Sep 5, 2008

ಗಣೇಶೋತ್ಸವ-2008 ಮ್ವಾ೦ಜ,ತಾ೦ಜಾನಿಯ.ನಮ್ ಗಣೇಶ(ಮೈಸೂರಿನಿ೦ದ ಮ್ವಾ೦ಜಾ ಕ್ಕೆ.

ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ನಮ್ ಗಣೇಶನ್ನ ನಾವು ಕೂರ್ಸಿದ್ದೆವು.ನಮ್ ಗಣೇಶ೦ದು ಎನಪ್ಪ ವಿಶೇಷ ಅ೦ದ್ರೆ ಐದು ದಿನ ನಮ್ಮಿ೦ದ ಪೂಜೆ ಮಾಡಿಸಿಕೊಳ್ಳೋದು.ಕಳೆದ ವರ್ಷ ಒ೦ದೇ ದಿನದಲ್ಲಿ ವಿಸರ್ಜನೆ ಮಾಡಿಸಿಕೊ೦ಡಿದ್ದ.ಭಾರತದಿ೦ದ ಆಫ್ರಿಕಾಕ್ಕೆ ನಮ್ಮ ಸದಸ್ಯರಾದ ಪದ್ಮಿನಿ ರಮಾನಾಥ್ ರವರು ಮೈಸೂರಿನಿ೦ದ ತಮ್ಮ ಹ್ಯಾ೦ಡ್ ಬ್ಯಾಗಿನಲ್ಲಿ ಭಧ್ರವಾಗಿ ತ೦ದಿದ್ದರು.ಒ೦ದು ಅಡಿ ಉದ್ದದ ಅ೦ದವಾದ ಮೂರ್ತಿ ನೋಡಲು ಕಣ್ನಿಗೆ ಹಬ್ಬ.

ಆಫ್ರಿಕನ್ನರಿಗೆ ಭಾರತದವರು ಏನು ಮಾಡಿದರು ಕುತೂಹಲ.ಗಣೇಶನನ್ನು ಕೂರಿಸುವ ಹಿ೦ದಿನ ರಾತ್ರಿ ನಾವು ಸಭಾ೦ಗಣದ ಮು೦ದೆ ಮಾವಿನ ತಳಿರು ತೋರಣ ಹಾಗು ಬಾಳೆ ಕ೦ದನ್ನ ಕಟ್ಟಿದ್ದರಿ೦ದ ಹಿಡಿದು ಆನೆಯ ಮುಖವಿರುವ ಮನುಷ್ಯನ೦ತಿರುವ ಮೂರ್ತಿಯನ್ನ ಪ್ರತಿಷ್ಟಾಪಿಸುವವರೆಗೂ ಅವರ ಮುಖ ಸಾವಿರ ಪ್ರಶ್ನೆಗಳ ಸಾಗರ.ಭಾರತೀಯರು ಸಿಕ್ಕ ಸಿಕ್ಕದ್ದನ್ನೆಲ್ಲಾ ಪೂಜಿಸುತ್ತಾರೆ ಅ೦ತಾರೆ.ಹಾವು,ಹಲ್ಲಿ,ಹಸು,ನಾಯಿ,ಸಿ೦ಹ,ಕೋತಿ,ನೀರು,ಗಿಡ,ಬ೦ಡೆ,ಸೂರ್ಯ,ಚ೦ದ್ರ ಇನ್ನೂ ಅನೇಕ.ನಮ್ಮ ದೇವರುಗಳ ಹೆಸರನ್ನ ಕೇಳಿದ್ರೆ ನೆನಪಿನಲ್ಲಿಡಲಾಗದಷ್ಟು ಮುಗ್ಧರು.ಮನುಷ್ಯನ ದೇಹ ಆನೆಯ ತಲೆಯಿರಿವ ದೇವರ ಕ೦ಡ್ರೆ ಇವರಿಗೆ ಸೋಜಿಗ,ಕೌತುಕ ಎಲ್ಲ ಒಮ್ಮೆಲೆ.ನಾವು ಮಾಡುವ ಎಲ್ಲಾ ಕಾರ್ಯಕ್ಕು ಒ೦ದೊ೦ದು ಅರ್ಥವಿದೆ ಎ೦ದಾಗ ಅರ್ಥವಾಗದೆ ತಲೆ ಕೆರೆದು ಕೊಳ್ಳುತ್ತಾರೆ.


ಇರಲಿ ಗಣೇಶನನ್ನ ಪ್ರತಿಷ್ಟಾಪಿಸಿದ್ದಾಯಿತು ಬೆಳಗ್ಗೆ ಪೂಜೆಯೂ ನೆಡೆಯಿತು.ಬೇರೆ ದೇಶವಾದ್ದರಿ೦ದ ಕೆಲಸಕ್ಕೆ ರಜೆ ಇರಲಿಲ್ಲ.ಹೆಚ್ಚು ಜನ ಬರಲಾಗಿರಲಿಲ್ಲ.ಅದೇ ಸ೦ಜೆ ಆರತಿ ಗೆ ನೂರಿಪ್ಪತ್ತಕ್ಕೂ ಹೆಚ್ಚು ಜನ,ಕಿಲ ಕಿಲ ಮಕ್ಕಳು ವಾತಾವರಣವನ್ನ ರ೦ಗೇರಿಸಿದ್ದವು.ಆ೦ಧ್ರದ ಕೆಲವು ಮಿತ್ರರು ಸೇರಿ ಊಟದ ವ್ಯವಸ್ಠೆ ಮಾಡಿದ್ದರು.ಗಣೇಶ ಸಪ್ತ ಸಾಗರ ದಾಟಿ ಆಫ್ರಿಕಾಕ್ಕೆ ಬ೦ದು ವಿರಾಜಮಾನವಾಗಿ ಕ೦ಗೊಳಿಸುತ್ತಿದ್ದ.

ಮೊದಲ ದಿನ ಆ೦ಧ್ರದವರಿ೦ದ,ಮಾರನೇ ದಿನ ತಮಿಳು ಸ೦ಘ್ಹದಿ೦ದ,ನ೦ತರ ಕೇರಳ ಸಮಾಜದಿ೦ದ ಕೊನೇ ದಿನ ನಮ್ಮ ಕನ್ನಡ ಸ೦ಘದಿ೦ದ ಪೂಜೆ ಹಾಗೂ ಮಹಾಪ್ರಸಾದ ಹೀಗೇ ಐದೂ ದಿನವೂ ನಮ್ಮ ಗಣೇಶ ವಿರಾಜಿಸಲಿದ್ದಾನೆ.ಐದನೇ ದಿನ ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

6 comments:

ರೂpaश्री said...

"ತಾ೦ಜಾನಿಯ"ದಲ್ಲಿ ನೀವು ಆಚರಿಸಿದ ಗಣಪನ ಉತ್ಸವದ ಫೋಟೋಗಳು ನೋಡಿ ಭಾಳ ಖುಶಿ ಆಯ್ತು:)

ಅಹರ್ನಿಶಿ said...

ರೂಪಶ್ರೀ ಅವರಿಗೆ ತು೦ಬಾ ಥ್ಯಾ೦ಕ್ಸ್.

MD said...

ಅಂತೂ ಗಣೇಶನನ್ನೇ ಸಪ್ತ ಸಾಗರದಾಚೆ ತೆಗೆದುಕೊಂಡು ಹೋದಿರಲ್ಲಾ!
ನಮ್ಮ ಭಾರತೀಯ ಪರಂಪರೆಯನ್ನು ಬೇರೆ ನೆಲದಲ್ಲಿ ಬಿಂಬಿಸಿದ್ದಕ್ಕೆ ಧನ್ಯವಾದಗಳು ಹಾಗೂ ಸಂತೋಷ ಕೂಡ.

ನಿಮ್ಮಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಯಾಗಲಿಲ್ಲವೇ? ಇದಕ್ಕೇ ನೋಡಿ 'ಮೇರಾ ಭಾರತ ಮಹಾನ್' ಅನ್ನೋದು.

ವಿಕಾಸ್ ಹೆಗಡೆ said...

ಬಲು ಡೀಸೆಂಟು ಸಾರ್ ನಿಮ್ ಗಣೇಶ! :)

ಕನ್ನಡ ಸಂಘ ಅಂತ ಇಂಗ್ಲೀಷಲ್ಲಿ ಮಾತ್ರ ಬರೆದಿರೋದು ಆಭಾಸ ಅನ್ನಿಸ್ತು!

ಅಹರ್ನಿಶಿ said...

ಏನ್ ಮಾಡೋದು ವಿಕಾಸ್,

ಕನ್ನಡದವರೊಟ್ಟಿಗೆ ಎಲ್ಲಾ ಭಾರತೀಯರೂ ಸೇರಿದ್ದರಿ೦ದ ಬೇರೆ ದಾರಿಯಿರಲಿಲ್ಲ.(ಏನ್ ಬರೆದಿದ್ದಾರೆ ಅ೦ತ ಅವರಿಗೆ ಅರ್ಥ ಮಾಡಿಸೋದು ಮತ್ತೊ೦ದು ದೊಡ್ದ ಕೆಲಸ ) ಮ್ವಾ೦ಜ ಕನ್ನಡ ಸ೦ಘ ,ತಾ೦ಜಾನಿಯ ಅ೦ತ ಕನ್ನಡ ದಲ್ಲೇ ಬರೆದ ಟೀ ಶರ್ಟ್ ನ್ನ ಧರಿಸಿದ್ದೆವು.

ಶ್ರೀಧರ್

sa said...

AV,無碼,a片免費看,自拍貼圖,伊莉,微風論壇,成人聊天室,成人電影,成人文學,成人貼圖區,成人網站,一葉情貼圖片區,色情漫畫,言情小說,情色論壇,臺灣情色網,色情影片,色情,成人影城,080視訊聊天室,a片,A漫,h漫,麗的色遊戲,同志色教館,AV女優,SEX,咆哮小老鼠,85cc免費影片,正妹牆,ut聊天室,豆豆聊天室,聊天室,情色小說,aio,成人,微風成人,做愛,成人貼圖,18成人,嘟嘟成人網,aio交友愛情館,情色文學,色情小說,色情網站,情色,A片下載,嘟嘟情人色網,成人影片,成人圖片,成人文章,成人小說,成人漫畫,視訊聊天室,a片,AV女優,聊天室,情色,性愛