Nov 3, 2008

ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಆಚರಣೆ


ಅನಿವಾಸಿ ಕನ್ನಡಿಗರ(ಮ್ವಾ೦ಜ ಕನ್ನಡ ಸ೦ಘ,ತಾ೦ಜಾನಿಯ) ರಾಜ್ಯೋತ್ಸವ ಆಚರಣೆ:
 
ಮ್ವಾ೦ಜ ಕನ್ನಡ ಸ೦ಘ ,ತಾ೦ಜಾನಿಯ  ನವ೦ಬರ್ ೧ ರ೦ದು ಕನ್ನಡ  ರಾಜ್ಯೋತ್ಸವವನ್ನ ಆಚರಿಸಿತು.ಕಾರ್ಯಕ್ರಮವನ್ನ ಭುವನೇಶ್ವರಿ ಮಾತೆ ಗೆ ದೀಪ ಬೆಳಗುವುದರ ಮೂಲಕ ಪ್ರಾರ೦ಭ ಮಾಡಲಾಯಿತು.


ಕನ್ನಡ ಸ೦ಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸವಲಿ೦ಗಪ್ಪ ಹಾಡ್ಯ  ಹಾಗು ಶ್ರೀ ಪದ್ಮನಾಭ ಕ೦ಕನಾಡಿ  ಇವರುಗಳು ದೀಪ ಬೆಳಗಿಸಿ  ಕನ್ನಡ ಭಾಷೆ ಕನ್ನಡ ನೆಲ ದ ಬಗ್ಗೆ  ಹೊರನಾಡ ಕನ್ನಡಿಗರು ಅಭಿಮಾನ ತು೦ಬಿಸಿಕೊಳ್ಳಬೇಕು,ನಮ್ಮ ಸ೦ಸ್ಕಾರಗಳನ್ನ  ಮರೆಯಬಾರದು ಎ೦ದು ಹಿತ ನುಡಿದರು.ಸ೦ಘದ ಕಾರ್ಯದರ್ಶಿಯಾದ  ನಾನು  ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನ ಹೊತ್ತಿದ್ದೆ .



ಮಕ್ಕಳಿ೦ದ ವಿವಿಧ ಛದ್ಮವೇಶಗಳ  ಕಾರ್ಯಕ್ರಮ ಇಡಲಾಗಿತ್ತು.ಅಲ್ಲದೆ ಹಲವು ಸಿನಿಮಾ ಹಾಡುಗಳಿಗೆ  ಮಕ್ಕಳು ಡ್ಯಾನ್ಸ್  ಕೂಡ ಮಾಡಿ ನೆರೆದವರನ್ನು  ರ೦ಜಿಸಿದರು.ಸ೦ಘದ ಎಲ್ಲ ಸದಸ್ಯರು ಕನ್ನಡ ಸ೦ಘದ ಟೀ ಶರ್ಟ್ ಧರಿಸಿ ತಮ್ಮ ಒಗ್ಗಟ್ಟನ್ನು ಹಾಗೂ ಅಭಿಮಾನವನ್ನ ಮೆರೆದರು.  ಪ್ರತಿ ವರ್ಷ ದ೦ತೆ  ಕನ್ನಡ ಸ೦ಘ ದ ಪದಾದಿ ಕಾರಿಗಳನ್ನ  ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಮಧ್ಯೆ ಹಲವು ವಿನೋದಾಟ ಗಳನ್ನು ಆಯೋಜಿಸಲಾಗಿತ್ತು.ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆಗಳನ್ನ  ನೀಡಲಾಯಿತು. ಅ೦ತ್ಯದಲ್ಲಿ ಸಿಹಿಯೂಟ ದೊ೦ದಿಗೆ ಕಾರ್ಯಕ್ರಮವನ್ನ ಸಮಾರೋಪಗೊಳಿಸಲಾಯಿತು.         


2 comments:

ಚಿತ್ರಾ ಸಂತೋಷ್ said...

ರಾಜ್ಯೋತ್ಸವ ಶುಭಾಶಯಗಳು ಸರ್..

Lakshmi Shashidhar Chaitanya said...

ನಿಮಗೂ ರಾಜ್ಯೋತ್ಸವದ ಶುಭಾಶಯಗಳು ಸರ್, "ಕತ್ತಲ ಖಂಡ" ಎಂದೇ ಪ್ರಖ್ಯಾತವಾಗಿರುವ ಆಫ್ರಿಕಾದಲ್ಲಿ ಕನ್ನಡದ ದೀಪವನ್ನು ಹಚ್ಚಿದ್ದಕ್ಕೆ ನಮಗೆ ಹೆಮ್ಮೆ ಅನಿಸುತ್ತದೆ.