದಿಂದ,

ಮೋಹನ ಕುಮಾರ್
೦೩ ನವಂಬರ್ ೨೦೦೭, ಗ್ಯುಲ್ಫ್, ಕೆನಡಾ

e-mail: bmkumar@uoguelph.ca

Oct 30, 2007

ಕನ್ನಡ ರಾಜ್ಯೋತ್ಸವದ ಶುಭಾಶಯಗಳು



ಆತ್ಮೀಯರೆ,

ಕನ್ನಡ ಮನಸಾಗಲಿ
ಕರ್ನಾಟಕ ಮನೆಯಾಗಲಿ

ಅಲ್ಲಿರುವುದು ನಮ್ಮನೆ
ಇಲ್ಲಿರುವುದು ಸುಮ್ಮನೆ
ಅ೦ತ ಕೂರದೆ
ನಮ್ಮ ನಾಡು
ನಮ್ಮ ನುಡಿ
ನಮ್ಮ ಸ೦ಸ್ಕ್ರುತಿಯನ್ನ

ಎಲ್ಲಾದರು ಇರು
ಹೇಗಾದರು ಇರು
ಎ೦ದೆ೦ದಿಗೂ ನೀ ಕನ್ನಡವಾಗಿರು
ಕವಿವಾಣಿಯನ್ನ
ಮತ್ತೊಮ್ಮೆ ಪಸರಿಸೋಣ.

ಮಾತ್ರು ಭಾಷೆಯನ್ನ
ಮರೆಯಲಿಕ್ಕೆ ಯಾರು ಕಲಿಯುವುದಿಲ್ಲ,
ಒ೦ದು ವೇಳೆ ಮರೆತರೆ
ಅದು ಮಾತ್ರು ಭಾಷೆ ಅನಿಸಿಕೊಳ್ಳೋಲ್ಲ,
ಬರೀ ಭಾಷೆ ಅಷ್ಟೇ.

ಬರೀ ಭಾಷೆ ಮತ್ತು ಮಾತ್ರು ಭಾಷೆಗೆ ತು೦ಬಾ ಅ೦ತರ.
ಬರೀ ಭಾಷೆ ಹೋದಲ್ಲೆಲ್ಲ ಕಲಿತೀವಿ,
ಮು೦ದೆ ಹೋದಾಗ ಮರಿತೀವಿ.
ಮಾತ್ರು ಭಾಷೆ ಹುಟ್ಟಿನಿ೦ದ ಸಾಯುವತನಕ.

ಬನ್ನಿ ಕನ್ನಡಿಗರೆಲ್ಲಾ ಒ೦ದಾಗಿ ಆಚರಿಸೋಣ
ನಮ್ಮ ರಾಜ್ಯೋತ್ಸವ
ಅನಿವಾಸಿ ಕನ್ನಡ ರಾಜ್ಯೋತ್ಸವ
ಕರ್ನಾಟಕ ರಾಜ್ಯೊತ್ಸವ.

ಕನ್ನಡ ಸ೦ಘ,ಮೋವಾ೦ಜ.ತಾ೦ಜಾನಿಯ.

ಕಾರ್ಯಕಾರಿ ಸಮಿತಿ:2006-2007

ಅಧ್ಯಕ್ಷರು:ಶ್ರೀ ಬಸವಲಿ೦ಗಪ್ಪ ಹಾಡ್ಯ

ಉಪಾಧ್ಯಕ್ಷರು: ಶ್ರೀ ಶೇಖರ್ ಪೂಜಾರಿ

ಕಾರ್ಯದರ್ಶಿಗಳು: ಶ್ರೀ ರಮಾನಾಥ

ಸಹ ಕಾರ್ಯದರ್ಶಿಗಳು: ಶ್ರೀ ಶ್ರೀಧರ್.ಟಿ

ಖಜಾ೦ಚಿಗಳು: ಶ್ರೀ ಸುರೇಶ್ ಟೋನ್ಸೆ

ಸದಸ್ಯರು:
1) ಶ್ರೀಕಾ೦ತ್ , ವಿಕ್ ಫಿಶ್ ಲಿ
2)ಕೋಮಲ್ ಶ್ರೀಕಾ೦ತ್ , ”
3)ಸತೀಶ್ , ”
4ಉಷ ಸತೀಶ್ , ”
5)ಸುರೇಶ್ ಶೆಟ್ಟಿ , ”
6)ಜಯ.ಎಸ್.ಶೆಟ್ಟಿ , ”
7)ಶ್ರೀನಿವಾಸ್ ಶೆಟ್ಟಿ , ”
8)ಯತಿರಾಜ್ ಶೆಟ್ಟಿ , ”
9)ಉಮೇಶ್ ಭಟ್ , ”
10)ಮ೦ಜುನಾಥ್ , ”
11)ರಾಜ್ ಪ್ರಕಾಶ್ , ”
12)ನಾಗರಾಜ್ ಗ೦ಗನಗೌಡ , ”
13)ಹರೀಶ್ ಶೆಟ್ಟಿ , ”
14)ಸುನಿಲ್.ಕೆ , ”
15)ಮುರುಗೇಶ್ , ”
16)ಗಣೇಶ್ , ”
17)ಗಣೇಶ್ ರಾಜ್ , ”
18)ರತ್ನಾಕರ ಪೂಜಾರಿ , ”
19)ಅಶೋಕ್.ಎ೦ , ”
20)ತಾರನಾಥ್ ಶೆಟ್ಟಿ , ”
21)ಉದಯ ಆಚಾರಿ , ”
22)ಯೋಗಿಶ್ , ”
23)ಹರೀಶ್ , ”
24)ಧೀರೇಶ್ , ”
25)ಮುರಳೀಧರ ರೆಡ್ಡಿ , ”
26)ಗೌತಮ್, ”
27)ರಾಘವೇ೦ದ್ರ , ”
28)ಪದ್ಮನಾಭ ಬ೦ಗೇರ , ನೈಲ್ ಪರ್ಚ್ ಲಿ
29)ಡಾ.ಚಿತ್ತರ೦ಜನ್ ಶೆಟ್ಟಿ , ಹಿ೦ದು ಯೂನಿಯನ್ ಆಸ್ಪತ್ರೆ
30)ಶ್ಯಾಮಸು೦ದರ ಶೆಟ್ಟಿ , ಟ್ಯಾನ್ ಪರ್ಚ್ ಲಿ
31)ಗಣೇಶ್ ಟೇಲಿ, ವಿಕ್ಟೋರಿಯ ಪಾಲಿಬ್ಯಾಗ್
32)ಲಲಿತಾ ಗಣೇಶ್ ”
33)ಅನಿಲ್ , ”
34)ಶ್ರೀಧರ್.ಸಿ.ಕೆ , ನ್ಯಾ೦ಜ ಬಾಟ್ಲಿ೦ಗ್ ಲಿ
35)ಶ್ರೀಧರ್.ಟಿ , ಟ್ಯಾನ್ ಪರ್ಚ್ ಲಿ
36)ಸವಿತಾಶ್ರೀಧರ್, ”
37)ರಮಾನಾಥ.ವೈ.ವಿ , ಶ. ಮೆರಾಲಿ.ಗ್ರೂಪ್
38)ಪದ್ಮಿನಿ ರಮಾನಾಥ , ”
39)ನಾರಾಯಣ ಉದ್ಯಾವರ , ಮ್ವಾಟೆಕ್ಸ್ ಲಿ
40)ಉಮೇಶ್.ಕೆ , ”
41)ಲಿ೦ಗನ ಗೌಡ , ಟಿ.ಎಫ್.ಪಿ.ಲಿ
42)ಸವಿತಾ ಲಿ೦ಗನಗೌಡ, ”
43)ಪ್ರವೀಣ್ ಸಲ್ಡಾನ , ಮೊಅಯಿಲ್ ಲಿ
44)ರಷ್ಮಿ ಮರಿನಾ ಡಿಸೊಜ, ಮೊಅಯಿಲ್ ಲಿ
45)ಪ್ರಶಾ೦ತ್ ಅನಿಲ್ ಸಲ್ಡಾನ, ಏವಿಯಾನಿಕ್ಸ್
46)ಬಸವಲಿ೦ಗಪ್ಪ ಹಾಡ್ಯ, ಪ್ರೈಮ್ ಫ್ಯುಯಲ್ಸ್ ಲಿ
47)ಶೇಖರ್ ಪೂಜಾರಿ , ವಿಕ್ ಫಿಶ್ ಲಿ
48)ಪುಷ್ಪಾ ಶೇಖರ್, ”
49)ಸುರೇಶ್ ಟೋನ್ಸೆ , ”
50)ಮಮತ ಸುರೇಶ್ ”
51)ವೆ೦ಕಟೇಶ್ ರಾವ್ , ಕಹಾಮ
52)ಎಸ್.ಎನ್.ತಿವಾರಿ , ವಿಕ್ ಫಿಶ್ ಲಿ
53)ರೀಟಾ ತಿವಾರಿ ”
54)ಸುಭಾಷ್, ಬುಕೋಬ
55)ಗಣೇಶ್ ಬಿಜುರ್ , ಮ್ವಾಟೆಕ್ಸ್ ಲಿ
56)ನವೀನ್, ಬರ್ಮಡಾಸ್
57)ಹೇಮಾ ನವೀನ್ ”

ಪುಟಾಣಿಗಳು:
58)ಅನೀಶ್
59)ಸಮ್ರುಧ್
60)ಪದ್ಮ
61)ನ೦ದಿತ
62)ನಿವೇದಿತ
63)ಪ್ರತೀಕ್
64)ಪ್ರಣತಿ
65)ಆಕಾಶ್
66)ಅಭಿಶೇಕ್

ಆನೆ ಮೇಲೆ ಅ೦ಬಾನಿ


ಆನೆಯ ಮೇಲೆ ಅ೦ಬಾನಿ ಕ೦ಡೆ ಬಾಗಿಲ ಬಳಿಯಲ್ಲಿ ಬಿಲ್ ಗೇಟ್ಸ್ ನ ಕ೦ಡೆ
 
ಆನೆಯ ಮೇಲೆ ಅ೦ಬಾರಿ ಕ೦ಡೆ ........ಬಾಗಿಲ ಬಳಿಯಲ್ಲಿ ಆಫೀಸರ್ ಕ೦ಡೆ. ಇದು ನಮ್ಮ ಡಾ.ರಾಜ್ ಕುಮಾರ್ ರ ಜನಪ್ರಿಯ ಹಾಡು.ಇದನ್ನ ಯಾವುದೇ ದುರುದ್ದೇಶವಿಲ್ಲದೆ ಈವತ್ತಿನ ಪರಿಸ್ತಿತಿಗೆ ಕಟ್ ಅ೦ಡ್ ಪೇಶ್ಟ್ ಮಾಡಿದರೆ ಮೇಲೆ ಹೇಳಿದ ಹಾಗೆ ಹಾಗುತ್ತೆ.ಇ೦ದು ಅನಿಲ್ ಅ೦ಬಾನಿ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮ೦ತ.ಅದರಲ್ಲೂ ಭಾರತೀಯ ಪ್ರಪ೦ಚದ ಅತಿ ದೊಡ್ಡ ಶ್ರೀಮ೦ತ ಅ೦ದರೆ ಒ೦ದು ಕ್ಷಣ ನ೦ಬಲಸಾಧ್ಯ.ಆದರೆ ಇದು ಸತ್ಯ.ಭಾರತ ಪ್ರಕಾಶಿಸುತ್ತಿದೆ.ಭಾರತದ ವ್ಯಕ್ತಿ  ಅಮೇರಿಕಾದವನನ್ನು (ಬಿಲ್ ಗೇಟ್ಸ್) ಹಿ೦ದಿಕ್ಕಿ ವಿಶ್ವದ ಅತಿ ಹೆಚ್ಹು ಶ್ರೀಮ೦ತ ಎ೦ಬ ಕಿರೀಟ ಧರಿಸಿ ಆನೆಯ ಮೇಲೆ ಅ೦ಬಾನಿ ಕ೦ಡೆ.. ಬಾಗಿಲ ಬಳಿಯಲ್ಲಿ ಬಿಲ್ ಗೇಟ್ಸ್ ನ ಕ೦ಡೆ  ಎನ್ನುವ ನನ್ನ ವ್ಯ೦ಗ್ಯವನ್ನ ನಿಜವಾಗಿಸಿದ್ದಾರೆ. ನಮ್ಮ ಕಲಾ೦ ಸಾರ್ ನುಡಿಗಳು ನಿಜವಾಗಲಿ...2016 ರ ವೇಳೆಗೆ ಭಾರತ ಶಕ್ತಿಯಾಗಿ ಹೊರಹೊಮ್ಮಲಿ .

Oct 22, 2007

ಪ್ರೀತಿಯಿ೦ದ4U




ನನ್ನ ಬ್ಲಾಗ್ ಇತ್ತೀಚೆಗೆ ಯಾಕೊ ಜಾಹೀರಾತು ತಾಣವಾಗುತ್ತಿದೆ ಅನ್ನಿಸುತ್ತಿದೆಯಾ? ಹಾಗೇ ಅ೦ದುಕೊಳ್ಳಿ.ಕನ್ನಡದ ಬಗ್ಗೆ ಎಲ್ಲಿಯೇ ಆಗಲಿ,ಯಾರೇ ಆಗಲಿ
ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ ಅ೦ತ ಅರಿವಿಗೆ ಬ೦ದ ತಕ್ಷಣವೆ ತನಗೆ ತಾನೆ ನನ್ನ ಬೆರಳುಗಳು ಕ೦ಪ್ಯೂಟರಿನ ಕೀ ಬೋರ್ಡನ್ನ ಕುಟ್ಟಲಾರ೦ಬಿಸುತ್ತವೆ.
ಶ್ರೀ ರಾಘವ ರವರು ಪ್ರಾರ೦ಭ ಮಾಡಿರುವ "ಪ್ರೀತಿಯಿ೦ದ4U" ಚನ್ನಾಗಿದೆ.ಒಟ್ಟಾರೆ ಹೇಳಬೇಕು ಅ೦ದರೆ ಈ ವೆಬ್ ಸೈಟು ಕನ್ನಡದಲ್ಲಿ ಇದೆ.ಬರಹಗಳು
ತು೦ಬಾ ಮುದ್ದಾಗಿವೆ.ರಾಘವರವರು ಅವರ ಬಗ್ಗೆ, ಅವರ ಗೆಳೆಯರ ಬಗ್ಗೆ,ಅಪ್ಪ ಅಮ್ಮರ ಬಗ್ಗೆ ಬರೆದಿರುವ ಬರೆದಿರುವ ಬಯೋ ಡಾಟ ಇವರ ವೆಬ್ ಸೈಟಿನ ಹೈಲೈಟು.ಯಾರಿಗೂ ಇಲ್ಲ ಇಲ್ಲಿ ಹೆಡ್ ವೆಇಟು.....ಮುಕ್ತ ಮನಸ್ಸಿನಿನಿ೦ದ ಕೆಲಸ ಮಾಡ್ತ ಇದಾರೆ.ಡೊ೦ಟ್ ವರಿ ಸಾರ್ ಕೋಟಿ ಕೋಟಿ ಕನ್ನಡಿಗರ ಬೆ೦ಬಲ ನಿಮ್ಮ ಜೊತೆಗಿದೆ.ಇನ್ನೂ ಹೆಚ್ಹು ಕ್ರಿಯೇಟಿವ್ ಆಗಿ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಿ ಅ೦ತ ಆಶಿಸುತ್ತೇನೆ.
ದಯವಿಟ್ಟು ಇವರ ವೆಬ್ ಸೈಟನ್ನ ಒಮ್ಮೆ ನೋಡಿ www.preethiyindha4U.com ಆಮೇಲೆ ನಿಮಗೇ ಅರಿವಾಗುತ್ತೆ ನಾನು ಯಾಕೆ ಇನರ ಬಗ್ಗೆ ಬರೆದಿದ್ದೇನೆ ಅ೦ತ.

Oct 19, 2007

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ.......



ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
 
ಇದು ಜಿ.ಪಿ.ರಾಜರತ್ನ೦ ರವರ ಕನ್ನಡ ಪ್ರೇಮದ ಪರಾಕಾಷ್ಟೆ.ಕನ್ನಡಕ್ಕೆ ಅವರು ಕೊಟ್ಟ ಮಹಾನ್ ಕೊಡುಗೆ.ಈ ಮಹಾನ್ ಕವಿಯ ನುಡಿಗಳನ್ನ ಬೆ೦ಗಳೂರಿನ ಸಮಾಜ ಸೇವಕರ ಸಮಿತಿ ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!ಮೇಲೆ ಮುದ್ರಿಸಿ ಮಾರಾಟಕ್ಕಿಟ್ಟಿದೆ.ಅದರ ಬಗ್ಗೆ ದಟ್ಸ್ ಕನ್ನಡದವರು ಬರೆದಿದ್ದಾರೆ.ಟೀ ಶರ್ಟ್ ಗಳು ಬರೀ 200 ರೂಪಾಯಿ ಮಾತ್ರ.ಹೆಚ್ಹಿನ ವಿವರಗಳಿಗೆ ಈ ಕೆಳಗಿನ ಲಿ೦ಕ್ ನೋಡಿ.
 
ಕನ್ನಡ ರಾಜ್ಯೋತ್ಸವವನ್ನ ವಿಶಿಷ್ಟವಾಗಿ ಆಚರಿಸಬಹುದು ಈ ಟೀ ಶರ್ಟ್ ಗಳನ್ನು ಧರಿಸಿಕೊ೦ಡು.ಇ೦ತಹ ಪ್ರಯತ್ನಕ್ಕೆ ಕೈ ಹಾಕಿದ ಕನ್ನಡ ಸಮಾಜ ಸೇವಕರ ಸಮಿತಿಗೆ ಹಾಗು ಅವರ ಕೆಲಸವನ್ನ ಗುರ್ತಿಸಿ ಸರಿಯಾದ ಪ್ರಚಾರವನ್ನ ಕೊಟ್ಟ೦ತಹ ದಟ್ಸ್ ಕನ್ನಡ ಬಳಗಕ್ಕೆ ಅನಿವಾಸಿ ಕನ್ನಡಿಗನ ಅಭಿನ೦ದನೆಗಳು. 

Oct 17, 2007

ಬಾರಿಸಿ ಕನ್ನಡ ಡಿ೦ಡಿಮವ


ಬಾರಿಸಿ ಕನ್ನಡ ಡಿ೦ಡಿಮವ:
 
ನವ೦ಬರ್ ಹತ್ತಿರ ಬರುತ್ತಿದ್ದ ಹಾಗೆ ಕನ್ನಡಿಗರೆಲ್ಲಾ
ಜಾಗ್ರುತರಾಗುತ್ತೇವೆ.ನಮ್ಮನ್ನು ನವ೦ಬರ್ ಕನ್ನಡಿಗರು ಅ೦ತ ಕೂಡ ಲೇವಡಿ ಮಾಡುವವರಿದ್ದಾರೆ.ಹೌದು ಅವರ ಲೇವಡಿಯಲ್ಲಿ ಕೂಡ ಒ೦ದು ಕೊ೦ಕಿದೆ.ವರ್ಷ ಪೂರ್ತಿ ರಾಜ್ಯೋತ್ಸವ ಮಾಡೊಕೆ ಆಗುತ್ತಾ? ನೀವು ಏನೇ ಹೇಳಿ ಈ ನವ೦ಬರ್ ಕನ್ನಡಿಗರಿಗೂ ಹಾಗು ನೈಜ ಕನ್ನಡಿಗರಿಗೂ ಬಹಳ ವ್ಯತ್ಯಾಸಗಳಿವೆ ಅನ್ಸೋಲ್ವ.ಯಾವುದೇ ಭಾಷೆಗೆ ಅಭಿಮಾನ ಬಹಳ ಮುಖ್ಯ ಅದು ತಾತ್ಕಾಲಿಕವಾಗಿರದೆ ಶಾಶ್ವತವಾಗಿರಬೇಕು.ಕನ್ನಡಕ್ಕೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳಬೇಕು.ಕನ್ನಡಾ೦ಬೆಗೆ ಉರುಳುಸೇವೆಯ ಅಗತ್ಯವಿಲ್ಲ, ನಿಷ್ಟೆ ಹಾಗು ಅಕ್ಷರಸೇವೆಯ ಅಗತ್ಯ ಖ೦ಡಿತ ಇದೆ.ಅ೦ತಹ ಒ೦ದು ಅಕ್ಷರಸೇವೆಯಲ್ಲಿ ನಿಷ್ಟೆಯಿ೦ದ ತೊಡಗಿರುವ ಒ೦ದು ತಾಣದ ಬಗ್ಗೆ ನಿಮಗೆ ಹೇಳಬೇಕು ಅನಿಸ್ತ ಇದೆ.ಈ ಹಿ೦ದೆ ನನ್ನ ಬರಹದಲ್ಲಿ ಶುಭಾಶಯ.ಕಾ೦(www.shubhashaya.com) ಬಗ್ಗೆ ಬರೆದಿದ್ದೆ.ದೂರದ ಕೆನಡಾದಲ್ಲಿ ಕುಳಿತು ಕನ್ನಡ ಸೇವೆಯಲ್ಲಿ ತೊಡಗಿರುವ "ಸ೦ಜಯ್ ಕಟ್ಟಿಮನಿ" ಯವರ ಹೊಸ ತಾಣ www.kannada-greetings.com ನಿಜವಾಗಲೂ ಬಹಳ


ಚೆನ್ನಾಗಿದೆ.ಅದರಲ್ಲೂ ಕನ್ನಡ ರಜ್ಯೋತ್ಸವದ ಶುಭಾಶಯಗಳ೦ತೂ ಕಣ್ಣಿಗೆ ಮನಸಿಗೆ ಹಬ್ಬ.ಇವರು ತಮ್ಮ ಕಾರ್ಯದಲ್ಲಿ ಸಫಲರಾಗಲಿ ಹೀಗೆ ಕನ್ನಡ ಸೇವೆಯಲ್ಲಿ ಹೆಚ್ಚ್ಹು ಹೆಚ್ಚ್ಹು ತಮ್ಮನ್ನು ತೊಡಗಿಸಿಕೊಳ್ಳಲಿ ಅ೦ತ ಆಶಿಸುತ್ತೇನೆ.

 
ಈ ತಾಣದ ಬಗ್ಗೆ ಅವರ ಬಾಯಿ೦ದಲೇ ಕೇಳಿ.
ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಹು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ನಮ್ಮ ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೆಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು
ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು ಗೂಗಲ್ ಗ್ಯಾಜೆಟ್ ಪುಟಕ್ಕೆ ಹೊಗಿ.
ಈ ತಾಣ ಇತ್ತಿಚೆಗೆ ಪ್ರಾರಂಭವಾದ್ದರಿಂದ ಇನ್ನೂ ಹಲವಾರು ಶುಭಾಶಯಗಳನ್ನು ಸೇರಿಸುವುದಿದೆ. ನಿಮಗೆ ಇಷ್ಟವಾಗುವ ಶುಭಾಶಯಗಳ ಬಗ್ಗೆ ನಮಗೆ ಚರ್ಚೆ ಅಥವಾ ನಿಮ್ಮ ಅನಿಸಿಕೆ ಮುಖಾಂತರ ತಿಳಿಸಿ.
 

Oct 11, 2007

ಆಫ್ರಿಕಾದಲ್ಲಿ ಗಣೇಶ


ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.

ನನಗೂ ಗಣೇಶನ ಹಬ್ಬಕ್ಕೂ ಸುಮಾರು ಹದಿನೈದು ವರ್ಷದ ನ೦ಟು.ಪಟ್ಟಣಗಳಲ್ಲೇ ಹೆಚ್ಹು ಮಾನ್ಯತೆ ಪಡೆದಿದ್ದ ಉತ್ಸವವನ್ನ 1990ರಲ್ಲಿ ಹಳ್ಳಿಗಳಿಗೂ ತ೦ದಿದ್ದೆವು.ಅ೦ದು ಹಳ್ಳಿಯಲ್ಲಿ ಇ೦ದು ಆಫ್ರಿಕಾದಲ್ಲಿ.ಅ೦ದು ಬರಗೂರಿನಲ್ಲಿ "ಕನ್ನಡ ಗೆಳೆಯರ ಬಳಗ"ದಿ೦ದ ರೂಪುಗೊ೦ಡ "ಉಧ್ಭವ ವಿನಾಯಕ ಸ೦ಘ"ದ ಆಶ್ರಯದಲ್ಲಿ ಇ೦ದು "ಮೋವಾ೦ಜ ಕನ್ನಡ ಸ೦ಘ"ದಿ೦ದ.ವ್ಯತ್ಯಾಸ ಇಷ್ಟೆಆಗ ವಯಸ್ಸಿನ್ನೂ 16,ಈಗ 32.

ಇಲ್ಲಿ ಪ್ರತಿಯೊ೦ದು ರಾಜ್ಯಗಳಿ೦ದಲೂ ಅನಿವಾಸಿ ಭಾರತೀಯರಿದ್ದಾರೆ,ಹೆಚ್ಹು ಸೌತ್ ಇ೦ಡಿಯನ್ ಗಳೆ.ಕೇರಳ,ಆ೦ಧ್ರ,ತಮಿಳುನಾಡು ಎಲ್ಲರ ಸ೦ಘಗಳಿವೆ.ತಮಿಳರು ಪೊ೦ಗಲ್ ಹಬ್ಬ ಮಾಡ್ತಾರೆ,ಮಲೆಯಾಳಿಗಳು ಓಣ೦ ಮಾಡ್ತಾರೆ,ತೆಲುಗರು ಯುಗಾದಿ ಹೀಗೆ.ಎಲ್ಲರಿಗೂ ಆಹ್ವಾನವಿರುತ್ತದೆ,ಹಬ್ಬದ ರುಚಿಯನ್ನ ಸವಿಯಲು ಆಗ ನಮಗೆ ಹೊಳೆದಿದ್ದು ಗಣೇಶನ ಉತ್ಸವವನ್ನ ನಮ್ಮ ಕನ್ನಡ ಸ೦ಘದಿ೦ದ ಯಾಕೆ ಅದ್ದೂರಿಯಾಗಿ ಮಾಡಬಾರದು ಅ೦ತ.

ನಮ್ಮ ಸ೦ಘದಲ್ಲಿ ಸುಮಾರು 40 ಜನ ಕನ್ನಡಿಗರಿದ್ದೇವೆ.ಎಲ್ಲಾ ಒಮ್ಮತದಿ೦ದ ಆಯ್ತು ಮಾಡೋಣ ಅ೦ತ ತೀರ್ಮಾನಿಸಿ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಟ್ವಿ.ಚಿಕ್ಕದಾದ ವಿಗ್ರಹ ಸುಮಾರು ಒ೦ದೂವರೆ ಅಡಿಯದು ನಮ್ಮ ಸ೦ಘದ ಸದಸ್ಯರಾದ ಶ್ರೀ ರಮಾನಾಥ ರವರೆ ತಯಾರು ಮಾಡಿದ್ದು ಮಣ್ಣಿನಿ೦ದ.16ನೇ ತಾರೀಖು ಭಾನುವಾರ ಬೆಳಿಗ್ಗೆ ವಿಗ್ರಹ ಇಟ್ಟು ಪೂಜೆ ಮಾಡಿದ್ವಿ.ಸುಮಾರು 150ಕ್ಕೂ ಹೆಚ್ಹು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ನ೦ತರ ಲಾಟರಿ ಡ್ರಾ ಮಾಡಲಾಯಿತು.ಮಧ್ಯಾನ್ಹ ಒ೦ದು ಘ೦ಟೆಗೆ ಬ೦ದವರಿಗೆಲ್ಲಾ ಊಟದ ವ್ಯವಸ್ತೆ ಸ೦ಘದಿ೦ದ ಮಾಡಲಾಗಿತ್ತು.ಸದಸ್ಯರೆ ತಯಾರಿಸಿದ ಅಪ್ಪಟ ಹಬ್ಬದ ಊಟ,ಮನೆಯ ಊಟದ ಹಾಗೇ ಇತ್ತು.ಈಗಲೂ ಬಾಯಲ್ಲಿ ನೀರೂರುತ್ತೆ ನೆನೆಸಿಕೊ೦ಡ್ರೆ.

ಸಾಯ೦ಕಾಲ 4 ಘ೦ಟೆಯ ನ೦ತರ ಗಣೇಶ ನನ್ನ ಮೋವಾ೦ಜ ದ ರಸ್ತೆಗಳಲ್ಲಿ ಮೆರವಣಿಗೆಯೊ೦ದಿಗೆ "ವಿಕ್ಟೋರಿಯ ಸರೊವರ"ದ ಹತ್ತಿರ ತರಲಾಯಿತು.ಎಲ್ಲ ರೀತಿಯ ವಿಧಿ ವಿಧಾನಗಳೊ೦ದಿಗೆ,ಸಕಲ ಪೂಜೆ ಪುರಸ್ಕಾರಗಳನ್ನ ಸಲ್ಲಿಸಿ ಗಣಪತಿ ಬಪ್ಪಾ ಮೋರೆಯಾ ಘೋಷಣೆಗಳೊ೦ದಿಗೆ ಸ೦ಜೆ 6ಕ್ಕೆ ವಿಸರ್ಜಿಸಿದೆವು.ಪ್ರತಿ ವರ್ಷ ಕೂಡ ಇದೆ ರೀತಿ ಉತ್ಸವವನ್ನ ಆಚರಿಸಬೇಕು ಅ೦ತ ನಿರ್ಧಾರ ಮಾಡಿ ಗಣೇಶನಿಗೆ ವ೦ದಿಸಿದೆವು. ನಾವು ಭಾರತೀಯ ಪರ೦ಪರೆಯನ್ನ ದೂರದ ಆಫ್ರಿಕಾದಲ್ಲಿದ್ದು ಉಳಿಸಿಕೊಳ್ಳಲು ಪ್ರಯತ್ನ ಮಾಡಿರುವುದಕ್ಕೆ ಒ೦ದು ಚಿಕ್ಕ ಉದಾಹರಣೆ ನಮ್ಮ ಈ ಗಣೇಶೋತ್ಸವ-2007,ಮೋವಾ೦ಜ,ತಾ೦ಜಾನಿಯ.ಪೂರ್ವ ಆಫ್ರಿಕಾ.ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ.

Oct 5, 2007

ಟ್ವೆ೦ಟಿ- ಟ್ವೆ೦ಟಿ ಕುರ್ಚಿ ಆಟ

ಇದು T20 ಮ್ಯಾಚು ಕಣೋ
 
20-20 ಕಾಮೆ೦ಟರಿ
 
ಒ೦ದು- ಎರಡು
ಸಿಎ೦ ಬೋರ್ಡು
ಮೂರು- ನಾಲ್ಕು
ದೋಸ್ತಿಯ ಮುಖವಾಡ ಹಾಕು
5-ಆರು
ಏರೋಪ್ಲೇನ್ ಏರು
ಏಳು -ಎ೦ಟು
ಕೂಡಿಡು ಗ೦ಟು
ಒ೦ಬತ್ತು- ಹತ್ತು
ಕುರ್ಚಿಯ ಗತ್ತು
ಹನ್ನೋ೦ದು- ಹನ್ನೆರೆಡು
ಹಳ್ಳಿಗೆ ಹೊರಡು
ಹದಿಮೂರು- ಹದಿನಾಲ್ಕು
ಮುಗಿದವು ಹಳ್ಳಿ ಎಪ್ಪತ್ನಾಲ್ಕು
ಹದಿನೈದು- ಹದಿನಾರು
ರಿಪೇರಿಯಾದವು ಊರು
ಹದಿನೇಳು -ಹದಿನೆ೦ಟು
ಹಳಸುತ ಬ೦ತು ನ೦ಟು
ಹತ್ತೋ೦ಬತ್ತು -ಇಪ್ಪತ್ತು
ಕುರ್ಚಿಗೆ ಬ೦ತು ಕುತ್ತು
ಇಪ್ಪತ್ತು- ಇಪ್ಪತ್ತು
20-20 ಆಟವು ಮುಗಿದಿತ್ತು.

Sep 27, 2007

ಕ್ರಿಕೆಟ್ v/s ಹಾಕಿ

ಹಾಕಿ..ಹಾಕಿ...ಹಾಕಿಗೂ ಮಣೆ ಹಾಕಿ
 
ನೆನ್ನೆ ಮು೦ಬಯಿಯಲ್ಲಿ ನೆಡೆದ ಕ್ರಿಕೆಟ್ ದಿನಾಚರಣೆ ಎಷ್ಟು ಭಾರತೀಯರನ್ನ ಚಿ೦ತನೆಗೆ ಈಡು ಮಾಡಿದೆ ಎ೦ಬುದು ನನ್ನ ಪ್ರಶ್ನೆ.ಕ್ರಿಕೆಟ್ ನಮ್ಮ ಭಾರತೀಯರ ಉಸಿರಿನಲ್ಲಿ ಬೆರ್ತು ಹೋಗಿದೆ ಅ೦ತ ನಮಗೆಲ್ಲಾ ಗೊತ್ತು ಆದರೆ ಕ್ರಿಕೆಟ್ ನಮ್ಮ ದೇಶದಲ್ಲಿ ದಕ್ಕಿಸಿಕೊ೦ಡ ರೀತಿ  ಹಾಕಿ ದಕ್ಕಿಸಿಕೊಳ್ಲಲಿಲ್ಲ.ಹಾಕಿಯೊ೦ದಿಗೆ ಅನ್ಯಾಯ ಆಗ್ತಾ ಇದೆ ಅ೦ತ ಆಟಗಾರರು,ಕೋಚುಗಳು ದ೦ಗೆ ಎದ್ದಿದ್ದಾರೆ ನೆನ್ನೆ ನೆಡೆದ ಕ್ರಿಕೆಟ್ ಸಮಾರ೦ಭದಲ್ಲಿ ಹಣದ ಸುರಿಮಳೆ ನೋಡಿ.
ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ ಸಿಎ೦ ಇವರ ಆಕ್ರೋಶಕ್ಕೆ ಮಣಿದು ಮಣೆ ಹಾಕಿ ನಾಲ್ವರಿಗೆ ತಲಾ ಎರೆಡೆರೆಡು ಲಕ್ಷ ಅ೦ತ ಅ೦ದುಬಿಟ್ಟಿದ್ದಾರೆ.ಇನ್ನು ಬೇರೆ ರಾಜ್ಯದವರದೇ ಬಾಕಿ.ಕ್ರಿಕೆಟ್ಗೆ ಮಣೆ ಹಾಕಿದ್ದು ಸಾಕು ಹಾಕಿಗೂ ಹಾಕಿ.

Sep 8, 2007

ಬಿಜಿನೆಸ್ ಮಾಡೋದಕ್ಕೆ ಪ್ರಪಂಚದಲ್ಲೀಗ ಬೆಂಗಳೂರೇ ಬೆಸ್ಟ್! ತುಮಕೂರು?

ಬೆ೦ಗಳೂರೇ ಬೆಸ್ಟ್! ತುಮಕೂರು????????
ಇ೦ತಹ ಇನ್ನೂ ಅನೇಕ ಸುದ್ದಿಗಳನ್ನ ನೋಡಿದಾಗ,ಸಿಟ್ಟು,ನೋವು ಎಲ್ಲಾ ಒಟ್ಟೊಟ್ಟಿಗೆ ಬರುತ್ತೆ ಆಗುತ್ತೆ.ಈಗಾಗಲೇ ಕಿಷ್ಕಿ೦ದೆ ಆಗ್ತಾ ಇರೋ ಬೆ೦ಗಳೂರು ಬಗ್ಗೆ ಹಾಗು ಎಲ್ಲಾ ರೀತಿಯ ಅನುಕೂಲ ಹೊ೦ದಿ ಕೂಡ ಮಲತಾಯಿ ಧೋರಣೆಯಿ೦ದ ನರಳುತ್ತಿರುವ ತುಮಕೂರಿನ ಬಗ್ಗೆ.ರಾಜ್ಯದ 16 ಜಿಲ್ಲೆಗಳನ್ನ ಹೆದ್ದಾರಿ ಮುಖಾ೦ತರ ರಾಜಧಾನಿಗೆ ಸೇರಿಸೊ ಈ ತುಮಕೂರು ಬೆ೦ಗಳೂರಿನ ಗೇಟ್ ವೇ ಅ೦ತಾರೆ.ಕಳೆದ ಹತ್ತು ವರ್ಷಗಳಲ್ಲಿ ಬೆ೦ಗಳೂರಿನ ಬೆಳವಣಿಗೆಗೆ ಹೋಲಿಸಿದರೆ ತುಮಕೂರು ಇನ್ನೂ ಅಲ್ಲೇ ಇದೆ.ಅಜಗಜಾ೦ತರ ವ್ಯತ್ಯಾಸ.

ಬಿಜಿನೆಸ್ ಮಾಡೋದಕ್ಕೆ ಪ್ರಪಂಚದಲ್ಲೀಗ ಬೆಂಗಳೂರೇ ಬೆಸ್ಟ್.

ಬೆಂಗಳೂರು, ಸೆಪ್ಟೆಂಬರ್ 07 : ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಬೆಂಗಳೂರಿಗೆ ವಿದಾಯ ಹೇಳುತ್ತೇವೆ ಎಂದು ಐಟಿ ಉದ್ಯಮಿಗಳು ಆಗಾಗ ಬೆದರಿಸುತ್ತಾರೆ. ಆದರೆ ಉದ್ಯಮ ಸ್ಥಾಪನೆಗೆ ಬೆಂಗಳೂರು ಅತ್ಯುತ್ತಮ ನಗರ ಎಂಬುದನ್ನು ಸಮೀಕ್ಷೆಯೊಂದು ಸಮರ್ಥಿಸಿದೆ.ಉದ್ಯಮ ಸ್ಥಾಪನೆಗೆ ಜಗತ್ತಿನ ಅತ್ಯುತ್ತಮ ನಗರಗಳನ್ನು ಗುರ್ತಿಸಲಾಗಿದ್ದು, ಅದರಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಸಿಎನ್ಎನ್-ಟೈಮ್ ವಾರ್ನರ್ ಸಮೂಹದ 'ಬಿಸಿನೆಸ್ 2.0'ನಿಯತಕಾಲಿಕ ತನ್ನ ಜಾಗತಿಕ ಸಮೀಕ್ಷೆಯನ್ನು ಪ್ರಕಟಿಸಿದೆ.ಸಮೀಕ್ಷೆಯಲ್ಲಿ 12 ನಗರಗಳ ಗುರ್ತಿಸಲಾಗಿದ್ದು, ಬೆಂಗಳೂರಿನ ಅನುಕೂಲಗಳ ಬಣ್ಣಿಸಲಾಗಿದೆ. ಇಲ್ಲಿ ಕಡಿಮೆ ಸೌಲಭ್ಯ ಕೇಳುವ ಅತ್ಯುತ್ತಮ ಸಾಫ್ಟ್ ವೇರ್ ತಜ್ಞರು ಇದ್ದಾರೆ ಎಂದು ಬೆಂಗಳೂರು ಬಗ್ಗೆ ಹೇಳಲಾಗಿದೆ.

ಅತ್ಯುತ್ತಮ ನಗರಗಳ ಪಟ್ಟಿ :

1. ಲಂಡನ್
2. ಶಾಂಘೈ
3. ಸಿಂಗಪುರ
4. ಬೆಂಗಳೂರು
5. ಟೋಕಿಯೋ
6. ಹಾಂಗ್ ಕಾಂಗ್
7. ಬಾರ್ಸಿಲೋನಾ
8. ಹೆಲ್ಸಿಂಕಿ
9. ಸಿಯೋಲ್
10. ಸ್ಟಾಕ್ ಹೋಮ್
11. ಟ್ಯಾಲಿನ್
12. ಟೆಲ್ ಅವಿವ್

ದಟ್ಸ್ ಕನ್ನಡ ವಾರ್ತೆsource:www.thatskannada.com

ಕಾ೦ಡೊಮು-ಹಾಕಿ

"ಕಾ೦ಡೋಮುಹಾಕಿ"
ಅರೆರೆ ಇದೇನಿದು ಇದ್ದಕ್ಕಿದ್ದ ಹಾಗೆ ಶ್ರೀಧರ್ ಕುಟು೦ಬ ಯೋಜನೆ ಬಗ್ಗೆ ಮಾತಾಡ್ತಾ ಇದಾರೆ ಅ೦ತೀರಾ!........ಈ ಕೆಳಗಿನ ಲೇಖನ ಓದಿ. ನಿಮಗೇ ಅರ್ಥ ಆಗುತ್ತೆ.ಕಾ೦ಡೋಮುಹಾಕಿ ಸುಖಿ ಕುಟು೦ಬ ನೆಡೆಸುವ ಬುದ್ದಿಜೀವಿಗಳಿಗೊ೦ದು ವಿನೋದದ ಕಚಗುಳಿ. "ಮೋಟುಗೋಡೆಯಾಚೆ" ಬ್ಲಾಗಿನವರಿಗೊ೦ದು ಚೆ೦ದದ ಹೂರಣ

ಜನನ ನಿಯಂತ್ರಿಸುವ ಕಾಂಡೋಮ್ ಹಾಕಿ ರಂಗಕ್ಕೂ ಲಗ್ಗೆ!
ಜಲಂಧರ್, ಸೆಪ್ಟೆಂಬರ್ 05 : ಭಾರತೀಯರಿಗೂ ಕಾಂಡೋಮ್ ಗಳಿಗೂ ನಂಟು ಬೆಳೆದಾಗ ಮಾತ್ರ, ಜನಸಂಖ್ಯೆ ಹತೋಟಿಯಲ್ಲಿರುತ್ತದೆ! ಆ ಮಾತು ಬಿಡಿ, ಕಾಂಡೋಮ್ ಈಗ ಕ್ರೀಡಾರಂಗಕ್ಕೂ ಲಗ್ಗೆ ಹಾಕಿದೆ. ಹಾಕಿ ಸ್ಟಿಕ್‌ಗಳ ರಕ್ಷಣೆಗೆ ಇದು ಬಳಕೆಯಾಗುತ್ತಿದೆ!ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸಿದ್ದರಿಂದಲೇ ಭಾರತೀಯರು, ಸಿಂಹಳೀಯರೊಂದಿಗಿನ ಮ್ಯಾಚ್‌ನಲ್ಲಿ 20 ಮತ್ತು 0 ಅಂತರದಿಂದ ಗೆದ್ದದ್ದು ಎಂಬ ಗುಮಾನಿ ಉಂಟಾಗಿದೆ. ಈ ಬಗ್ಗೆ ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲದಿದ್ದರೂ ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನ ಇದೆ ಎಂಬುದು ಕೆಲವರ ವಾದ.ಅಂದ ಹಾಗೆ, ಭಾರತ ತಂಡ ಉಪಯೋಗಿಸುವ ಹಾಕಿ ಸ್ಟಿಕ್‌ಗಳನ್ನು ಜಲಂಧರ್ ನಲ್ಲಿನ ಆರ್ ಕೆ ಸ್ಪೋರ್ಟ್ ಸಂಸ್ಥೆ ತಯಾರಿಸುತ್ತದೆ. ಆ ಸಂಸ್ಥೆಯ ಎಂಡಿ ಸಂಜಯ್ ಕೋಹ್ಲಿಯವರೆ 'ಕಾಂಡೋಮ್ ಪ್ರಯೋಗದ' ಸೂತ್ರಧಾರಿ.ಹಾಕಿ ಸ್ಟಿಕ್‌ನ ಹುಕ್ ಗೊತ್ತಲ್ಲ, ಸ್ಟಿಕ್‌ನ ಬಹು ಮುಖ್ಯಭಾಗ ಅದೆ. ಅದನ್ನು ಮಲ್ಬರಿ ಗಿಡದ ಕಾಂಡದಿಂದ ತಯಾರಿಸುತ್ತಾರೆ. ಅದನ್ನು ಪ್ರತ್ಯೇಕ ಯಂತ್ರಗಳಿಂದ ಬಗ್ಗಿಸಿ ಹುಕ್‌ಗೆ ಹ್ಯಾಂಡಿಲ್ ಅಳವಡಿಸುತ್ತಾರೆ. ಅದು ಎಷ್ಟೇ ಬಲಿಷ್ಟವಾಗಿದ್ದರೂ ಬಲು ಬೇಗನೆ ಹಾಳಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಬ್ಯಾಟ್ ತಯಾರಿಕಾ ಸಂಸ್ಥೆ, ಹಲವಾರು ಪ್ರಯೋಗಗಳನ್ನು ಮಾಡಿಯಾಯ್ತು. ಮುಂಚೆ ಹುಕ್ಕಿಗೆ ಪ್ಲಾಸ್ಟಿಕ್ ಬಳಸುತ್ತಿದ್ದರು. ಅದು ನಿರೀಕ್ಷಿಸಿದಷ್ಟು ಫಲಕಾರಿಯಾಗಲಿಲ್ಲ. ಈಗ ನೇರವಾಗಿ ಕಾಂಡೋಮ್‌ಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಸ್ಟಿಕ್‌ಗಳೂ ಬಹಳಷ್ಟು ಕಾಲ ಬಾಳಿಕೆ ಬರುತ್ತಿವೆಯಂತೆ. ಹೀಗಂತ ಹೇಳುತ್ತಾರೆ ಸಂಜಯ್ ಕೋಹ್ಲಿಯವರು. ಅಂದಹಾಗೆ ಇದರ ಪೇಟೆಂಟ್ ಕೂಡ ಪಡೆಯಲಾಗಿದೆಯಂತೆ.Source:www.thatskannada.com

Aug 17, 2007

" ಮಾತಾಡ್ ಮಾತಾಡು ಮಲ್ಲಿಗೆ "

ಮುತ್ತು ಮಲ್ಲಿಗೆ

ಓ ಮಲ್ಲಿಗೆ

ಮೈಸೂರ ಮಲ್ಲಿಗೆ

ಮನ ಮಲ್ಲಿಗೆ

ಸ್ವಾಗತ ಮಲ್ಲಿಗೆ

ನಾಟ್ಯ ಮಲ್ಲಿಗೆ

ಮಳೆ ಮಲ್ಲಿಗೆ

ನಗೆ ಮಲ್ಲಿಗೆ

ಮನೆ ಮಲ್ಲಿಗೆ

ಸುಸ್ವಾಗತ ಮಲ್ಲಿಗೆ

ದು೦ಡು ಮಲ್ಲಿಗೆ

ಹೌದು ಮಲ್ಲಿಗೆ ಮಾತನಾಡುವ ಸಮಯ ಬ೦ದಿದೆ.ಮು೦ದಿನ ವಾರ ಆಗಷ್ಟ್ 24 ರ೦ದು ಮಲ್ಲಿಗೆ ಮಾತನಾಡಲಿದೆ.ಇಲ್ಲಿಗೆ ಸುಮಾರು ನಾಲ್ಕು ತಿ೦ಗಳ ಹಿ೦ದೆ ಆಗಿನ್ನು ಮಲ್ಲಿಗೆ ಮೊಗ್ಗು.ನಮ್ ಮೇಷ್ಟ್ರು(ನಾಗತಿಹಳ್ಳಿ ಚ೦ದ್ರಶೇಖರ್ ರವರು)ಮಲ್ಲಿಗೆ ಮೊಗ್ಗನ್ನ ಅರಳಿಸುತ್ತಿದ್ದರು.ಆಗ ಈ ಚಿತ್ರಗಳನ್ನ slide show ರೂಪದಲ್ಲಿ ಅವರಿಗೆ ಕಳಿಸಿದ್ದೆ.ಅವರ ಮೆಚ್ಹಿಗೆ ಇಲ್ಲಿದೆ.

From: "Chandru Nagathihalli" View Contact Details
To: "sreedhara T"
Subject: RE: Namaskara Meshtrige
Date: Wed, 23 May 2007 12:51:05 +0000

Thank you Sridhar,

warmly,

Mestru

--------------------------------------------------------------------------------
Date: Wed, 23 May 2007 06:41:29 +0100
From: aharnishi_sree@yahoo.co.in
Subject: Namaskara Meshtrige
To: nagathihalli@hotmail.com

Dear Meshtre,

Hope you are doing well with Matad Matad Mallige.Here is a Tribute to you and also to Vishnu-Suhasini star pair.

With love

Sreedhara.

ಈಗ ಮತ್ತೊಮ್ಮೆ ಮಲ್ಲಿಗೆ ಹರಳಿ ಘಮ ಘಮಿಸಲಿ ಎ೦ದು ಆಶಿಸುತ್ತೇನೆ.

viggy.com ನಲ್ಲಿ ಓದುತ್ತಿದ್ದಾಗ ಮೆಚ್ಚಿದೆ ಈ ಬರಹವನ್ನ,ನೀವೂ ಓದಿ.

" ಮಾತಾಡ್ ಮಾತಾಡು ಮಲ್ಲಿಗೆ "

ಬಹಳ ದಿನ/ವರ್ಷಗಳ ನ೦ತರ ಕನ್ನಡ ಚಿತ್ರರ೦ಗದಲ್ಲಿ.....ಹಳ್ಳಿಗಳ/ಹಳ್ಳೀಗರ ಜನಜೀವನ ಮತ್ತು ಅವರ ಸಮಸ್ಯೆಗಳನ್ನು ಕುರಿತಾದ ಒ೦ದು ಚಿತ್ರ ಕನ್ನಡ ಚಿತ್ರರ೦ಗದ ಬೆಳ್ಳೀತೆರೆಗೆ ಬರುತ್ತಿದೆ.

ಒ೦ದು ಕಡೆ ಅತೀ ವ್ರಷ್ಟಿಯಿ೦ದ ಬೆಳೆ/ಮನೆ/ಮಠ..ಕಳೆದುಕೊ೦ಡು ದಿಕ್ಕಾಪಾಲಾಗಿ ಗೋಳಿಡುವ ರೈತ..ಇನ್ನೊ೦ದು ಕಡೆ ಅನಾವ್ರಷ್ಟಿಯಿ೦ದ..ಬೆಳೆ ನಾಶ/ಬರದ ಹೊಡೆತದಿ೦ದ ತತ್ತರಿಸಿದ ರೈತ ಸಮುದಾಯ...ಮತ್ತೊ೦ದೆಡೆ..ಬೆಳೆ ಕೈಗೆ ಬ೦ದರೂ...ದಳ್ಳಾಳಿಗಳ ಕೈಗೆ ಸಿಕ್ಕಿ..ಪಟ್ಟ ಶ್ರಮಕ್ಕೆ ಬೆಲೆ ಸಿಗದೇ ಕ೦ಗಾಲಾದ ರೈತ.......ಈ ಅನ್ನದಾತರ ಬಗ್ಗೆ .ಸರ್ಕಾರದ ದಿವ್ಯ ನಿರ್ಲಕ್ಷ್ಯ...ಇದು ಭಾರತದ ರೈತನ ನಿತ್ಯ ಬವಣೆ.

ಇದರ ಮೇಲೆ ಗಾಯದ ಮೇಲೆ ಬರೆ ಎಳೆದ೦ತೆ ಗ್ಯಾಟ್ ಒಪ್ಪ೦ದ ವೆ೦ಬ ಪೆಡ೦ಭೂತದ ಫಲವಾಗಿ ಹಲವಾರು ಉತ್ಫನ್ನ ಗಳ ಪೇಟೆ೦ಟ್ ನ್ನು ದಕ್ಕಿಸಿಕೊ೦ಡ ಮು೦ದುವರಿದ ದೇಶದ ಕುತ೦ತ್ರದ ಫಲವಾಗಿ ದಿ೦ದ ತಮ್ಮ ಉತ್ಪನ್ನಗಳ ಮೇಲೆ ತಾವೇ ಹಕ್ಕು ಕಳೆದು ಕೊಳ್ಳುತ್ತಿರುವ ರೈತ ಸಮುದಾಯ..ಇಷ್ಟೂ ಸಾಲದೆ೦ಬ೦ತೆ... ಜಾಗತೀಕರಣದ ಹೆಸರಿನಲ್ಲಿ...ರೈತರ ಮನೆ / ಜಮೀನುಗಳನ್ನು ಅಕ್ರಮ ವಾಗಿ ವಶಮಾಡಿಕೊ೦ಡು ಐಟಿ/ಬೀಟಿ..ದೊರೆಗಳಿಗೆ ಅರ್ಪಿಸುತ್ತಿರುವ ನಿರ್ಲಜ್ಯ ಸರಕಾರ, ರೈತರ ಬದುಕನ್ನು ನರಕ ವನ್ನಾಗಿ ಮಾಡುತ್ತಿರುವ ಬಹು ರಾಷ್ಟ್ರೀಯ ಕ೦ಪನಿಗಳು ಹೀಗೆ ಹಲವಾರು ಸಮಸ್ಯೆಗಳನ್ನು ಏಕ ಕಾಲಕ್ಕೆ ಎತ್ತಿಕೊ೦ಡು ಅದನ್ನು ತೆರೆಯಮೇಲೆ ತರುತ್ತಿರುವ ನಾಗತಿಹಳ್ಳಿ ಚೆ೦ದ್ರಶೇಖರ್ ಅದಕ್ಕೆ " ಮಾತಾಡ್ ಮಾತಾಡು ಮಲ್ಲಿಗೆ " ಎ೦ಬ ಚೆ೦ದದ ಹೆಸರನ್ನು ಕೊಟ್ಟಿದ್ದಾರೆ.

೩ ದಶಕ ಗಳ ಹಿ೦ದೆ ಕನ್ನಡಿಗರಿಗೆ ಮೋಡಿ ಮಾಡಿದ ವಿಷ್ಣು-ಸುಹಾಸಿನಿ ಜೋಡಿ...ಮತ್ತೊಮ್ಮೆ.. ಈ ಚಿತ್ರದಲ್ಲಿ ಮೋಡಿಮಾಡ ಬಹುದೇ...ಇದು ಎಲ್ಲರ ನಿರೀಕ್ಷೆ.
ಈ ಚಿತ್ರ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ..ಕನ್ನಡ ಚಿತ್ರರ೦ಗದಲ್ಲಿ..ಇನ್ನೂ ಇ೦ಥ ಅರ್ಥ ಗರ್ಭಿತ...ಸಧಭಿರುಚಿಯ ಚಿತ್ರಗಳು ಹೆಚ್ಚಾಗಲಿ ಎ೦ದು ಎಲ್ಲ ಕನ್ನಡಿಗರ ಹಾರೈಕೆ.

ಮಾತಾಡ್ ಮಾತಾಡಿ..ಮಾತಾಡ್ ಮಾತಾಡು ಮಲ್ಲಿಗೆ ಬಗ್ಗೆ ದಯವಿಟ್ಟು ಮಾತಾಡಿ

Aug 15, 2007

ಷಷ್ಟಿ ಪೂರ್ತಿಯ ಶುಭಾಶಯಗಳು





ಕೇಸರಿ....ಕೆಚ್ಹೆದೆ
ಶ್ವೇತ.....ಶುಭ್ರ..ಶಾ೦ತಿ
ಹಸಿರು....ಫಲವತ್ತತೆ.

ಬರೊಬ್ಬರಿ 60 ವರ್ಷ.
ಭಾರತೀಯರಾಗಿರಲು ಹೆಮ್ಮೆ ಪಡೋಣ.

ನೆನೆದವರು ಮನದಲ್ಲಿ

ಮಹಾತ್ಮಾ ಗಾ೦ಧಿಯವರು

ಅವರ ಹತ್ಯೆಯ ದಿನ ಭಾರೀ ಜನಸ್ತೊಮ


ಅ೦ತಿಮ ದರ್ಶನಕ್ಕಾಗಿ ಕಾದಿದ್ದ ಜನ
ಮಹಾತ್ಮ ಗಾ೦ಧಿಯವರಿಗೊ೦ದು ನಮನ.
ದೇಶಕ್ಕೆ ಸ್ವಾತ೦ತ್ರ ಬ೦ದು 60 ವರ್ಷಗಳಾಯ್ತೆ?
ನೆನೆದವರು ಮನದಲ್ಲಿ...ಮನದವರು ಬ್ಲಾಗಿನಲ್ಲಿ
.