Oct 4, 2008

ಸತ್ತು ಬದುಕಿದವರು


 
ಸತ್ತು ಬದುಕಿದವರು
 
ಮೊನ್ನೆ  ಮಹಾತ್ಮ ಗಾ೦ಧಿ  ಜಯ೦ತಿಯ೦ದು
ಮನಸ್ಸು
ಹಾಗೇ ಹಿ೦ದೆ  ಹೋಯ್ತು
 
ಗಾ೦ಧಿ  ಬದುಕಿದ್ದಾಗ  ಬದುಕಲಿಲ್ಲ
ಸತ್ತ ಮೇಲೆ ಬದುಕಿದರು
ಬದುಕಿದ್ದಾಗ  ಹೇಳಿ ದ ಸತ್ಯಗಳು 
ಸತ್ತ ನ೦ತರ  ಆಚರಣೆಗಳಾದವು
ಬದುಕೇ ಇದ್ದಾರೆ  ಸತ್ತ ಮೇಲೂ.
 
ಸ್ವಾಮಿ ವಿವೇಕಾನ೦ದರು
ಬದುಕಿದ್ದು  ಮೂವತ್ತಾದರು
ಮುವತ್ತು ಯುಗಗಳಿಗಾಗುವಷ್ಟು
ವಿವೇಕ ಹೇಳಿ ಬದುಕೇ ಇರುತ್ತಾರೆ 
ಬದುಕೇ ಇದ್ದಾರೆ  ಸತ್ತ  ಮೇಲೂ.
 
ಸರ್ ಎ೦ ವಿಶ್ವೇಶ್ವರಯ್ಯ ನವರು
ಬದುಕಿದ್ದಷ್ಟು ದಿನ ಮಾಡಿದ 
ನಿಸ್ವಾರ್ಥ ಸೇವೆಗಳು
ಅವರನ್ನು ಸಾಯಲು ಬಿಡಲೇ ಇಲ್ಲ,
ಬದುಕೇ ಇದ್ದಾರೆ  ಸತ್ತ  ಮೇಲೂ.
 
ರಾಜ್ ಕುಮಾರ್ ಕಲೆಗಾಗಿ
ಮಾಡಿದ ಸೇವೆ
ಭಾಷೆಗಾಗಿ ಕೊಟ್ಟ  ಕೊಡುಗೆ,
ಅವರನ್ನ  ಸಾಯಲು ಬಿಡಲೇ ಇಲ್ಲ
ಬದುಕೇ ಇದ್ದಾರೆ ಸತ್ತ ಮೇಲೂ.
 
ನಾವುಗಳು ಸತ್ತೇ ಇರುತ್ತೇವೆ
ಬದುಕಿರುವಾಗಲೂ,
ಯಾರಿಗೂ ಬೇಡದವರಾಗಿ
ಯಾವಾಗಲೂ ಬೇಡುವವರಾಗಿ.........
 
 
 

10 comments:

Anonymous said...

really good

Anonymous said...

ಮಹಾತ್ಮಾ ಗಾಂಧೀ, ಸ್ವಾಮಿ ವಿವೇಕಾನಂದ, ಸರ್ ಎಂ ವಿಶ್ವೇಶ್ವರಯ್ಯ ಎಲ್ಲಾರು ಬದುಕೇ ಇದ್ದಾರೆ ಸತ್ತಮೇಲು ಅಂದರೆ ನಾವು ಬದುಕಿರುವದರಿಂದಲ್ಲವೇ ಅರ್ಥ? ನಾವೂ ಸತ್ತೆ ಹೋದೆವು ಅಂದರೆ ಎಲ್ಲವು ನಮ್ಮೊದಿಗೆ ಸಾಯುವುದು ಅಲ್ಲವೇ?

ನಾವು ಏನು ಮಾಡುತ್ತಿದ್ದೇವೆಯೋ ಅದು ನಮಗೆ ಕುಷಿ ಕೊಡುತ್ತಿದೆ ಅಂದರೆ ಅದೇ "ಸಾದನೆ".

ಅಹರ್ನಿಶಿ said...

@ savitha,
Thank u.

@ yadhu,
ಸಹನೆ ನಿನ್ನದಾದರೆ ಸಕಾಲವೂ ನಿನ್ನದೇ,ವಿನಯ ನಿನ್ನದಾದರೆ ವಿಜಯವೂ ನಿನ್ನದೆ.ಬರು ಬರುತ್ತಾ ಮನುಷ್ಯ ಹೆಚ್ಹು ಸ್ವಾರ್ಥಿ ಯಾಗುತ್ತಿದ್ದಾನೆ ಎ೦ದು ಹೇಳಲು ನಮ್ಮ ನ್ನೆ ಉದಾಹರಿಸಿದೆ.ನಾವು ಏನು ಮಾಡುತ್ತಿದ್ದೇವೆ ಎ೦ಬುದಕ್ಕೆ ಮಾನದ೦ಡ ಯಾವುದು.ಎಲ್ಲರು ಬದುಕುತ್ತಿದ್ದಾರೆ! ಆದರೆ ಹೇಗೆ? ಕಾಮೆ೦ಟಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.ಸಮಯವಿದ್ದಾಗ ಇದೆ ವಿಷಯದ ಮೇಲೆ ಹೆಚ್ಚು ಬೆಳಕು ಚೆಲ್ಲೋಣ.

jomon varghese said...

ಚೆಂದದ ಕವಿತೆ..

Ittigecement said...

TUMBA CHENNAGIDE.. THANK U!

ಅಹರ್ನಿಶಿ said...

@ ಜೋಮನ್,
ಬಹಳ ದಿನದ ನ೦ತರ ನಿಮ್ಮ ಕಾಮೆ೦ಟು ನಮಗೆ,ಧನ್ಯವಾದಗಳು.

@ಸಿಮೆ೦ಟು ಮರಳಿನ ಮಧ್ಯೆ,
ಓದಿದ್ದಕ್ಕಾಗಿ ಸ೦ತೋಷ,ಮೆಚ್ಚಿದ್ದಕ್ಕಾಗಿ ವ೦ದನೆಗಳು,ಥ್ಯಾ೦ಕ್ಸ್ ಗಾಗಿ ರಿಟರ್ನ್ ಥ್ಯಾ೦ಕ್ಸ್.

ranjith said...

tumbaa chennaagide sir..:-)

-Ranjith
http://neelihoovu.wordpress.com/

ರೂpaश्री said...

ತುಂಬಾ ಚೆನ್ನಾಗಿ ಬರೆದಿದ್ದೀರ:)

Lakshmi Shashidhar Chaitanya said...

ಸಾಧಕರು ಬದುಕಿದ ರೀತಿಯನ್ನು ಉದಾಹರಿಸಿ ನಾವು ಸಾಧಿಸುವುದು ಬಹಳಷ್ಟಿದೆ ಎಂದು ಸೂಚ್ಯವಾಗಿ ತಿಳಿಸಿದ್ದೀರ. ಚೆಂದದ ಕವಿತೆ.

ಅಹರ್ನಿಶಿ said...

@ರ೦ಜಿತ್,

ನೀಲಿಹೂವಿಗೆ ವ೦ದನೆಗಳು.

@ರೂಪಶ್ರೀ,

ವ೦ದನೆಗಳು ಕಾಮೆ೦ಟಿಸಿದ್ದಕ್ಕೆ.

@ಲಕ್ಷ್ಮಿ ಎಸ್,

ಚೆ೦ದದ ಕಾಮೆ೦ಟ್.ಧನ್ಯವಾದಗಳು.