ಹೇ ಮಾರಾಯಾ ನೀನೇನೋ ಹೀಗಿದಿಯಾ??? ನೀನು ಮೀನೋ...ಮಾಯೆಯೋ... ನೀನು ಮೀನೇ ಅ೦ತೆ ನಿನ್ನ ಹೆಸರು ಭೂತ ಮೀನು ಅ೦ತೆ ಇದ್ದರೂ ಇರಬಹುದು ಏಕೆ೦ದರೆ ಜಗವೇ ಮಾಯ. ನೀ ಮಾಯೆಯೊಳಗೋ ಮಾಯೆ ನಿನ್ನೋಳಗೋ. ನೀನು ಏನೇ ಹೇಳು ನಿನ್ನ ನೋಡಿದ್ರೆ ಭೂತ ನೋಡಿದಷ್ಟೆ ಭಯವಾಗುತ್ತೆ.
ಶ್ರೀ ಸಾಮಾನ್ಯನಾಗಿ ನೋಡಿದ ಬದುಕು, ಬರಹ ,ಬವಣೆ ಎಲ್ಲವನ್ನು ಬರೆದುಕೊಳ್ಳೋಣ(ಬ್ಲಾಗಿಸೋಣ) . ಜೀವನವೊಂದು ಶುಭ್ರ ಆಕಾಶದ ಹಾಗೆ ತೇಲಿ ಹೋಗ್ತಾವೆ ನೋಡ ಕಪ್ಪು ಮೋಡ ಬಿಳಿ ಮೋಡ, ಹಾಗೊಮ್ಮೆ ಹೀಗೊಮ್ಮೆ ಗುಡುಗು, ಸಿಡಿಲು, ರಂಗು ರಂಗಿನ ಕಾಮನಬಿಲ್ಲು. ಕಷ್ಟ ಕಾರ್ಪಣ್ಯಗಳ ಆರ್ಭಟ, ನಡುವೆ ಸುಖ ಶಾಂತಿಯ (ತಂ)ಗಾಳಿಪಟ. ಮುಂಗಾರು ಮಳೆಯ ಸಿಂಚನ, ಶ್ರೀ ಸಾಮಾನ್ಯನ ಬದುಕು ಇವುಗಳೆಲ್ಲದರ ಸಂಪುಟ.- ನಿಮ್ಮ ಅನಿಸಿಕೆಗಳನ್ನ ದಯವಿಟ್ಟು ಹಂಚಿಕೊಳ್ಳಿ- ಶ್ರೀಧರ್ (ಅಹರ್ನಿಶಿ)
ನನ್ನ ಹೆಸರು ಅಹರ್ನಿಶಿ ಶ್ರೀಧರ್
ನಾನೊಬ್ಬ ಫಿಷೆರಿಸ್ ಪದವೀಧರ..
ನಮ್ಮ ಊರು ಕದಿರೇಹಳ್ಳಿ ,ಬರಗೂರ್ ಅಂಚೆ ,ಸಿರಾ ತಾಲ್ಲೂಕ್,ತುಮಕೂರ್ ಜಿಲ್ಲೆ.
ಈ ಬ್ಲಾಗ್ ಮಾಡಿರುವ ಉದ್ದೇಶ ಅನಿಸಿದ್ದನ್ನು ಸ್ನೇಹಿತರಲ್ಲಿ ಹಂಚಿಕೊಳ್ಳೋಣ ಅಂತ.
ನಿಮಗೂ ಆದರದ ಸುಸ್ವಾಗತ.