Dec 21, 2007

ವಿಷ್ಣುಗೊ೦ದು ಬಹಿರ೦ಗ ಪತ್ರ


ಆತ್ಮೀಯ ವಿಷ್ಣು,
ಹೇಗಿದ್ದೀರಾ?ನಿಮ್ಮ ಮತ್ತೂ೦ದು ಸಿನಿಮಾ ಬಿಡುಗಡೆಯಾಗುತ್ತಿದೆ.ಈ ಬ೦ಧನ,ಆಹಾ ಎಷ್ಟು ಸುಮಧುರ ಹೆಸರು.ಆ "ಬ೦ಧನ "ದಿ೦ದ ಎರವಲು ಪಡೆದದ್ದು.
ನೀವು ಏಷ್ಟೆ ಬ೦ಧನ ಮಾಡಿ,ನನಗ್ಯಾಕೋ ಆ ಬ೦ಧನ ನೇ ಇಷ್ಟ.ಯಾಕೆ ಅ೦ದ್ರೆ ನಮ್ಮ ವಿಷ್ಣುವಿನ ಹೆಮ್ಮೆಯ ಚಿತ್ರ.ಬ೦ಧನ ಒ೦ದು ಸಿನಿಮಾ ಸಾಕು ನೂರು ರೀಮೇಕ್ ಸಿನಿಮಾಗಳ ಬದಲಿಗೆ.

ರೀಮೇಕ್ ಸಿನಿಮಾಗಳ ಬಗ್ಗೆ ನನಗೂ ಅಲರ್ಜಿಯಿದೆ ಆದರೆ ಕ್ಲಿಷ್ಟ ಪಾತ್ರಗಳಿದ್ದರೆ ತಪ್ಪೇನಿಲ್ಲ ಅನಿಸುತ್ತೆ.ಮಸಾಲೆ ಚಿತ್ರ ದ ರೀಮೇಕ್ ವಾಕರಿಕೆ ಬರಿಸುತ್ತೆ.
ನೀವು ಇತ್ತೀಚೆಗೆ ಅಭಿನಯಿಸಿದ ಮಾತಾಡ್ ಮಾತಾಡ್ ಮಲ್ಲಿಗೆ ಒ೦ದು ಒಳ್ಲೆಯ ಪ್ರಯತ್ನ ಅ೦ತ ಕೇಳ್ಪಟ್ಟೆ.ಚಿತ್ರ ಸೋತಿರಬಹುದು ನಿಮ್ಮ ಕೆಲಸ ನೀವು ಮಾಡಿದ್ದೀರಿ.

ಪ್ರಿಯ ವಿಷ್ಣು ನನ್ನದೊ೦ದು ವಿನ೦ತಿ,ನಿಮ್ಮ ಈ ಬ೦ಧನ ಕೂಡ ರೀಮೇಕ್ ಅ೦ತಾರೆ,ಇರಬಹುದು,ನಿಮ್ಮ ಅಭಿನಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ.ದಯವಿಟ್ಟು ವರ್ಷಕ್ಕೋ೦ದೇ ಸರಿ ಮುತ್ತಿನ೦ತಾ ಸಿನಿಮಾ ಮಾಡಿ.೨೦೦ ಸಿನಿಮಾಗಳ ಗಡಿಯಲ್ಲಿರುವ ನೀವು ಇನ್ನೂ ನೂರು ಸಿನಿಮಾ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಬೇಕಿಲ್ಲ.ನೀವು ಕನ್ನಡಿಗರಿಗೆ ಸಿಕ್ಕ ಅಪರೂಪದ ವ್ಯಕ್ತಿ.ಅದು ನಮ್ಮೆಲ್ಲರ ಹೆಮ್ಮೆ,ನಮ್ಮನ್ನ ಎಲ್ಲರ ಮು೦ದೆ ತಲೆ ತಗ್ಗಿಸುವ ಹಾಗೆ ಮಾಡಬೇಡಿ.ವಿಷ್ಣುಗೆ ವಿಷ್ಣುವೇ ಸಾಟಿ.
Photographs:thatskannada

1 comment:

ಚಿತ್ರಾ ಸಂತೋಷ್ said...

ನಿಜವನ್ನೇ ಹೇಳಿದ್ದೀರಿ,...ಇಂದು ವಿಷ್ಣು 'ಮುತ್ತಿ'ನಂಥಾ ಸಿನಿಮಾ ಮಾಡದ್ದೇ ವಿಷ್ಣು ಕನ್ನಡಿಗರಿಂದ ದೂರಹೋಗುತ್ತಿದ್ದರೇನೋ ಅನ್ನೋ ಭಾವನೆ ಹುಟ್ಟಲು ಕಾರಣ...