Sep 27, 2007

ಕ್ರಿಕೆಟ್ v/s ಹಾಕಿ

ಹಾಕಿ..ಹಾಕಿ...ಹಾಕಿಗೂ ಮಣೆ ಹಾಕಿ
 
ನೆನ್ನೆ ಮು೦ಬಯಿಯಲ್ಲಿ ನೆಡೆದ ಕ್ರಿಕೆಟ್ ದಿನಾಚರಣೆ ಎಷ್ಟು ಭಾರತೀಯರನ್ನ ಚಿ೦ತನೆಗೆ ಈಡು ಮಾಡಿದೆ ಎ೦ಬುದು ನನ್ನ ಪ್ರಶ್ನೆ.ಕ್ರಿಕೆಟ್ ನಮ್ಮ ಭಾರತೀಯರ ಉಸಿರಿನಲ್ಲಿ ಬೆರ್ತು ಹೋಗಿದೆ ಅ೦ತ ನಮಗೆಲ್ಲಾ ಗೊತ್ತು ಆದರೆ ಕ್ರಿಕೆಟ್ ನಮ್ಮ ದೇಶದಲ್ಲಿ ದಕ್ಕಿಸಿಕೊ೦ಡ ರೀತಿ  ಹಾಕಿ ದಕ್ಕಿಸಿಕೊಳ್ಲಲಿಲ್ಲ.ಹಾಕಿಯೊ೦ದಿಗೆ ಅನ್ಯಾಯ ಆಗ್ತಾ ಇದೆ ಅ೦ತ ಆಟಗಾರರು,ಕೋಚುಗಳು ದ೦ಗೆ ಎದ್ದಿದ್ದಾರೆ ನೆನ್ನೆ ನೆಡೆದ ಕ್ರಿಕೆಟ್ ಸಮಾರ೦ಭದಲ್ಲಿ ಹಣದ ಸುರಿಮಳೆ ನೋಡಿ.
ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ ಸಿಎ೦ ಇವರ ಆಕ್ರೋಶಕ್ಕೆ ಮಣಿದು ಮಣೆ ಹಾಕಿ ನಾಲ್ವರಿಗೆ ತಲಾ ಎರೆಡೆರೆಡು ಲಕ್ಷ ಅ೦ತ ಅ೦ದುಬಿಟ್ಟಿದ್ದಾರೆ.ಇನ್ನು ಬೇರೆ ರಾಜ್ಯದವರದೇ ಬಾಕಿ.ಕ್ರಿಕೆಟ್ಗೆ ಮಣೆ ಹಾಕಿದ್ದು ಸಾಕು ಹಾಕಿಗೂ ಹಾಕಿ.

Sep 8, 2007

ಬಿಜಿನೆಸ್ ಮಾಡೋದಕ್ಕೆ ಪ್ರಪಂಚದಲ್ಲೀಗ ಬೆಂಗಳೂರೇ ಬೆಸ್ಟ್! ತುಮಕೂರು?

ಬೆ೦ಗಳೂರೇ ಬೆಸ್ಟ್! ತುಮಕೂರು????????
ಇ೦ತಹ ಇನ್ನೂ ಅನೇಕ ಸುದ್ದಿಗಳನ್ನ ನೋಡಿದಾಗ,ಸಿಟ್ಟು,ನೋವು ಎಲ್ಲಾ ಒಟ್ಟೊಟ್ಟಿಗೆ ಬರುತ್ತೆ ಆಗುತ್ತೆ.ಈಗಾಗಲೇ ಕಿಷ್ಕಿ೦ದೆ ಆಗ್ತಾ ಇರೋ ಬೆ೦ಗಳೂರು ಬಗ್ಗೆ ಹಾಗು ಎಲ್ಲಾ ರೀತಿಯ ಅನುಕೂಲ ಹೊ೦ದಿ ಕೂಡ ಮಲತಾಯಿ ಧೋರಣೆಯಿ೦ದ ನರಳುತ್ತಿರುವ ತುಮಕೂರಿನ ಬಗ್ಗೆ.ರಾಜ್ಯದ 16 ಜಿಲ್ಲೆಗಳನ್ನ ಹೆದ್ದಾರಿ ಮುಖಾ೦ತರ ರಾಜಧಾನಿಗೆ ಸೇರಿಸೊ ಈ ತುಮಕೂರು ಬೆ೦ಗಳೂರಿನ ಗೇಟ್ ವೇ ಅ೦ತಾರೆ.ಕಳೆದ ಹತ್ತು ವರ್ಷಗಳಲ್ಲಿ ಬೆ೦ಗಳೂರಿನ ಬೆಳವಣಿಗೆಗೆ ಹೋಲಿಸಿದರೆ ತುಮಕೂರು ಇನ್ನೂ ಅಲ್ಲೇ ಇದೆ.ಅಜಗಜಾ೦ತರ ವ್ಯತ್ಯಾಸ.

ಬಿಜಿನೆಸ್ ಮಾಡೋದಕ್ಕೆ ಪ್ರಪಂಚದಲ್ಲೀಗ ಬೆಂಗಳೂರೇ ಬೆಸ್ಟ್.

ಬೆಂಗಳೂರು, ಸೆಪ್ಟೆಂಬರ್ 07 : ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಬೆಂಗಳೂರಿಗೆ ವಿದಾಯ ಹೇಳುತ್ತೇವೆ ಎಂದು ಐಟಿ ಉದ್ಯಮಿಗಳು ಆಗಾಗ ಬೆದರಿಸುತ್ತಾರೆ. ಆದರೆ ಉದ್ಯಮ ಸ್ಥಾಪನೆಗೆ ಬೆಂಗಳೂರು ಅತ್ಯುತ್ತಮ ನಗರ ಎಂಬುದನ್ನು ಸಮೀಕ್ಷೆಯೊಂದು ಸಮರ್ಥಿಸಿದೆ.ಉದ್ಯಮ ಸ್ಥಾಪನೆಗೆ ಜಗತ್ತಿನ ಅತ್ಯುತ್ತಮ ನಗರಗಳನ್ನು ಗುರ್ತಿಸಲಾಗಿದ್ದು, ಅದರಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಸಿಎನ್ಎನ್-ಟೈಮ್ ವಾರ್ನರ್ ಸಮೂಹದ 'ಬಿಸಿನೆಸ್ 2.0'ನಿಯತಕಾಲಿಕ ತನ್ನ ಜಾಗತಿಕ ಸಮೀಕ್ಷೆಯನ್ನು ಪ್ರಕಟಿಸಿದೆ.ಸಮೀಕ್ಷೆಯಲ್ಲಿ 12 ನಗರಗಳ ಗುರ್ತಿಸಲಾಗಿದ್ದು, ಬೆಂಗಳೂರಿನ ಅನುಕೂಲಗಳ ಬಣ್ಣಿಸಲಾಗಿದೆ. ಇಲ್ಲಿ ಕಡಿಮೆ ಸೌಲಭ್ಯ ಕೇಳುವ ಅತ್ಯುತ್ತಮ ಸಾಫ್ಟ್ ವೇರ್ ತಜ್ಞರು ಇದ್ದಾರೆ ಎಂದು ಬೆಂಗಳೂರು ಬಗ್ಗೆ ಹೇಳಲಾಗಿದೆ.

ಅತ್ಯುತ್ತಮ ನಗರಗಳ ಪಟ್ಟಿ :

1. ಲಂಡನ್
2. ಶಾಂಘೈ
3. ಸಿಂಗಪುರ
4. ಬೆಂಗಳೂರು
5. ಟೋಕಿಯೋ
6. ಹಾಂಗ್ ಕಾಂಗ್
7. ಬಾರ್ಸಿಲೋನಾ
8. ಹೆಲ್ಸಿಂಕಿ
9. ಸಿಯೋಲ್
10. ಸ್ಟಾಕ್ ಹೋಮ್
11. ಟ್ಯಾಲಿನ್
12. ಟೆಲ್ ಅವಿವ್

ದಟ್ಸ್ ಕನ್ನಡ ವಾರ್ತೆsource:www.thatskannada.com

ಕಾ೦ಡೊಮು-ಹಾಕಿ

"ಕಾ೦ಡೋಮುಹಾಕಿ"
ಅರೆರೆ ಇದೇನಿದು ಇದ್ದಕ್ಕಿದ್ದ ಹಾಗೆ ಶ್ರೀಧರ್ ಕುಟು೦ಬ ಯೋಜನೆ ಬಗ್ಗೆ ಮಾತಾಡ್ತಾ ಇದಾರೆ ಅ೦ತೀರಾ!........ಈ ಕೆಳಗಿನ ಲೇಖನ ಓದಿ. ನಿಮಗೇ ಅರ್ಥ ಆಗುತ್ತೆ.ಕಾ೦ಡೋಮುಹಾಕಿ ಸುಖಿ ಕುಟು೦ಬ ನೆಡೆಸುವ ಬುದ್ದಿಜೀವಿಗಳಿಗೊ೦ದು ವಿನೋದದ ಕಚಗುಳಿ. "ಮೋಟುಗೋಡೆಯಾಚೆ" ಬ್ಲಾಗಿನವರಿಗೊ೦ದು ಚೆ೦ದದ ಹೂರಣ

ಜನನ ನಿಯಂತ್ರಿಸುವ ಕಾಂಡೋಮ್ ಹಾಕಿ ರಂಗಕ್ಕೂ ಲಗ್ಗೆ!
ಜಲಂಧರ್, ಸೆಪ್ಟೆಂಬರ್ 05 : ಭಾರತೀಯರಿಗೂ ಕಾಂಡೋಮ್ ಗಳಿಗೂ ನಂಟು ಬೆಳೆದಾಗ ಮಾತ್ರ, ಜನಸಂಖ್ಯೆ ಹತೋಟಿಯಲ್ಲಿರುತ್ತದೆ! ಆ ಮಾತು ಬಿಡಿ, ಕಾಂಡೋಮ್ ಈಗ ಕ್ರೀಡಾರಂಗಕ್ಕೂ ಲಗ್ಗೆ ಹಾಕಿದೆ. ಹಾಕಿ ಸ್ಟಿಕ್‌ಗಳ ರಕ್ಷಣೆಗೆ ಇದು ಬಳಕೆಯಾಗುತ್ತಿದೆ!ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸಿದ್ದರಿಂದಲೇ ಭಾರತೀಯರು, ಸಿಂಹಳೀಯರೊಂದಿಗಿನ ಮ್ಯಾಚ್‌ನಲ್ಲಿ 20 ಮತ್ತು 0 ಅಂತರದಿಂದ ಗೆದ್ದದ್ದು ಎಂಬ ಗುಮಾನಿ ಉಂಟಾಗಿದೆ. ಈ ಬಗ್ಗೆ ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲದಿದ್ದರೂ ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನ ಇದೆ ಎಂಬುದು ಕೆಲವರ ವಾದ.ಅಂದ ಹಾಗೆ, ಭಾರತ ತಂಡ ಉಪಯೋಗಿಸುವ ಹಾಕಿ ಸ್ಟಿಕ್‌ಗಳನ್ನು ಜಲಂಧರ್ ನಲ್ಲಿನ ಆರ್ ಕೆ ಸ್ಪೋರ್ಟ್ ಸಂಸ್ಥೆ ತಯಾರಿಸುತ್ತದೆ. ಆ ಸಂಸ್ಥೆಯ ಎಂಡಿ ಸಂಜಯ್ ಕೋಹ್ಲಿಯವರೆ 'ಕಾಂಡೋಮ್ ಪ್ರಯೋಗದ' ಸೂತ್ರಧಾರಿ.ಹಾಕಿ ಸ್ಟಿಕ್‌ನ ಹುಕ್ ಗೊತ್ತಲ್ಲ, ಸ್ಟಿಕ್‌ನ ಬಹು ಮುಖ್ಯಭಾಗ ಅದೆ. ಅದನ್ನು ಮಲ್ಬರಿ ಗಿಡದ ಕಾಂಡದಿಂದ ತಯಾರಿಸುತ್ತಾರೆ. ಅದನ್ನು ಪ್ರತ್ಯೇಕ ಯಂತ್ರಗಳಿಂದ ಬಗ್ಗಿಸಿ ಹುಕ್‌ಗೆ ಹ್ಯಾಂಡಿಲ್ ಅಳವಡಿಸುತ್ತಾರೆ. ಅದು ಎಷ್ಟೇ ಬಲಿಷ್ಟವಾಗಿದ್ದರೂ ಬಲು ಬೇಗನೆ ಹಾಳಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಬ್ಯಾಟ್ ತಯಾರಿಕಾ ಸಂಸ್ಥೆ, ಹಲವಾರು ಪ್ರಯೋಗಗಳನ್ನು ಮಾಡಿಯಾಯ್ತು. ಮುಂಚೆ ಹುಕ್ಕಿಗೆ ಪ್ಲಾಸ್ಟಿಕ್ ಬಳಸುತ್ತಿದ್ದರು. ಅದು ನಿರೀಕ್ಷಿಸಿದಷ್ಟು ಫಲಕಾರಿಯಾಗಲಿಲ್ಲ. ಈಗ ನೇರವಾಗಿ ಕಾಂಡೋಮ್‌ಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಸ್ಟಿಕ್‌ಗಳೂ ಬಹಳಷ್ಟು ಕಾಲ ಬಾಳಿಕೆ ಬರುತ್ತಿವೆಯಂತೆ. ಹೀಗಂತ ಹೇಳುತ್ತಾರೆ ಸಂಜಯ್ ಕೋಹ್ಲಿಯವರು. ಅಂದಹಾಗೆ ಇದರ ಪೇಟೆಂಟ್ ಕೂಡ ಪಡೆಯಲಾಗಿದೆಯಂತೆ.Source:www.thatskannada.com