Nov 20, 2007

ಹೆಸರಿನಲ್ಲೇನಿದೆ?ಇವರು ಯಡಿಯೂರಪ್ಪಾನಾ! ಇಲ್ಲಾ ಯಡ್ಯೂರಪ್ಪಾನಾ?.ಇವರು ಆ ಕಡೆ(ವಿಧಾನಸೌಧ) ಹೋಗುವಾಗ ಯಡ್ಯೂರಪ್ಪ ಈ ಕಡೆ (ಮನೆ)ಬರುವಾಗ ಯಡಿಯೂರಪ್ಪ.ಕುರ್ಚಿಗಾಗಿ ಇಷ್ಟೋ೦ದು ರಾಮಾಯಣ ಮಾಡುವವರಿಗೆ ಜನರ ಹಿತಾಸಕ್ತಿ ಇದೆಯಾ? ಹೆಸರು ಬದಲಾಯಿಸಿಕೊ೦ಡ್ರೆ ಹಣೆಬರಹ ಬದಲಾಗುತ್ತಾ ಶಿವ.ಹೆಸರಿನಲ್ಲೇನಿದೆ ನಮ್ಮ ಗುರುತಿದೆ ಅಷ್ಟೆ.ನಮ್ಮನ್ನು ಗುರುತಿಸಲು ನಮ್ಮ ಅಪ್ಪ ಅಮ್ಮ ನಮಗೆ ಅ೦ತ ಇಟ್ಟ ಹೆಸರು.ಹೆಸರಿಗೊ೦ದು ಅಸ್ತಿತ್ವ ಇದೆ.ಅಸ್ತಿತ್ವವನ್ನ ಅಳಿಸೋಕೆ ಆಗುತ್ತಾ?.ಕರ್ನಾಟಕದ ಮರ್ಯಾದೆ ಹರಾಜು ಹಾಕಲೂ ಕೂಡ ಹೇಸದ ಇವರೆಲ್ಲರಿಗೆ ಅಧಿಕಾರ ಕೊಟ್ಟ ಕರ್ನಾಟಕದ ಜನತೆ ತಮಗೆ ತಾವೇ ಛೀಮಾರಿ ಹಾಕಿಕೊಳ್ಳುತ್ತಿದೆ.ಗೌಡ್ರಗದ್ಲಕ್ಕೆ ಕೊನೆ ಎ೦ದು.

No comments: